ಟ್ರಂಪ್ ಬಂದ ಬೆನ್ನಲ್ಲೇ ಭಾರತಕ್ಕೆ ದೊಡ್ಡ ಸಕ್ಸಸ್.. ಉಗ್ರ ರಾಣಾನ ಹಸ್ತಾಂತರಿಸಲು ಅಮೆರಿಕ ಗ್ರೀನ್ ಸಿಗ್ನಲ್..!

author-image
Ganesh
Updated On
ಟ್ರಂಪ್ ಬಂದ ಬೆನ್ನಲ್ಲೇ ಭಾರತಕ್ಕೆ ದೊಡ್ಡ ಸಕ್ಸಸ್.. ಉಗ್ರ ರಾಣಾನ ಹಸ್ತಾಂತರಿಸಲು ಅಮೆರಿಕ ಗ್ರೀನ್ ಸಿಗ್ನಲ್..!
Advertisment
  • ಅಮೆರಿಕದ ಸುಪ್ರೀಂ ಕೊರ್ಟ್​ನಿಂದ ಅನುಮೋದನೆ
  • ಮುಂಬೈ ದಾಳಿಯ ಭಯೋತ್ಪಾದಕ ತಹವ್ವುರ್ ರಾಣಾ
  • ತುಂಬಾ ವರ್ಷಗಳಿಂದ ಹಸ್ತಾಂತರಿಸುವಂತೆ ಭಾರತ ಒತ್ತಾಯ

ಮುಂಬೈ ದಾಳಿಯ ಭಯೋತ್ಪಾದಕ, ಅಪರಾಧಿ ತಹವ್ವುರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್ (US Supreme Court) ಅನುಮೋದನೆ ನೀಡಿದೆ.

ಯಾರು ಈ ರಾಣಾ..?

ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ತುಂಬಾ ದಿನಗಳಿಂದ ಭಾರತ ಒತ್ತಾಯಿಸುತ್ತಿತ್ತು. 2008ರ ಮುಂಬೈ ಅಟ್ಯಾಕ್​​ ಪ್ರಕರಣದಲ್ಲಿ ತಹವ್ವುರ್ ರಾಣಾ ಭಾರತಕ್ಕೆ ಬೇಕಾಗಿದ್ದಾನೆ. ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಆತ ಕಾನೂನು ಹೋರಾಟ ನಡೆಸಿದ್ದ.

ಇದನ್ನೂ ಓದಿ: BIGG BOSS ಗ್ರ್ಯಾಂಡ್ ಫಿನಾಲೆ ಸ್ಟೇಜ್ ಮೇಲೆ ಕಿಚ್ಚ ಸುದೀಪ್ ಸಖತ್ ಸ್ಟೆಪ್ಸ್.. ಫುಲ್​ ಕ್ಲಾಸ್​ ಈ ‘ಮ್ಯಾಕ್ಸ್’

ಕೆಳನ್ಯಾಯಾಲಯಗಳಲ್ಲಿ ಹಿನ್ನಡೆಯಾದ ಕಾರಣ ಅಮೆರಿಕದ ಸುಪ್ರೀಂ ಕೋರ್ಟ್​ಗೆ ಹೋಗಿದ್ದ. ಆತನಿಗಿದ್ದ ಕೊನೆಯ ಅವಕಾಶ ಕೂಡ ಇದೀಗ ಮುಚ್ಚಿದೆ. ಅಮೆರಿಕದ ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ಸೋತ ನಂತರ ಸುಪ್ರೀಂ ಕೋರ್ಟ್​ಗೆ ಹೋಗಿದ್ದ.

ಆರೋಪಗಳು ಏನು?

26/11 ದಾಳಿ ಮಾಸ್ಟರ್​ ಮೈಂಡ್​​ಗಳಲ್ಲಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ಕೂಡ ಹೌದು. ಈತನಿಗೆ ರಾಣಾ ಸಹಾಯ ಮಾಡಿದ್ದಾನೆ. 60 ವರ್ಷದ ರಾಣಾನನ್ನು 2009ರಲ್ಲಿ ಚಿಕಾಗೋದಲ್ಲಿ ಬಂಧಿಸಲಾಗಿತ್ತು. ಸದ್ಯ ಲಾಸ್ ಏಂಜಲಿಸ್​ನ ಜೈಲಿನಲ್ಲಿದ್ದಾನೆ. ಐಎಸ್‌ಐ ಮತ್ತು ಲಷ್ಕರ್-ಎ-ತೊಯ್ಬಾ ಜತೆ ನಿಟಕ ಸಂಬಂಧ ಹೊಂದಿರುವ ಆರೋಪ ಇದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯ ಕೂಡ ಹೌದು.

2008ರಲ್ಲಿ ಮುಂಬೈನಲ್ಲಿ ದಾಳಿ

ನವೆಂಬರ್ 26, 2008 ರಂದು ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಮಂದಿ ಜೀವ ಕಳೆದುಕೊಂಡಿದ್ದಾರೆ. 10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು 60 ಗಂಟೆಗೂ ಹೆಚ್ಚು ಕಾಲ ಸರಣಿ ದಾಳಿ ಮಾಡಿದ್ದರು.

ಇದನ್ನೂ ಓದಿ: ಲಾಯರ್ ಜಗದೀಶ್, ಮಗ, ಗನ್​ಮ್ಯಾನ್​ ಅರೆಸ್ಟ್​.. ಕೋರ್ಟ್​ಗೆ ಹಾಜರು ಪಡಿಸಲಿರೋ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment