/newsfirstlive-kannada/media/post_attachments/wp-content/uploads/2023/08/tammanna-1.jpg)
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್​ಗೂ ಮೊದಲೇ ಸಖತ್​ ಟ್ರೆಂಡ್ ಸೃಷ್ಟಿಸಿದೆ. ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಕಾವಾಲಾ ಸಾಂಗ್​ಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಖತ್​ ಸ್ಟೆಪ್​ ಹಾಕಿ ಸೋಷಿಯಲ್​ ಮಿಡಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದರು. ಇದೀಗ ಮತ್ತೊಮ್ಮೆ ​ಹಲ್​ಚಲ್​ ಎಬ್ಬಿಸಿದ್ದಾರೆ. ತನ್ನ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಚಂದದ ಫೋಟೋವನ್ನು ನಟಿ ತಮನ್ನಾ ಭಾಟಿಯಾ ಶೇರ್ ಮಾಡಿಕೊಂಡಿದ್ದಾರೆ. ಸೌತ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೀರೆಯ​ ಫೋಟೋಗಳನ್ನು ನೋಡಿದ ಫ್ಯಾನ್ಸ್​​ ಫುಲ್​ ಖುಷ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2023/08/tammanna-2.jpg)
ನಟಿ ತಮನ್ನಾ ಭಾಟಿಯಾ ಸೀರಿಯಲ್ಲಿ ಥೇಟ್​​ ಅಪ್ಸರೆಯಂತೆ ಝಗಮಗಿಸುತ್ತಿದ್ದಾರೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ವಾವ್ ಸೂಪರ್ ತಮನ್ನಾ, ಎಂತಹ ಸೌಂದರ್ಯ, ಸೋ ಕ್ಯೂಟ್​ ತಮನ್ನಾ, ಸೀರೆಯುಟ್ಟ ನವಿಲು ನೀನು ಎಂದು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದಾರೆ. ಇನ್ನು, ಹಾಲ್ಗೆನ್ನೆ ಚೆಲುವೆ ಕಾವಲಯ್ಯ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ ಬಳಿಕ ಅವರ ನೇಮು ಫೇಮು ಮತ್ತಷ್ಟು ಜಾಸ್ತಿಯಾಗಿದೆ. ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ನಟಿ ತಮನ್ನಾ ಕ್ಯೂಟ್​​ ಫೋಟೋಶೂಟ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ.
/newsfirstlive-kannada/media/post_attachments/wp-content/uploads/2023/07/JAILER_TAMANNA_RAJANIKANTH.jpg)
ಇನ್ನು, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಮೊದಲ ಹಾಡು 'ಕಾವಾಲಾ' ಕಳೆದ ತಿಂಗಳು ಬಿಡುಗಡೆಯಾಯಿತು. ಸದ್ಯ ಈ ಹಾಡು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಯೂಟ್ಯೂಬ್​ನಲ್ಲಿ 100 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದಲ್ಲಿ ರಜನಿಕಾಂತ್, ತಮನ್ನಾ, ರಮ್ಯಾ ಕೃಷ್ಣ, ಶಿವರಾಜಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಆಗಸ್ಟ್ 10 ರಂದು ಚಿತ್ರ ಬಿಡುಗಡೆಯಾಗಲಿದೆ.
View this post on Instagram
🌸🌸🌸 pic.twitter.com/nJ6kVYCSXT
— Tamannaah Bhatia (@tamannaahspeaks) August 7, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us