Advertisment

ಅಂಬಾನಿ ಶಾಲೆಯಲ್ಲಿ ಕರೀನಾ, ಸೈಫ್ ಅಲಿ ಖಾನ್ ಪುತ್ರನ ವಿದ್ಯಾಭ್ಯಾಸ; ತಿಂಗಳಿಗೆ ಫೀಸ್ ಎಷ್ಟು ಲಕ್ಷ?

author-image
Gopal Kulkarni
Updated On
ಅಂಬಾನಿ ಶಾಲೆಯಲ್ಲಿ ಕರೀನಾ, ಸೈಫ್ ಅಲಿ ಖಾನ್ ಪುತ್ರನ ವಿದ್ಯಾಭ್ಯಾಸ; ತಿಂಗಳಿಗೆ ಫೀಸ್ ಎಷ್ಟು ಲಕ್ಷ?
Advertisment
  • ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಸೈಫ್, ಕರೀನಾ ಪುತ್ರನ ವಿದ್ಯಾಭ್ಯಾಸ
  • ತೈಮೂರ್ ಖಾನ್​ ವಿದ್ಯಾಭ್ಯಾಸಕ್ಕಾಗಿ ವರ್ಷಕ್ಕೆ ಎಷ್ಟು ಫೀಸ್ ಕಟ್ಟಬೇಕು ಗೊತ್ತಾ?
  • ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಫೀಸ್ ಕೇಳಿದ್ರೆನೇ ತಲೆ ತಿರುಗೋದು ಪಕ್ಕಾ!

ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಪುತ್ರ ತೈಮೂರ್ ಅಲಿಖಾನ್​ ಅತ್ಯಂತ ಪ್ರೀತಿಯ ಸೆಲೆಬ್ರೆಟಿ ಪುತ್ರ. ಅವನು ಹುಟ್ಟಿದಾಗಿನಿಂದಲೂ ಜನರು ಅವನ ಮುದ್ದು ಮುಖ, ನೀಲಿ ಕಣ್ಣು ಮತ್ತು ಅವನ ತುಂಬುಗಲ್ಲವನ್ನು ಕಂಡ ಕರೀನಾ ಹಾಗೂ ಸೈಫ್ ಅಭಿಮಾನಿಗಲು ಫಿದಾ ಆಗಿ ಹೋಗಿದ್ದರು. ಎಲ್ಲರೂ ಬಾಲಿವುಡ್​ನ ದಂತಕತೆ ದಿವಂಗತ ರಾಜ್​ ಕಪೂರ್​ ಅವರಿಗೆ ಹೋಲಿಕೆ ಮಾಡಿ ಮಾತನಾಡುತ್ತಿದ್ದರು.

Advertisment

ಆರಂಭದಲ್ಲಿ ನಿಮ್ಮ ಪುತ್ರ ಮುಂದೆ ನಿಮ್ಮಂತೆ ನಟನಾಗುತ್ತಾನಾ ಎಂದು ಕೇಳಿದವರಿಗೆಲ್ಲಾ, ಈ ಜಗತ್ತಿನಲ್ಲಿ ಅವನಿಗೆ ಏನಾಗಬೇಕು ಎಂಬ ಆಸೆಯಿದೆಯೋ ಅದೇ ಆಗಲಿ ಎಂದಿದ್ದರು ಸೈಫ್. ಕರೀನಾ ಕಪೂರ್ ಮಾತ್ರ ಅವನು ತಮ್ಮ ತಾತ ಟೈಗರ್ ಪಟೌಡಿ ಮನಸ್ಸೂರ್ ಅಲಿಖಾಣ್​ರನ್ನೇ ಹೋಲುತ್ತಾನೆ. ಅವರ ಕ್ರಿಕೆಟ್ ಪರಂಪರೆಯನ್ನು ಮುಂದುವರಿಸುತ್ತಾನೆ ಎಂದಿದ್ದರು. ಸದ್ಯ ಅದೆಲ್ಲದರ ಆಚೆ ಸದ್ಯ ತೈಮೂರ್ ಖಾನ್​ ಇನ್ನೂ ಬಾಲ್ಯದ ಅಂಗಳದಲ್ಲಿದ್ದಾನೆ. ಶಾಲೆಯೂ ಈಗ ಮಹತ್ವದ ಪಾತ್ರ ಅವನ ಜೀವನದಲ್ಲಿ ವಹಿಸಲಿದೆ. ಸದ್ಯ ತೈಮೂರ್​ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದಾನೆ . ಅವನ ತಮ್ಮ ಜೇಹ್ ನೀತಾ ಮುಖೇಶ್ ಅಂಬಾನಿ ಜೂನಿಯರ್ ಸ್ಕೂಲ್​ನಲ್ಲಿ ಕಲಿಯುತ್ತಿದ್ದಾನೆ.

publive-image

ಇದನ್ನೂ ಓದಿ:Pushpa 2: The Rule ಒಟಿಟಿ ರಿಲೀಸ್​ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕರು..!

ಉಳಿದ ಸ್ಟಾರ್ ಮಕ್ಕಳಂತೆ ಸೈಫ್ ಕರೀನಾ ಕೂಡ ಧೀರೂಭಾಯಿ ಅಂಬಾನಿಯ ಶಾಲೆಯನ್ನು ಇಷ್ಟಪಟ್ಟಿದ್ದಾರೆ. 2003ರಲ್ಲಿ ಶುರುವಾದ ಈ ಶಾಲೆಯಲ್ಲಿ ಅತಿಹೆಚ್ಚು ಕಲಿತದ್ದು ಸ್ಟಾರ್ ಮಕ್ಕಳೇ. ವಿಶ್ವದ ಅತ್ಯುದ್ಭುತ ಶಿಕ್ಷಣ ನೀಡುವುದರಲ್ಲಿ ಹೆಸರು ಮಾಡಿರುವ ಶಾಲೆಯಲ್ಲಿ ಸದ್ಯ ಸೈಫ್ ಪು್ರ ತನ್ನ ಶೈಕ್ಷಣಿಕ ಆರಂಭದ ದಿನಗಳನ್ನು ಕಳೆಯುತ್ತಿದ್ದಾನೆ.

Advertisment

ಇದನ್ನೂ ಓದಿ:ಡಿವೋರ್ಸ್‌ ವದಂತಿಗೆ ಹೊಸ ಟ್ವಿಸ್ಟ್‌; ಮಗಳ ಶಾಲೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರೈ ದಂಪತಿ 

ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಐ ಶಾಲೆಯ ಫೀಸ್​ ಬಲ್ಲ ಮೂಲಗಳು ಹೇಳುವ ಪ್ರಕಾರ ಇಲ್ಲಿ ಫೀಸ್ ಆರಂಭವಾಗುವುದೇ 1 ಲಕ್ಷದಿಂದ 20 ಲಕ್ಷಗಳ ರೂಪಾಯಿವರೆಗೆ. ಕ್ಲಾಸ್​ನಿಂದ ಕ್ಲಾಸ್​ಗೆ ಫೀಸ್​ನ ಸ್ಟ್ರಕ್ಚರ್ ಬದಲಾಗುತ್ತದೆ. ಎಲ್​​ಕೆಜಿಯಿಂದ 7ನೇ ತರಗತಿಯವರೆಗೆ ತಿಂಗಳಿಗೆ 1.70 ಲಕ್ಷ ರೂಪಾಯಿ ಇದೆ. 8 ರಿಂದ 10ನೇ ಕ್ಲಾಸ್​ವರೆಗೀನ ಫೀಸ್​ ತಿಂಗಳಿಗೆ 4.48 ಲಕ್ಷ ರೂಪಾಯಿ ಇದ್ರೆ. 11 ರಿಂದ 12ನೇ ತರಗತಿಯ ಮಕ್ಕಳ ಫೀಸ್ ತಿಂಗಳಿಗೆ 9.65 ಲಕ್ಷ ರೂಪಾಯಿ ಇದೆ. ಸದ್ಯ ತೈಮೂರ್​ ತಂದೆ ತಾಯಿಗಳು 1.70 ಲಕ್ಷ ರೂಪಾಯಿ ಕೊಟ್ಟು ತೈಮೂರ್​ನನ್ನು ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿ ಕಲಿಸುತ್ತಿದ್ದಾರೆ. ಅಂದ್ರೆ ವರ್ಷಕ್ಕೆ ಸುಮಾರು 20 ಲಕ್ಷ ರೂಪಾಯಿ ಫೀಸ್ ನೀಡುತ್ತಿದ್ದಾರೆ ಸೈಫ್ ಹಾಗೂ ಕರೀನಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment