/newsfirstlive-kannada/media/post_attachments/wp-content/uploads/2025/03/Tamannaah.jpg)
ಮಿಲ್ಕ್​ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್​ ವರ್ಮಾ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​​ ಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸ್ಟಾರ್ ಜೋಡಿ ಹಸೆಮಣೆ ಏರಲಿದ್ದಾರೆ ಸುದ್ದಿಯ ಬೆನ್ನಲ್ಲೇ ಬ್ರೇಕ್ ಅಪ್​ ಮಾಡಿಕೊಂಡಿದ್ದಾರಂತೆ.
ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. ಇಂಡಿಯನ್​ ಸಿನಿಮಾದ ಬೇಡಿಕೆಯ ನಟ ವಿಜಯ್ ವರ್ಮಾ. ಇವ್ರಿಬ್ಬರ ಲವ್ವಿಡವ್ವಿ ವಿಚಾರ ಕಳೆದ ಎರಡು ವರ್ಷದಿಂದ ಚರ್ಚೆ ಆಗ್ತಾನೆ ಇದೆ. ಫಂಕ್ಷನ್​ ಆಗಲಿ, ಶೋ ಆಗ್ಲಿ, ಸ್ಟೇಜ್​ ಪ್ರೋಗ್ರಾಮ್ ಆಗಲಿ ಇಬ್ಬರು ಒಟ್ಟೋಟ್ಟಿಗೆ ಕಾಣಿಸಿಕೊಂಡು, ಲವ್​ ಗಾಸಿಪ್​ಗೆ ಇನ್ನಷ್ಟು ಬೂಸ್ಟ್ ನೀಡುತ್ತಿದ್ದರು. ಆದ್ರೆ ಇವರ ಮಧ್ಯೆ ಈಗ ಏನು ಸರಿ ಇಲ್ಲ ಅನ್ನೋ ಗಮಲು ಹರಡೋದಕ್ಕೆ ಶುರುವಾಗಿದೆ.
2 ವರ್ಷಗಳ ಡೇಟಿಂಗ್ ನಂತರ ದೂರ ದೂರ, ಸಂಬಂಧಕ್ಕೆ ತಿಲಾಂಜಲಿ!
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಈ ಜೋಡಿ ತಮ್ಮ ಸಂಬಂಧ ಕೊನೆಗೊಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹೊತ್ತಲ್ಲೇ ಫ್ಯಾನ್ಸ್​ಗೆ ತಮನ್ನಾ, ವಿಜಯ್​ ವರ್ಮಾ ಶಾಕಿಂಗ್​ ನ್ಯೂಸ್​​ ಕೊಟ್ಟಿದ್ದಾರೆ.
ಲಸ್ಟ್ ಸ್ಟೋರೀಸ್ 2.. 2023ರಲ್ಲಿ ತೆರೆಕಂಡ ಸಿನಿಮಾ. ಈ ಚಿತ್ರದಲ್ಲೇ ತಮನ್ನಾ-ವಿಜಯ್ ಲವ್​ ಟ್ರ್ಯಾಕ್​ ಶುರುವಾಗಿತ್ತು. ಮೊದಲಿಗೆ ಈ ವಿಚಾರವನ್ನ ತಳ್ಳಿ ಹಾಕಿದ್ದ ಜೋಡಿ, ಮೆಲ್ಲ ಮೆಲ್ಲನೇ ಒಪ್ಪಿಕೊಂಡಿತ್ತು. ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಜನರು ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಎರಡು ವರ್ಷ ಪೂರ್ಣಗೊಳ್ಳುವ ಮುಂಚೆನೇ ಬೇರ್ಪಡುವಿಕೆಯ ಸುದ್ದಿ ಅಬ್ಬಿದೆ. ಇದಕ್ಕೆ ಸಾಕ್ಷಿ ಇನ್‌ಸ್ಟಾಗ್ರಾಮ್.
ಅಸಲಿಗೆ ಆಗಿದ್ದೇನು?
- ತಮನ್ನಾ ಭಾಟಿಯಾ-ವಿಜಯ್ ವರ್ಮಾ ಮಧ್ಯೆ ಭಿನ್ನಾಭಿಪ್ರಾಯ
- ಕಳೆದ ವಾರವಷ್ಟೇ ತಮನ್ನಾ-ವಿಜಯ್ ಬ್ರೇಕಪ್​ ಮಾಡಿಕೊಂಡರು
- ಮುಂದೆ ದಿನಗಳಲ್ಲಿ ಒಳ್ಳೆ ಸ್ನೇಹಿತರಾಗಿರೋಣ ಎನ್ನುವ ನಿರ್ಧಾರ
- ತಮನ್ನಾ-ವಿಜಯ್ ಬೇರ್ಪಟ್ಟಿದ್ರೂ ಯಾವುದೇ ಹೇಳಿಕೆ ನೀಡಿಲ್ಲ
- ಇನ್‌ಸ್ಟಾದಲ್ಲಿ ಪರಸ್ಪರ ಜೊತೆಗಿದ್ದ ಎಲ್ಲಾ ಫೋಟೋ ಡಿಲೀಟ್
ಚಿತ್ರರಂಗದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರಿಗೂ ಒಳ್ಳೆಯ ಬೇಡಿಕೆ ಇದೆ. ಸದ್ಯ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಬ್ರೇಕಪ್ ಮಾಡಿಕೊಂಡು ಪರಸ್ಪರ ಸ್ನೇಹಿತರಾಗಿ ಮುಂದುವರಿಯುವ ನಿರ್ಧಾರಕ್ಕೆ ಬಂದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅದ್ಹೇನೆ ಇರಲಿ ಹಾಟ್ ಕಪಲ್ ದೂರಾಗಿರೋದು ಸುದ್ದಿ ಕೇಳಿ ಫ್ಯಾನ್ಸ್​ ಶಾಕ್​ನಲ್ಲಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ