/newsfirstlive-kannada/media/post_attachments/wp-content/uploads/2025/04/Crow-Talking.jpg)
ಗಿಳಿ ಮಾತನಾಡುವುದನ್ನು ಕೇಳಿದ್ದೇವೆ, ಆದ್ರೆ ಕಾಗೆ ಮಾತನಾಡುವುದು ಕೇಳಿದ್ದೀರಾ. ಇದು ಸಖತ್ ಡಿಫರೆಂಟ್ ಕಾಗೆ. ಈ ಅಪರೂಪದ ಕಾಗೆ ಮನುಷ್ಯರಂತೆ ಮಾತನಾಡುತ್ತೆ. 'ಪಾಪಾ', 'ಬಾಬಾ', 'ಕಾಕಾ' 'ಮಮ್ಮಿ' ಹೀಗೆ ಅನೇಕ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸುತ್ತೆ. ಇದು ಅಚ್ಚರಿಯಾದ್ರೂ ಸತ್ಯ.
ಪಪ್ಪಾ.. ಪಪ್ಪಾ ಐ ಲವ್ ಯೂ.. ಪಪ್ಪಾ ಆ ಗಯೇ. ಹೀಗೆ ಮರಾಠಿ ಭಾಷೆಯಲ್ಲಿ ಅಣಿಮುತ್ತು ಉದುರಿಸ್ತಿರೋ ಈ ಕಾಗೆ ವೆರಿ ವೆರಿ ಸ್ಪೆಷಲ್. ಹೀಗೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ವಿಡಿಯೋ ಮನುಷ್ಯರ ಮೆದುಳನ್ನು ಅಲುಗಾಡಿಸ್ತಿದೆ. ಹಾಗೂ ದೇಹದಲ್ಲಿ ಜುಮ್ಮೆನಿಸುವ ಅನುಭವವಾಗುತ್ತದೆ. ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಕಾಗೆಯೊಂದು ಮನುಷ್ಯರಂತೆ ಮಾತನಾಡುತ್ತೆ ಅಂತ ಹೇಳಲಾಗಿರುವ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಮನುಷ್ಯರಂತೆ ಮಾತನಾಡುತ್ತೆ ಈ ಡಿಫರೆಂಟ್ ಕಾಗೆ!
ಮಹಾರಾಷ್ಟ್ರದ ಫಾಲ್ಘಾರ್ನಲ್ಲಿದೆ ಮಾತನಾಡುವ ಕಾಕಾ!
ಕಾಗೆ.. ಕಾಕಾ.. ವಾಯಸ.. ಕಾಜಾಣ ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳೋ ಕಾಗೆ ಮಾನವ ಜೀವನದಲ್ಲಿ ಶುಭ-ಅಶುಭಗಳನ್ನು ತಿಳಿಸುವ ಸಂದೇಶ ವಾಹಕ ಎನ್ನಿಸಿಕೊಂಡಿದೆ. ಸಾಮಾನ್ಯವಾಗಿ ಕಾಗೆಗಳು ಕಾವ್ ಕಾವ್ ಅಂತಾವೆ. ಹಕ್ಕಿಗಳು ಪಿಚುಗುಟ್ಟುತ್ವೆ. ಇದನ್ನು ಬಿಟ್ರೆ ಬೇರೆ ಭಾಷೆ ಬರಲ್ಲ. ಇದೇ ಹಕ್ಕಿಪಕ್ಷಿಗಳು ಮನುಷ್ಯರಂತೆ ಮಾತಾಡಿದ್ರೆ ನಿಜವಾಗ್ಲೂ ಅದೊಂದು ಅದ್ಭುತ ವಿಸ್ಮಯ. ಸದ್ಯ ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವ ಕಾಗೆ ಎಲ್ಲರ ಗಮನ ಸೆಳೆಯುತ್ತಿದೆ. ಕಾಗೆ ಮಾತನಾಡುವುದನ್ನು ನೋಡಿದ ಜನ ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.
ಮಾತನಾಡುವ ಕಾಗೆ!
ತನುಜಾ ಮುಕ್ನೆ ಎಂಬುವರ ಮನೆಯಲ್ಲಿರುವ ವಿಶಿಷ್ಟ ಕಾಗೆ 3 ವರ್ಷಗಳ ಹಿಂದೆ ತನುಜಾ ಅವರ ತೋಟದಲ್ಲಿ ಪತ್ತೆಯಾಗಿತ್ತು. ಅಸ್ವಸ್ಥಗೊಂಡು ನರಳುತ್ತಿದ್ದ ಕಾಗೆ ತಂದು ತನುಜಾ ಆರೈಕೆ ಮಾಡಿದ್ದರು. ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕಾಗೆ ಚೇತರಿಸಿಕೊಂಡಿತ್ತು. ಬಳಿಕ ಮನುಷ್ಯರ ಧ್ವನಿ ಅನುಕರಿಸಿ ಕೆಲ ಪದಗಳನ್ನು ಮಾತನಾಡಲು ಆರಂಭ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಆ ಕಾಗೆ ಮನೆಯ ಸದಸ್ಯನಾಗಿದೆ. ಇನ್ನು ತನುಜಾ ಕುಟುಂಬದೊಂದಿಗೆ ವಿಶಿಷ್ಟ ಸಂಬಂಧವನ್ನೂ ಹೊಂದಿದೆ. ಕುಟುಂಬದವರ ಜೊತೆ ಸಂವಹನ ನಡೆಸುತ್ತಿರುವ ಡಿಫರೆಂಟ್ ಕಾಗೆ ಕಂಡು ಸ್ಥಳೀಯರು ಹಾಗೂ ತಜ್ಞರಲ್ಲಿ ವಿಸ್ಮಯ ಮೂಡಿದೆ.
People on the internet were shocked to see a crow talk like a human. Don't believe us, watch the video!#Palghar#Maharashtra#TalkingCrow#ViralVideo#Viral#Videopic.twitter.com/7l0LRRS8Ck
— IndiaToday (@IndiaToday)
People on the internet were shocked to see a crow talk like a human. Don't believe us, watch the video!#Palghar#Maharashtra#TalkingCrow#ViralVideo#Viral#Videopic.twitter.com/7l0LRRS8Ck
— IndiaToday (@IndiaToday) April 5, 2025
">April 5, 2025
ಪಕ್ಷಿಗಳು ಮಾತನಾಡಬಹುದೇ?
ಗಿಳಿಗಳು, ಮೈನಾ ಹಕ್ಕಿಗಳು ಮನುಷ್ಯರನ್ನು ಅನುಕರಿಸುತ್ತವೆ
ಸಾಮಾನ್ಯವಾಗಿ ಕಾಗೆಗಳು ಮಾತನಾಡೋದನ್ನು ನೋಡಿಲ್ಲ
ಕಾಗೆಗಳು ಶಬ್ದಗಳನ್ನು ಅನುಕರಿಸುವ ಸಾಮರ್ಥ್ಯ ಹೊಂದಿವೆ
ಇದು ಅಪರೂಪಕ್ಕೊಮ್ಮೆ ಹೀಗೆ ಆಗುತ್ತೆ ಎನ್ನುತ್ತಿರುವ ತಜ್ಞರು
ಕಾಗೆಗಳು ತಮ್ಮದೇ ಶಬ್ದ ಬಳಸಿಕೊಂಡು ಸಂವಹನ ನಡೆಸುತ್ತವೆ
ಮನುಷ್ಯರೊಂದಿಗೆ ದೀರ್ಘಕಾಲ ವಾಸವಿದ್ದಾಗ ಅನುಕರಿಸಬಹುದು
ಇದನ್ನೂ ಓದಿ: ಒಡತಿಯ ಋಣ ತೀರಿಸಲು ಮರೆಯದ ಕಾಗೆ.. ಈಗ ಮನುಷ್ಯರಂತೆ ಮಾತಾಡ್ತಿದೆ ಈ ಪಕ್ಷಿ..! VIDEO
ಇನ್ನು ಮಾತನಾಡುವ ಕಾಗೆಯ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಆದ್ರೆ ಕಾಗೆ ತನ್ನ ಬುದ್ಧಿವಂತಿಕೆ ಹಾಗೂ ಸಂವಹನ ಸಾಮರ್ಥ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ. ಅಪರೂಪದಲ್ಲಿ ಅಪರೂಪದ ಕಾಗೆ ವೈದ್ಯಕೀಯ ಲೋಕವನ್ನು ಅಚ್ಚರಿಗೆ ಕೆಡವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ