/newsfirstlive-kannada/media/post_attachments/wp-content/uploads/2025/01/Tahawwur-Rana.jpg)
ಬೆಂಗಳೂರು: 26/11 ಬ್ಲಾಸ್ಟ್ ಆರೋಪಿ ತಹಾವುರ್ ರಾಣಾನನ್ನು ಅಮೆರಿಕಾದಿಂದ ಇವತ್ತೇ ಭಾರತಕ್ಕೆ ಕರೆತರುವ ಸಾದ್ಯತೆ ಇದೆ. ಅಮೆರಿಕಾದಿಂದ ತಹಾವುರ್ ರಾಣಾ ಗಡಿಪಾರು ಮಾಡಿ ಆದೇಶ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ.
ಎರಡು ಜೈಲುಗಳು ಸಿದ್ಧ..!
2019ರಿಂದಲೂ ರಾಣಾನನ್ನ ಭಾರತಕ್ಕೆ ಕರೆ ತರುವುದಕ್ಕೆ ಪ್ರಯತ್ನ ನಡೆದಿತ್ತು. ಕಳೆದ ಫೆಬ್ರವರಿಯಲ್ಲಿ ರಾಣಾನನ್ನ ಭಾರತಕ್ಕೆ ಒಪ್ಪಿಸುವ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ತಹಾವುರ್ ರಾಣಾಗಾಗಿ ಭಾರತದಲ್ಲಿ ಎರಡು ಜೈಲುಗಳು ಸಿದ್ಧ ಮಾಡಿಕೊಳ್ಳಲಾಗಿದೆ. ದೆಹಲಿ ಹಾಗೂ ಮುಂಬೈನ ಜೈಲುಗಳಲ್ಲಿ ಉಗ್ರನನ್ನ ಇಡಲು ಸಿದ್ಧತೆ ನಡೆಸಲಾಗಿದೆ. ರಾಣಾನನ್ನ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ‘ಕರ್ಣ’ ಸೀರಿಯಲ್ನಲ್ಲಿ ಬಿಗ್ ಸ್ಟಾರ್ಸ್ ನಟಿಯರೇ ಏಕೆ? ತಂಡದ ಹಿಂದಿನ ಗುಟ್ಟೇನು ಗೊತ್ತಾ?
ಕೆನಡಾ ನಾಗರೀಕನಾಗಿರುವ ಪಾಕಿಸ್ತಾನಿ ಉಗ್ರ ತಹಾವುರ್ ರಾಣಾ, 26/11 ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ಗಳಲ್ಲಿ ಒಬ್ಬ. ಲಷ್ಕರ್ ಏ ತೋಯ್ಬಾ ಸಕ್ರಿಯ ಸದಸ್ಯನಾಗಿರುವ ತಹಾವುರ್ ರಾಣಾ, ಐಎಸ್ಐ ಅಧಿಕಾರಿ ಮೇಜರ್ ಇಕ್ಬಾಲ್ನ ಅತ್ಯಾಪ್ತನಾಗಿದ್ದ. ಡೇವಿಡ್ ಕೋಲ್ಮನ್ ಹೆಡ್ಲಿಗೆ ಪಾಸ್ಪೋರ್ಟ್ ಒದಗಿಸಿಕೊಟ್ಟಿದ್ದ. ಇದೇ ಪಾಸ್ಪೋರ್ಟ್ ಬಳಸಿ ಹೆಡ್ಲಿ, ಭಾರತಕ್ಕೆ ಬಂದು ಹೋಗಿದ್ದ. ಭಾರತಕ್ಕೆ ಬಂದು ದಾಳಿ ಮಾಡಲು ಟಾರ್ಗೆಟ್ಗಳನ್ನು ಗುರುತಿಸಿಕೊಂಡು ಹೋಗಿದ್ದ.
ಇನ್ನು, ಖುದ್ದು ರಾಣಾ ಕೂಡ ಸ್ಫೋಟಕ್ಕೂ ಮುನ್ನ ಮುಂಬೈ ಬಂದು ಹೋಗಿರುವ ಮಾಹಿತಿ ಇದೆ. 2008ರ ನವೆಂಬರ್ 11 ರಿಂದ 21ರ ನಡುವೆ ಮುಂಬೈ ಬಂದು ಹೋಗಿದ್ದ. ಈ ವೇಳೆ ಪೋವಾಯ್ನ ರೆನೈಸಾನ್ಸ್ ಹೋಟೆಲ್ನಲ್ಲಿ ರಾಣಾ ತಂಗಿದ್ದ. 2008ರ ನವೆಂಬರ್ 26ರಂದು ಈ ಟಾರ್ಗೆಟ್ಗಳಲ್ಲೇ ಬ್ಲಾಸ್ಟ್ ನಡೆದಿದ್ದವು. ದಾಳಿ ನಂತರ ತಹಾವುರ್ ರಾಣಾ ಸಮರ್ಥಿಸಿಕೊಂಡಿದ್ದ. ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆಯ ಉನ್ನತ ಗೌರವ ಕೊಡಬೇಕೆಂದಿದ್ದ.
ಇದನ್ನೂ ಓದಿ: 9 ಸಿಕ್ಸರ್, 7 ಬೌಂಡರಿ.. ಕೇವಲ 39 ಎಸೆತದಲ್ಲಿ ಸ್ಫೋಟಕ ಶತಕ.. ಐಪಿಎಲ್ನಲ್ಲಿ ಹೊಸ ದಾಖಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ