/newsfirstlive-kannada/media/post_attachments/wp-content/uploads/2024/10/EYE_GIRL_1.jpg)
ಕಣ್ಣು ಅನ್ನು ನಯನ, ಅಕ್ಷಿ, ನೇತ್ರ, ಅಂಬಕ, ಚಕ್ಷು ಎಂದು ಇನ್ನು ಕೆಲ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ದೇಹದ ತುಂಬಾ ಸೂಕ್ಷ್ಮವಾದ ಅತ್ಯಂತ ಪ್ರಮುಖವಾದ ಭಾಗವೇ ಕಣ್ಣು. ಯಾವುದೇ ಒಂದು ಜೀವಿ, ವಸ್ತುವಿನ ರೂಪ, ಗಾತ್ರ, ಹೀಗಿದೆ ಎಂದು ಗುರುತಿಸಲು ಕಣ್ಣಿಂದ ಮಾತ್ರ ಸಾಧ್ಯ. ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾಗಿದ್ದು ಪಂಚೇಂದ್ರಿಯಗಳಲ್ಲಿ ಒಂದಾಗಿದೆ. ಇಡೀ ವಿಶ್ವದ ರೂಪ ತೋರಿಸುವ ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ ಎನ್ನುವ ಕೆಲ ಅಂಶಗಳು ಇಲ್ಲಿವೆ.
ವಿಟಮಿನ್- ಎ ಇರುವಂತಹ ಹಣ್ಣು, ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ತಿನ್ನುವುದರಿಂದ ಕಣ್ಣುಗಳ ಆರೋಗ್ಯವನ್ನ ಕಾಪಾಡಬಹುದು. ವಿಟಮಿನ್ ಎ ಇರದಿದ್ದರೇ, ಅಥವಾ ಅಂತಹವುಗಳನ್ನ ನಾವು ಸೇವನೆ ಮಾಡದಿದ್ದರೆ ರಾತ್ರಿ ಕುರುಡುತನ, ಒಣಗಣ್ಣು (Dry eye disease) ಸೇರಿ ಇತರೆ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಹೀಗಾಗಿ ವಿಟಮಿನ್ ಎ ಇರುವಂತ ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು, ಟೊಮೆಟೊ, ಕಿತ್ತಳೆ, ಮಾಗಿದ ಹಣ್ಣುಗಳು, ಪೇರಲ, ಹಾಲು, ಮೊಟ್ಟೆ, ಲೀವರ್, ಕ್ಯಾರೆಟ್ ಇವುಗಳನ್ನ ಸೇವನೆ ಮಾಡಬೇಕು.
ಲುಟೀನ್ ಮತ್ತು ಜಿಯಾಕ್ಸಾಂಥಿನ್ (Lutein and zeaxanthin) ನೈಸರ್ಗಿಕ ಸನ್ಬ್ಲಾಕ್ ಆಗಿ ಕಾರ್ಯನಿರ್ವಹಿಸುತ್ತವೆ. ಹಾನಿಕಾರಕವಾದ ನೀಲಿ ಬೆಳಕಿನಿಂದ (Blue Lighting) ಕಣ್ಣುಗಳನ್ನ ರಕ್ಷಣೆ ಮಾಡುತ್ತದೆ. ಹಸಿರು ಬಟಾಣಿ, ಪಾಲಕ್ನಂತಹ ಸೊಪ್ಪುಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇರುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ಇವುಗಳನ್ನ ತಿನ್ನುವುದು ಉತ್ತಮ.
ಇದನ್ನೂ ಓದಿ:Air India; ಭರ್ಜರಿ ಉದ್ಯೋಗಗಳು.. ಏರ್ಪೋರ್ಟ್ನಲ್ಲಿ ಕೆಲಸ ಮಾಡಲು ಬಯಸುವರಿಗೆ ಸುವರ್ಣಾವಕಾಶ
ಕಣ್ಣುಗಳ ಆರೋಗ್ಯಕ್ಕಾಗಿ ವಿಟಮಿನ್ ಎ ಜೊತೆಗೆ ಸಿ ಹಾಗೂ ಇ ಇರುವ ಆಹಾರಗಳನ್ನು ಸೇವನೆ ಮಾಡಬೇಕು. ವಿಟಮಿನ್ ಸಿ ಇರುವ ಅಂಶಗಳನ್ನ ಸೇವನೆಯಿಂದ ಕಣ್ಣುಗಳ ರಕ್ಷಣಾತ್ಮಕವಾದ ಪಾತ್ರ ವಹಿಸುತ್ತವೆ. ಕಣ್ಣಿನ ಪೊರೆ ಬರುವುದನ್ನ ನಿಧಾನಗೊಳಿಸುತ್ತವೆ. ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣಿಸಲು ಸಹಾಯಕ ಆಗುತ್ತವೆ. ಕಣ್ಣುಗಳಿಗೆ ಅಪಾಯ ಸ್ವಲ್ಪ ಮಟ್ಟಿಗೆ ಜೀನ್ಗಳಿಂದ ಬರಬಹುದು. ಅಂದರೆ ನಮ್ಮ ಪೂರ್ವಿಕರಲ್ಲಿ ಯಾರಿಗಾದರು ಕಣ್ಣುಗಳ ಸಮಸ್ಯೆ ಇದ್ದರೆ ಅದು ನಮ್ಮಲ್ಲಿ ಕಂಡು ಬರುವ ಸಾಧ್ಯತೆ ಇರುತ್ತದೆ. ಆದರೆ ಉತ್ತಮ ಗುಣಮಟ್ಟದ ವಿಟಮಿನ್ ಆಹಾರಗಳನ್ನ ಸೇವನೆಯಿಂದ ಕಡಿಮೆ ಮಾಡುವ ಸಾಧ್ಯತೆ ಇದೆ.
ನಮ್ಮ ಕಣ್ಣುಗಳನ್ನ ರಕ್ಷಣೆ ಮಾಡುವ ಟಾಪ್ 10 ಪಾಯಿಂಟ್ಸ್
- ಮಕ್ಕಳಲ್ಲಿ ಕಂಜೆನಿಟಲ್ ಕ್ಯಾಟ್ರಾಕ್ಟ್, ಗ್ಲಾಕೋಮಾ (Glaucoma), ರೆಟಿನಾ ಪರೀಕ್ಷೆ ಮಾಡಿಸಬೇಕು
- ಒಣಗಿದ ಕಣ್ಣು (ಡ್ರೈ ಐಸ್) ಆಗುವುದನ್ನ ತಡೆಯಲು ಕೆಲಸದ ವೇಳೆ ವಿರಾಮ ತೆಗೆದುಕೊಳ್ಳಬೇಕು
- ಮಕ್ಕಳು ಅತಿಯಾದ ಸ್ಟ್ರೀನ್ ನೋಡುತ್ತಿದ್ದರೆ, ಡಾಕ್ಟರ್ ಸಲಹೆಯಂತೆ ಕನ್ನಡಕ ಧರಿಸುವುದು ಸೂಕ್ತ
- ಕಂಪ್ಯೂಟರ್ನಲ್ಲೇ ಕೆಲಸ ಮಾಡುವರು ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣಿಗೆ ವಿಶ್ರಾಂತಿ ನೀಡಬೇಕು
- ಮಧುಮೇಹ, ರಕ್ತದೊತ್ತಡ ಇರುವವರು ಕಣ್ಣುಗಳ ಸಪಾಸಣೆಗೆ ಒಳಗಾಗಬೇಕು
- ಸನ್ಗ್ಲಾಸ್ ಧರಿಸಬೇಕು- ಏಕೆಂದರೆ ಕಿರಣಗಳು ನೇರ ಕಣ್ಣುಗಳಿಗೆ ತಾಗುವುದನ್ನ ತಡೆಯುತ್ತದೆ
- ಕಣ್ಣುಗಳನ್ನ ತಪಾಸಣೆ ಮಾಡಿಸುವುದರಿಂದ ಆಗಾಗ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು
- ಎಸಿ, ಫ್ಯಾನ್ ಬಳಸುವುದರಿಂದ ಕಣ್ಣುಗಳು ಒಣಗಿ ಕಾಯಿಲೆ ಬರಬಹುದು, ಮುಂಜಾಗ್ರತೆ ವಹಿಸಿ
- ಯಾರಿಗಾದ್ರು ಕಣ್ಣಿನ ಸೋಂಕು ತಗುಲಿದ್ದು ಗೊತ್ತಾದರೆ ಅಂತರ ಕಾಪಾಡಿ. ಸೋಂಕು ಹರಡುವ ಸಾಧ್ಯತೆ ಇದೆ.
- ದ್ವಿಚಕ್ರ ಸವಾರರು ಆದಷ್ಟು ಹೆಲ್ಮೆಟ್‍ಗಿರುವ ಗ್ಲಾಸ್ ಹಾಕಿಕೊಂಡರೆ ಧೂಳಿನಿಂದ ಕಣ್ಣಿನ ರಕ್ಷಣೆ ಆಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ