/newsfirstlive-kannada/media/post_attachments/wp-content/uploads/2024/01/CHESS-3.jpg)
ಭಾರತದಲ್ಲಿ ರಮ್ಮಿ ರೀತಿಯ ಆಟಗಳನ್ನ ಜೂಜಾಟ ಅಂತ ಬ್ಯಾನ್ ಮಾಡಲಾಗುತ್ತೆ. ಆದರೆ ಅಫ್ಘಾನಿಸ್ತಾನ ಇಂಟರ್ನ್ಯಾಷನಲ್ ಗೇಮ್ ಚೆಸ್ ಅನ್ನೇ ಬ್ಯಾನ್ ಮಾಡಿ ಅಚ್ಚರಿಗೊಳಿಸಿದೆ. ಚದುರಂಗ ನಿಷೇಧಿಸಿದ ಬೆನ್ನಲ್ಲೆ ಇದು ಯುವ ಜನತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮಿಕ್ ಆಟಗಾರರಿಗೂ ಪೆಟ್ಟು ಬಿದ್ದಂತಾಗುತ್ತೆ ಅನ್ನೋ ಆಕ್ರೋಶಗಳು ಕೇಳಿ ಬಂದಿವೆ.
ಅಷ್ಟಕ್ಕೂ ಚೆಸ್ ಬ್ಯಾನ್ ಮಾಡುವ ಅವಶ್ಯಕತೆ ಅಫ್ಘಾನಿಸ್ತಾನಕ್ಕೆ ಏಕೆ. ಈ ಪ್ರಶ್ನೆಗೆ ಉತ್ತರ ಚದುರಂಗ ಅನ್ನೋದು ಇಸ್ಲಾಮಿಕ್ನ ಷರಿಯಾಗೆ ವಿರುದ್ಧವಾಗಿದೆ ಅನ್ನೋ ಸಮಜಾಯಿಷಿ ಕೇಳಿ ಬರ್ತಿದೆ. ಹಾಗಾಗಿ ಷರಿಯಾ ಕಾನೂನಿನಡಿಯಲ್ಲಿ ಚೆಸ್ ಅನ್ನ ನಿಷೇಧಿಸಲಾಗಿದೆ.
ಅಷ್ಟೇ ಅಲ್ಲದೇ ಚೆಸ್ ಅನ್ನ ಜೂಜಾಟದ ಒಂದು ರೂಪ ಎಂದು ಬಣ್ಣಿಸಲಾಗಿದೆ. ಇದೇ ಕಳವಳವನ್ನ ಉಲ್ಲೇಖಿಸಿ, ಅಫ್ಘಾನಿಸ್ತಾನದ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನದ ಅಡಿಯಲ್ಲಿ ಚೆಸ್ ಕಾನೂನುಬಾಹಿರ ಎಂದು ಪರಿಗಣಿಸಿ, ಕ್ರೀಡಾ ಅಧಿಕಾರಿಯೊಬ್ಬರು ಚೆಸ್ ನಿಷೇಧವನ್ನ ದೃಢಪಡಿಸಿದ್ದಾರೆ.
ಚೆಸ್ ಬ್ಯಾನ್ನಿಂದ ಹೇಗೆ ಪರಿಣಾಮ ಬೀರುತ್ತದೆ?
ಮೊದಲನೆಯದಾಗಿ.. ಅಫ್ಘಾನಿಸ್ತಾನ ಸೇರಿ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆಸ್ ಆಟಗಾರರನ್ನ ಹೊಂದಿವೆ. ಚೆಸ್ ನಿಷೇಧದಿಂದ ಅಫ್ಘಾನಿಸ್ತಾನದ ಆಟಗಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಅಷ್ಟೇಯಲ್ಲದೇ ಇತ್ತೀಚಿನ ದಿನಗಳಲ್ಲಿ ಆ ದೇಶದ ಯುವಕರಿಗೆ ಹೆಚ್ಚಿನ ಚಟುವಟಿಕೆಗಳಿಲ್ಲದ ಕಾರಣ, ಅಲ್ಲಿನ ಕೆಫೆಗಳಲ್ಲಿ ಅವರಿಗೆ ಚೆಸ್ ಅಚ್ಚುಮೆಚ್ಚಿನ ಆಟವಾಗಿದೆ. ಈಗ ಈ ನಿರ್ಧಾರದಿಂದ ಅತ್ತ ವ್ಯವಹಾರಕ್ಕೆ, ಇತ್ತ ಆಟವನ್ನ ಆನಂದಿಸುವವರಿಗೆ ಹಾನಿ ಉಂಟು ಮಾಡಬಹುದು ಎಂದು ಅಭಿಪ್ರಾಯಗಳಿವೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಭಾವುಕ.. 14 ವರ್ಷದ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಏನಂದ್ರು?
ಆಟಗಳ ಬ್ಯಾನ್ ಇದೇ ಮೊದಲಲ್ಲ!
ಅಫ್ಘಾನಿಸ್ತಾನದ ಎಲ್ಲಾ ಕ್ರೀಡಾಕೂಟಗಳನ್ನ ನಿಯಂತ್ರಿಸುವ ತಾಲಿಬಾನ್. ಕ್ರೀಡಾ ನಿರ್ದೇಶನಾಲಯದ ಮೇಲೆ ಆಟಗಳ ವಿಷ್ಯದಲ್ಲಿ ಈ ರೀತಿ ಕ್ರಮವನ್ನ ತೆಗೆದುಕೊಂಡೇ ಬಂದಿದೆ. ಅಫ್ಘಾನಿಸ್ತಾನದ ಅಧಿಕಾರಿಗಳು ಇಲ್ಲಿವರೆಗೂ ಅನೇಕ ಕ್ರೀಡೆಗಳಿಗೆ ನಿಷೇಧ ಏರಿದ್ದಾರೆ. ಅಲ್ಲಿ ಮಹಿಳೆಯರನ್ನ ಕ್ರೀಡೆಗಳಲ್ಲಿ ಭಾಗವಹಿಸದಂತೆ ನಿಷೇಧ ಏರಲಾಗಿದೆ. ವೃತ್ತಿಪರ ಸ್ಪರ್ಧೆಗಳಲ್ಲಿ ಅನೇಕ ಸಮರ ಕಲೆಗಳನ್ನ ಕಲಿಯೋದನ್ನ ನಿಲ್ಲಿಸಿದೆ.
ಈ ಚದುರಂಗ ಆಟವನ್ನ ನಿಷೇಧಿಸಿ ಇದೊಂದು ಷರಿಯಾಗೆ ವಿರುದ್ಧವಾಗಿರೋ ಆಟ ಎಂದು ಚೆಸ್ ಕ್ರೀಡೆಗೆ ಸಂಬಂಧಿಸಿದಂತೆ ಧಾರ್ಮಿಕ ಪರಿಗಣನೆಗಳಿವೆ ಎಂದಿದೆ. ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮುಂದಿನ ಸೂಚನೆ ಬರುವವರೆಗೂ, ಧಾರ್ಮಿಕ ಕಾಳಜಿಗಳು ಬಗೆಹರಿಯುವವರೆಗೂ ಚೆಸ್ ಅಫ್ಘಾನಿಸ್ತಾನದಲ್ಲಿ ಕಾಣುವಂತಿಲ್ಲ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ