Advertisment

ಮಾತನಾಡಲು, ಸೆಕ್ಸ್‌ ಮಾಡಲು ಒಂದೊಂದು ರೇಟ್​ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್‌ಗೆ ಹೋದ ಗಂಡನಿಗೆ ಏನಾಯ್ತು?

author-image
Gopal Kulkarni
Updated On
ಮಾತನಾಡಲು, ಸೆಕ್ಸ್‌ ಮಾಡಲು ಒಂದೊಂದು ರೇಟ್​ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್‌ಗೆ ಹೋದ ಗಂಡನಿಗೆ ಏನಾಯ್ತು?
Advertisment
  • ದೈಹಿಕ ಮಿಲನಕ್ಕೂ, ಮಾತನಾಡುವುದಕ್ಕೂ ದುಡ್ಡು ಕೇಳಿದ ಪತ್ನಿ
  • ಪೀಡಕ ಪತ್ನಿಯಿಂದ ನೊಂದು ಕೋರ್ಟ್​ ಮೆಟ್ಟಿಲೇರಿದ ಪತಿ
  • ವಿಚಿತ್ರ ಪ್ರಕರಣವನ್ನು ವಿಚಾರಣೆ ಮಾಡಿ ಕೋರ್ಟ್ ಹೇಳಿದ್ದೇನು?

ತೈಪೈ:  ಕಾಯಾ ವಾಚಾ ಮನಸಾ ನಾನು ನಿನಗೆ ನೀನು ನನಗೆ ಅನ್ನೋ ಬಾಂಧವ್ಯವೇ ಮದುವೆಯ ಪ್ರೇಮದ ಮೊದಲ ಮೆಟ್ಟಿಲು. ತನು ಮನವೆಲ್ಲವೂ ಒಂದಾದಗಲೇ ದಾಂಪತ್ಯಕ್ಕೊಂದು ಅರ್ಥ ಬರೋದು. ಇಂತಹ ಮೌಲ್ಯಗಳ ಬುನಾದಿಯ ಮೇಲೆಯೇ ದಾಂಪತ್ಯವೆಂಬ ದೀರ್ಘ ಬಾಳುವಿಕೆಯ ಕಟ್ಟಡ ನಿಂತಿರುತ್ತದೆ. ಇಂತಹ ಬಾಂಧವ್ಯಗಳು ಹೆಚ್ಚು ಕಾಣುವುದು ಭಾರತದಲ್ಲಿ. ಆದರೆ ಗೊರಕೆ ಹೊಡೆದ ಎನ್ನುವ ಕಾರಣಕ್ಕೆ ವಿಚ್ಛೇದನ ಪಡೆದ ಪ್ರಕರಣಗಳನ್ನು ನಾವು ಪಾಶ್ಚಾತ್ಯ ದೇಶಗಳಲ್ಲಿ ನೋಡುತ್ತೇವೆ. ಇದೇ ಮಾದರಿಯ ಒಂದು ಘಟನೆ ತೈವಾನ್​ನಲ್ಲಿ ನಡೆದಿದೆ ಎಲ್ಲರೂ ಉಬ್ಬೇರುವಂತೆ ಮಾಡಿದೆ.

Advertisment

ಇದನ್ನೂ ಓದಿ: ತರುಣ್ ಸುಧೀರ್, ಸೋನಲ್ ಮೊಂತೆರೊ ಆರತಕ್ಷತೆ; ಯಾರೆಲ್ಲಾ ಸ್ಟಾರ್‌ ಬಂದ್ರು? ಫೋಟೋಗಳಲ್ಲಿ ನೋಡಿ! 

ದೈಹಿಕ ಮಿಲನಕ್ಕೂ, ಮಾತನಾಡುವುದಕ್ಕೂ ದುಡ್ಡು ಕೇಳಿದ ಪತ್ನಿ

ತೈವಾನ್​ನಲ್ಲಿ ಇಂತಹದೊಂದು ವಿಚಿತ್ರ ಸನ್ನಿವೇಶವನ್ನು ಅನುಭವಿಸಿದ್ದಾನೆ ಒಬ್ಬ ಪತಿ. ಹಾವೋ ಎಂಬುವವನ ಪತ್ನಿ ಕ್ಸಿಯಾನ್​ ಪ್ರತಿಯೊಂದಕ್ಕೂ ಪತಿಯಿಂದ ದುಡ್ಡು ಕೇಳುತ್ತಿದ್ದಳಂತೆ. ದೈಹಿಕ ಮಿಲನಕ್ಕೂ ಮುನ್ನವೇ ಪತಿ ಅವಳಿಗೆ ದುಡ್ಡು ಕೊಡಬೇಕಿತ್ತು. ಅದರ ಬಗ್ಗೆ ಮಾತನಾಡುವುದಕ್ಕೂ ಕೂಡ ದುಡ್ಡು ಕೊಡಬೇಕಿತ್ತು. ಪತ್ನಿಯ ಈ ವರ್ತನೆ ಬೇಸತ್ತ ಹಾವೋ ನೇರವಾಗಿ ಕೋರ್ಟ್ ಮೆಟ್ಟಿಲೇರಿ ಸಾರ್ ನನಗೆ ಡಿವೋರ್ಸ್​ ಬೇಕು, ಇವಳೊಂದಿಗೆ ನಾನು ಸಂಸಾರ ಮಾಡಲು ಸಾಧ್ಯವಿಲ್ಲ ಎಂದು ಗೋಗರೆದಿದ್ದಾನೆ. ಕೋರ್ಟ್​ಗೂ ಇವನ ಸ್ಥಿತಿ ಕಂಡು ಅಯ್ಯೋ ಅನಿಸಿತೋ, ಪಾಪದ ಜೀವ ಅನಿಸಿತೋ, ಅವನು ಕೇಳಿದ ವಿಚ್ಛೇದನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ಬದುಕಿದೆ ನಾನು ಬಡಜೀವ ಎಂದು ಹಾವೋ ನಿಟ್ಟುಸಿರು ಬಿಟ್ಟಿದ್ದಾನೆ.

publive-image

ಹಾವೋ ಮತ್ತು ಕ್ಸಿಯಾನ್ 2014ರಲ್ಲಿಯೇ ಮದುವೆಯಾಗಿದ್ದರು. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎರಡು ಮಕ್ಕಳು ಹುಟ್ಟಿದ್ದವು. ದಿನ ಕಳೆದಂತೆ ಇಬ್ಬರ ದಾಂಪತ್ಯದ ಗೋಡೆಯ ನಡುವೆ ಭಿನ್ನಾಭಿಪ್ರಾಯದ ಬಿರುಕುಗಳು ಮೂಡಲು ಆರಂಭವಾದವು, ಅಲ್ಲಿನ ಸ್ಥಳೀಯ ಪತ್ರಿಕೆಗಳೂ ವರದಿ ಮಾಡಿರುವ ಪ್ರಕಾರ ಹಾವೋ, 2021ರಲ್ಲಿಯೇ ಡಿವೋರ್ಸ್​ಗಾಗಿ ಕೋರ್ಟ್​ ಮೊರೆ ಹೋಗಿದ್ದ. ಆಗಿನಿಂದಲೇ ಅವನಿಗೆ ಪತ್ನಿಯಿಂದ ದುಡ್ಡಿಗಾಗಿ ಪೀಡನೆ ಶುರುವಾಗಿತ್ತು. ಒಂದು ಬಾರಿಯ ದೈಹಿಕ ಮಿಲನಕ್ಕಾಗಿ 15 ಡಾಲರ್ ಅಂದ್ರೆ ಭಾರತದ 1500 ರೂಪಾಯಿ ಚಾರ್ಜ್​ ಮಾಡುತ್ತಿದ್ದಳಂತೆ. ಅವಳ ಜೊತೆ ಮಾತನಾಡಲು ಕೂಡ ಒಂದು ರೇಟ್ ಇತ್ತಂತೆ. ಕೊನೆಗೆ ಇನ್ಮೇಲೆ ಹೀಗೆ ಮಾಡೋದಿಲ್ಲ ಎಂದು ಹೆಂಡತಿ ಪ್ರಾಮೀಸ್ ಮಾಡಿದ ಬಳಿಕ ಹಾವೋ ಹಾಕಿದ ಮೊಕದ್ದಮೆಯನ್ನು ವಾಪಸ್ ಪಡೆದುಕೊಂಡಿದ್ದಾನೆ.

Advertisment

ಇದನ್ನೂ ಓದಿ: ನೇಪಾಳದ ಬಳಿಕ ಮತ್ತೊಂದು ಅವಘಡ, ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ.. 70 ಜನ ದಹನ

ಅದೇ ಸಮಯದಲ್ಲಿಯೇ ಹುವಾ ತನ್ನ ಆಸ್ತಿಯನ್ನೆಲ್ಲಾ ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾನೆ. ಮತ್ತೆ ಸರಳವಾಗಿ ಒಂದಿಷ್ಟು ದಿನ ಬದುಕು ಸಾಗಿದೆ. ತದನಂತರ ಮತ್ತೆ ಪತ್ನಿ ಅದೇ ಹಳೆ ಚಾಳಿ ಮುಂದುವರಿಸಿದ್ದಾಳೆ, ಹಾವೋ ದೈಹಿಕ ಸಾಮಿಪ್ಯ ಬೇಡಿದಾಗಲೆಲ್ಲಾ ತಿರಸ್ಕರಿಸಿದ್ದಾಳೆ. ಬಳಿಕ ಮತ್ತೆ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರ ಸಂಬಂಧಗಳು ಅತ್ಯಂತ ಕ್ಲಿಷ್ಟ ಹಾಗೂ ಸಮಸ್ಯೆಯಿಂದ ಕೂಡಿದ್ದಾಗಿ ಹೇಳಿದ ಕೋರ್ಟ್ ಹಾವೋ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿ ಡಿವೋರ್ಸ್​ ನೀಡಿದೆ. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕ್ಸಿಯಾನ್​ ಮನವಿಯನ್ನು ತಿರಸ್ಕರಿಸಿ ಕೊನೆಗೂ ಹಾವೋಗೆ ಪತ್ನಿಯಿಂದ ವಿಚ್ಛೇದನಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್​ ನೀಡಿದೆ.

ಇದನ್ನೂ ಓದಿ:ಚೀನಾದಲ್ಲಿ ಈ ರಾಶಿಯವರಿಗೆ ಸಿಗಲ್ಲ ಕೆಲಸ; ಕಂಪನಿಗಳು ಇವರಿಗೆ ಜಾಬ್​ ಆಫರ್ ಮಾಡಲ್ಲ ಯಾಕೆ?

Advertisment

ಏಷಿಯಾದಲ್ಲಿಯೇ ಅತಿಹೆಚ್ಚು ಡಿವೋರ್ಸ್​​ಗಳು ನಡೆಯುವುದು ತೈವಾನ್​ನಲ್ಲಿ. ಇದೇ ರೀತಿಯ ಅನೇಕ ಪ್ರಕರಣಗಳು ತೈವಾನ್​ನಲ್ಲಿ ಈ ಹಿಂದೆ ನಡೆದು ಹೋಗಿವೆ. 2014ರಲ್ಲಿ ಪತ್ನಿ. ಲೈಂಗಿಕ ಕ್ರಿಯೆ ನಡೆಸಲು, ಮಾತನಾಡಲು ಹಾಗೂ ಊಟ ನೀಡಲು ಸಹ ಒಂದೊಂದು ರೇಟ್ ಫಿಕ್ಸ್ ಮಾಡಿದ್ದು ಸುದ್ದಿಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment