Breaking: ಮಂಗಳೂರಲ್ಲಿ ಮತ್ತೆ ತಲ್ವಾರ್ ಅಟ್ಯಾಕ್.. ಸ್ಥಳೀಯ ನಿವಾಸಿ ಮೇಲೆ ಭೀಕರ ದಾಳಿ

author-image
Ganesh
Updated On
Accident News: ಪಿಕ್-ಅಪ್ ವಾಹನ ಭೀಕರ ದುರಂತ; 14 ಪ್ರಯಾಣಿಕರು ಸ್ಥಳದಲ್ಲೇ ಸಾವು
Advertisment
  • ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಕೃತ್ಯ ನಡೆದಿದೆ
  • ಬೈಕ್​​ನಲ್ಲಿ ಬಂದ ಆಗಂತುಕರಿಂದ ಮಾರಣಾಂತಿಕ ದಾಳಿ
  • ದಾಳಿಗೆ ಒಳಗಾದ ಸ್ಥಳೀಯ ನಿವಾಸಿ ಆಸ್ಪತ್ರೆಗೆ ದಾಖಲು

ಮಂಗಳೂರು: ಬಂಟ್ವಾಳದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲ್ವಾರ್ ಅಟ್ಯಾಕ್ ಆಗಿದೆ. ಸ್ಥಳೀಯ ನಿವಾಸಿ ಹಮೀದ್ ದಾಳಿಗೆ ಒಳಗಾದ ವ್ಯಕ್ತಿ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಳಿ ಕೃತ್ಯ ನಡೆದಿದೆ. ಬೈಕ್​ನಲ್ಲಿ ಬಂದ ಆಗಂತುಕರು ಏಕಾಏಕಿ ದಾಳಿ ಮಾಡಿ ಪರಾರಿಯಾಗಿದ್ದಾರೆ. ಭೀಕರ ದಾಳಿಗೆ ಒಳಗಾದ ಸ್ಥಳೀಯ ನಿವಾಸಿ ಹಮಿದ್​ ರಕ್ತದ ಮಡುವಿನಲ್ಲಿದ್ದರು.

ನಂತರ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ಬಂಟವಾಳ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದು, ದಾಳಿಗೆ ಸಂಬಂಧಿಸಿ ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ಧ್ವೇಷಕ್ಕೆ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಮಂಗಳೂರಲ್ಲಿ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಮತ್ತೆ ಕರಾವಳಿಯಲ್ಲಿ ತಳವಾರ ಅಟ್ಯಾಕ್ ಆಗಿದೆ.

ಇದನ್ನೂ ಓದಿ: RCB ಸಕ್ಸಸ್​​ ಹಿಂದಿನ ಸೂತ್ರದಾರ ಇವರೇ.. ಈ ಆಸಿಸ್ ಮಿಸೈಲ್ ಮೇಲೆ ಫ್ರಾಂಚೈಸಿಗೆ ಭಾರೀ ನಂಬಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment