ಭಾರತಕ್ಕೆ ಕಾಲಿಟ್ಟ 26/11 ಮಾಸ್ಟರ್ ಮೈಂಡ್‌ ತಹವ್ವೂರ್​ ರಾಣಾ NIA ವಶಕ್ಕೆ; ಮುಂದೇನು?

author-image
Bheemappa
Updated On
ಭಾರತಕ್ಕೆ ಕಾಲಿಟ್ಟ 26/11 ಮಾಸ್ಟರ್ ಮೈಂಡ್‌ ತಹವ್ವೂರ್​ ರಾಣಾ NIA ವಶಕ್ಕೆ; ಮುಂದೇನು?
Advertisment
  • ರಾಣಾ ಇರೋ ಜೈಲಿನ ಕೊಠಡಿಗೆ ಎಷ್ಟು ಅಧಿಕಾರಿಗಳಿಗೆ ಪ್ರವೇಶ ಇರುತ್ತೆ?
  • ಭಾರತದ ಹದಿನೇಳು ವರ್ಷಗಳ ರಾಜತಾಂತ್ರಿಕ ಹೋರಾಟಕ್ಕೆ ಜಯ ಸಿಕ್ಕಿದೆ
  • ತಹವ್ವೂರ್ ರಾಣಾಗೆ ಏನೆಲ್ಲಾ ಪ್ರಶ್ನೆಗಳನ್ನ ಎನ್​ಐಎ ಸಿಬ್ಬಂದಿ ಕೇಳಲಿದ್ದಾರೆ?

ನವದೆಹಲಿ: ವಾಣಿಜ್ಯ ನಗರಿ ಮುಂಬೈ ಮೇಲೆ 2008 ನವೆಂಬರ್ 26 ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್​ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಎನ್​ಐಎ ಅಧಿಕಾರಿಗಳು ಕರೆತಂದಿದ್ದಾರೆ. 17 ವರ್ಷಗಳ ಭಾರತದ ರಾಜತಾಂತ್ರಿಕ ಹೋರಾಟಕ್ಕೆ ಜಯ ಸಿಕ್ಕಿದೆ.

ಭಯೋತ್ಪಾದಕ ತಹವ್ವೂರ್​ ರಾಣಾನನ್ನು ದೆಹಲಿಗೆ ಕರೆತಂದಿರುವ ಎನ್​ಐಎ ಅಧಿಕಾರಿಗಳು ತಿಹಾರ್​ ಜೈಲಿನ ಸ್ಪೆಷಲ್ ಸೆಲ್​ನಲ್ಲಿ ಕೂಡಿ ಹಾಕಲಿದ್ದಾರೆ. ಜೈಲಿನ ನೆಲಮಹಡಿ ಕೊಠಡಿ ಇದಾಗಿರಲಿದ್ದು ಈ ಕೊಠಡಿಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್​ ಆಗಿರುವ ರಾಣಾ ಇರುವಂತ ಕೊಠಡಿ ಬಳಿಗೆ ಯಾರನ್ನೂ ಬಿಡುವುದಿಲ್ಲ. ಎನ್​​ಐಎ ಮುಖ್ಯಸ್ಥ ಸದಾನಂದ ದಾಟೆ‌ ಸೇರಿ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಕೋರ್ಟ್ ತಹವ್ವೂರ್​ ರಾಣಾಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಜೈಲಿಗೆ ವರ್ಗಾಯಿಸಲಾಗುತ್ತದೆ.

publive-image

ಎನ್​ಐಎ ವಿಚಾರಣೆ ಹೇಗಿರುತ್ತೆ..?
ಎನ್​ಐಎ ಅಧಿಕಾರಿಗಳು ಮೊದಲಿಗೆ ತಹವ್ವೂರ್​ ರಾಣಾನನ್ನು ವಶಕ್ಕೆ ಪಡೆಯಲಿದ್ದಾರೆ. ಇದಾದ ಮೇಲೆ ಬಂಧನದ ಪ್ರಕ್ರಿಯೆಗಳನ್ನ ಪೂರ್ಣಗೊಳಿಸುವರು. ಈ ಪ್ರಕ್ರಿಯೆ ಮುಗಿದ ನಂತರ ರಿಮ್ಯಾಂಡ್ ಅರ್ಜಿಯ ಸಿದ್ಧತೆ ಮಾಡಿ, ವಿಶೇಷ ನ್ಯಾಯಾಲಯದ ಎದುರು ತಹವ್ವೂರ್​ ರಾಣಾನನ್ನು ಹಾಜರು ಪಡಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಮುಗಿದ ಮೇಲೆಯೇ ಎನ್​ಐಎ ಅಧಿಕಾಗಳು ರಾಣಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವರು.

ಇದನ್ನೂ ಓದಿ:ಮುಂಬೈ 26/11 ದಾಳಿಯ ಮಾಸ್ಟರ್​ ಮೈಂಡ್ ಗಡಿಪಾರು.. ಇಂದು ಮಧ್ಯಾಹ್ನ ಭಾರತಕ್ಕೆ ರಾಣಾ!

publive-image

ಈಗಾಗಲೇ ಮುಂಬೈ ದಾಳಿ ಕುರಿತು ತನಿಖೆಯನ್ನ ಮಾಡಲಾಗಿದ್ದರಿಂದ ಮೊದಲಿನ ಸಾಕ್ಷ್ಯಾಧಾರಗಳ ಮೇಲೆ ಎನ್​ಐಎ ತಹವ್ವೂರು ರಾಣಾನನ್ನು ವಿಚಾರಣೆ ಮಾಡಲಿದೆ. ವಿಚಾರಣೆ ವೇಳೆ ದಾಳಿಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು. ಈ ಹಿಂದೆ ಎಷ್ಟು ಬಾರಿ ಭಾರತಕ್ಕೆ ಬಂದು ಹೋಗಿದ್ದಾನೆ. ಯಾರ ಯಾರ ಸಂಪರ್ಕಗಳು ಇದ್ದವು. ದಾಳಿ ಹೇಗೆ ಮಾಡಲಾಯಿತು ಎನ್ನುವ ಪ್ರಶ್ನೆಗಳನ್ನು ಎನ್​ಐಎ ಅಧಿಕಾರಿಗಳು ಕೇಳಲಿದ್ದಾರೆ.

ರಾಣಾ ನೆಟ್​ವರ್ಕ್​ ಅನ್ನು ಅಧಿಕಾರಿಗಳು ಬಹಿರಂಗ ಪಡಿಸಲು ಪ್ರಯತ್ನ ಮಾಡಲಿದ್ದಾರೆ. ಉಗ್ರ ಬೆಂಬಲಿಗರು, ಸ್ಲೀಪರ್ ಸೆಲ್​ಗಳ ಬಗ್ಗೆಯೂ ವಿಚಾರಣೆ ನಡೆಸುವರು. ಸದ್ಯದ ಪರಿಸ್ಥಿತಿಯಲ್ಲಿ ರಾಣಾ ಎಷ್ಟು ಌಕ್ಟಿವ್ ಇದ್ದಾನೆ, ಈಗಲೂ ಭಯೋತ್ಪಾದಕರ ಜೊತೆ ಸಂಪರ್ಕದಲ್ಲಿ ಇದ್ದಾನಾ ಎಂದು ಎಲ್ಲ ಆಯಾಮಗಳಿಂದಲೂ ವಿಚಾರಣೆ ಮಾಡಲಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment