/newsfirstlive-kannada/media/post_attachments/wp-content/uploads/2025/07/TALAQ-STORY.jpg)
ಬೆಂಗಳೂರು: ಆರು ಬಾರಿ ತಲಾಖ್.. ತಲಾಖ್.. ತಲಾಖ್ ಎಂದು ಸೈಕೋ ಪತಿ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿ ಬನಶಂಕರಿ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದಾಳೆ.
ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್​​ ರೇಟ್ ಹೆಚ್ಚಳ..
/newsfirstlive-kannada/media/post_attachments/wp-content/uploads/2025/07/TALAQ-STORY1.jpg)
ಸೈಕೋ ಪತಿ ಯೂನುಸ್ ಪಾಶಾ ವರ್ತನೆಗೆ ಬೇಸತ್ತ ಪತ್ನಿ ನ್ಯಾಯ ಕೊಡಿಸಿ ಅಂತಾ ಅಂಗಲಾಚಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಹೌದು, ದಿನಕ್ಕೊಂದು ಹುಡುಗಿಯರ ಜೊತೆ ಎಂಜಾಯ್ ಮಾಡುತ್ತಿದ್ದನಂತೆ ಯೂನುಸ್. ಅಲ್ಲದೇ ಪತ್ನಿಗೆ ರಾಜಕಾರಣಿ ಜೊತೆಗೆ ಮಲಗುಂತೆ ಒತ್ತಾಯದ ಮಾಡುತ್ತಿದ್ದನಂತೆ. ಇದಕ್ಕೆ ಒಪ್ಪದಿದ್ದಾಗ ಯೂನುಸ್ ಪಾಶಾ ತಲಾಖ್ ಎಂದು ಹೇಳಿದ್ದಾನೆ. (ತಲಾಖ್ ಎಂದರೆ ಇಸ್ಲಾಂ ಧರ್ಮದಲ್ಲಿ ಪತಿಯು ತನ್ನ ಹೆಂಡತಿಗೆ ನೀಡುವ ವಿಚ್ಛೇದನವಾಗಿದೆ).
/newsfirstlive-kannada/media/post_attachments/wp-content/uploads/2025/07/TALAQ-STORY2.jpg)
ಅಷ್ಟೇ ಅಲ್ಲದೆ ಮಹಿಳೆಗೆ ಆಕೆಯ ಅತ್ತೆ ಮಾವ ಕೂಡ ನಿರಂತರ ಟಾರ್ಚರ್ ಕೊಡುತ್ತಿದ್ದಂತೆ. ಮಸಾಜ್ ಮಾಡುವಂತೆ ಮಾವ ಡಿಮ್ಯಾಂಡ್ ಮಾಡುತ್ತಿದ್ದ. ದಿನ ನಿತ್ಯ ಬಾಡಿ ಮಸಾಜ್ ಮಾಡುವಂತೆ ಸೊಸೆಗೆ ಹೇಳ್ತಿದ್ದ. ಅಲ್ಲದೆ, ಅತ್ತೆ ಮಾವನಿಂದಲೂ ವರದಕ್ಷಿಣೆ ಕೊಡುವಂತೆ ಕಿರುಕುಳ ಕೊಟ್ಟಿದ್ದಾರೆ. ನನಗೆ ಗರ್ಭಪಾತ ಮಾಡಿಸಿದ್ದಾರೆ. ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ. ನನ್ನ ಮನೆಯವರಿಗೆ ಮಚ್ಚು, ಲಾಂಗ್ ತೋರಿಸಿ ಬೆದರಿಸಿದ್ದಾರೆ. ನಮ್ಮದೇ ಸರ್ಕಾರ ಇದೆ, ಏನೂ ಮಾಡೋಕಾಗಲ್ಲ ಅಂತ ಮಹಿಳೆ ಗಂಭೀರ ಆರೋಪ ಮಾಡಿದ್ದಾಳೆ. ಹೀಗಾಗಿ ನ್ಯಾಯ ಕೊಡಿಸಿ ಅಂತಾ ಯೂನುಸ್ ಪಾಶಾ ಪತ್ನಿ ಅತ್ತೆ-ಮಾವನ ಹಾಗೂ ಗಂಡ ವಿರುದ್ಧ ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾಳೆ. ಕೇಸ್ ದಾಖಲಿಸಿಕೊಂಡ ಬನಶಂಕರಿ ಠಾಣಾ ಪೊಲೀಸರು ಸದ್ಯ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us