/newsfirstlive-kannada/media/post_attachments/wp-content/uploads/2024/08/Tajmahal-Agra.jpg)
ಪ್ರೇಮಸೌಧ ತಾಜ್ ಮಹಲ್ (Taj Mahal) ಭಾರತೀಯ ವಾಸ್ತುಶಿಲ್ಪದ ವಿಶಿಷ್ಟ ಉದಾಹರಣೆ. ಇದು ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಇತಿಹಾಸದ ಪ್ರಕಾರ ಇದನ್ನು ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ನಿರ್ಮಿಸಿದ.
ಬಿಳಿ ಅಮೃತಶಿಲೆಯಿಂದ ಮಾಡಿದ ಈ ಸಮಾಧಿಯು ವಿಶ್ವದ ಅತ್ಯಂತ ಸುಂದರವಾದ ಅದ್ಭುತಗಳಲ್ಲಿ ಒಂದು. ಈ ವಿಶ್ವ ಪರಂಪರೆಯ ತಾಣ ನಿರ್ಮಿಸಲು ಸುಮಾರು 22 ವರ್ಷಗಳು ಬೇಕಾಯಿತು. ತಾಜ್ ಮಹಲ್‌ನಲ್ಲಿ 22 ಕೊಠಡಿಗಳು ಲಾಕ್ ಆಗಿವೆ. ಅಂದರೆ ಅನಾಧಿ ಕಾಲದಿಂದಲೂ ಬಿಗ ಜಡಿಯಲಾಗಿದೆ. ಹೀಗಾಗಿ ಅದರಲ್ಲಿ ಏನಿದೆ ಅನ್ನೋ ಪ್ರಶ್ನೆ ಇದೆ.
ಇದನ್ನೂ ಓದಿ: ESI ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ.. ಕುಟುಂಬಸ್ಥರಿಂದ ಗಂಭೀರ ಆರೋಪ
ತಾಜ್ ಮಹಲ್ ಅನ್ನು ಶಹಜಹಾನ್ 1632ರಲ್ಲಿ ನಿರ್ಮಿಸಿದ. ಇದು ಸುಮಾರು 42 ಎಕರೆಗಳಲ್ಲಿ ಹರಡಿಕೊಂಡಿದ್ದು, ಇದು ಅತಿಥಿ ಗೃಹ ಮತ್ತು ಮಸೀದಿಯನ್ನು ಹೊಂದಿದೆ. ಈ ಅರಮನೆಯನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ. ಅದರೊಳಗೆ ಶಹಜಹಾನ್ ಮತ್ತು ಮುಮ್ತಾಜ್ ಇಬ್ಬರ ಸಮಾಧಿಗಳಿವೆ. ಜೊತೆಗೆ ಮೊಘಲರ ಕಾಲದಿಂದಲೂ ಮುಚ್ಚಲ್ಪಟ್ಟ ಅನೇಕ ಕೊಠಡಿಗಳಿವೆ.
ತಾಜ್ ಮಹಲ್‌ನ ನೆಲದ ಮೇಲೆ ಎರಡು ಮೆಟ್ಟಿಲುಗಳಿದ್ದು, ಅವುಗಳ ಮೇಲೆ ಕಬ್ಬಿಣದ ಜಾಲರಿ ಇದೆ. ತಾಜ್ ಮಹಲ್‌ನ ಒಂದು ಭಾಗವು ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದೆ. ಇನ್ನು ಮುಖ್ಯ ಸಮಾಧಿಯ ಕೆಳಗೆ 22 ಕೊಠಡಿಗಳಿದ್ದು, ಇವುಗಳನ್ನು ಇಲ್ಲಿಯವರೆಗೆ ಯಾರೂ ನೋಡಲು ಸಾಧ್ಯವಾಗಿಲ್ಲ.
ಇತಿಹಾಸಕಾರರ ಪ್ರಕಾರ, ಈ ಕೊಠಡಿಗಳನ್ನು ಕೊನೆಯದಾಗಿ 1934 ರಲ್ಲಿ ತೆರೆಯಲಾಯಿತು. ತಾಜ್ ಮಹಲ್‌ನ ಮೊದಲ ಮಹಡಿಯಲ್ಲಿಯೂ ಅನೇಕ ಕೊಠಡಿಗಳಿವೆ. ಆದರೆ ಅದಕ್ಕೆ ಹೋಗುವ ಎರಡು ಮೆಟ್ಟಿಲುಗಳನ್ನು ಶಹಜಹಾನ್ ಕಾಲದಿಂದಲೂ ಮುಚ್ಚಲಾಗಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಇಲ್ ಕೇಳಿ.. ಈ ಮಾರ್ಗದಲ್ಲಿ ನಾಳೆ 2 ಗಂಟೆ ಮೆಟ್ರೋ ಓಡಾಡಲ್ಲ
ಕೆಲವು ವರ್ಷಗಳ ಹಿಂದೆ ಭಾರತೀಯ ಪುರಾತತ್ವ ಸಮೀಕ್ಷೆಯು ಮುಚ್ಚಿದ ಕೋಣೆಗಳ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಈ ಕೋಣೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಗುಪ್ತ ನಿಧಿಗಳಿವೆ ಎಂಬ ಊಹಾಪೋಹಗಳಿವೆ. ಹೊರತಾಗಿ ಪ್ರಾಚೀನ ಮೊಘಲ್ ದಾಖಲೆಗಳು ಮತ್ತು ಇತರ ಕಲಾಕೃತಿಗಳಿವೆ ಎಂದು ನಂಬಲಾಗಿದೆ.
ಕೆಲವರು ಈ ಕೋಣೆಗಳನ್ನ ಶಹಜಹಾನ್ ಮತ್ತು ಮುಮ್ತಾಜ್ ಅವರ ನಿಜವಾದ ವಿಶ್ರಾಂತಿ ಸ್ಥಳವೆಂದು ಹೇಳುತ್ತಾರೆ. ಅಚ್ಚರಿಯ ವಿಚಾರ ಅಂದ್ರೆ ಕುತೂಹಲಕಾರಿ ವಿಷಯವೆಂದರೆ ತಾಜ್ ಮಹಲ್‌ನ ಎಲ್ಲಾ ನಾಲ್ಕು ಮಿನಾರ್‌ಗಳು ಈ ಕೋಣೆಗಳಿಗೆ ಸಂಪರ್ಕ ಹೊಂದಿವೆ.
ಇನ್ನು ಮುಚ್ಚಿದ ಕೊಠಡಿಗಳಲ್ಲಿ ಅನೇಕ ಹಿಂದೂ ವಿಗ್ರಹಗಳು ಮತ್ತು ಶಾಸನಗಳಿವೆ ಅಂತಲೂ ಇತಿಹಾಸಕಾರರು ಹೇಳುತ್ತಾರೆ. ಈ ಕೊಠಡಿಗಳನ್ನು ತೆರೆಯಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಅದನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಿರಸ್ಕರಿಸಿದೆ.
ಇದನ್ನೂ ಓದಿ: ಜಿಮ್ನಲ್ಲಿ ಸ್ಯಾಂಡಲ್ವುಡ್ ನಟನ ಮಗ ಜಬರ್ದಸ್ತ್ ವರ್ಕೌಟ್; ಯಾರಿದು ಗೆಸ್ ಮಾಡಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ