newsfirstkannada.com

ತಮ್ಮದೇ ರೂಲ್ಸ್​ ಬ್ರೇಕ್ ಮಾಡಿದ ಮಿಲ್ಕ್​ ​ಬ್ಯೂಟಿ; ಸಂಪ್ರದಾಯಸ್ಥ ಪ್ರೇಕ್ಷಕರಿಂದ ಭಾರೀ ಆಕ್ರೋಶ..!

Share :

Published June 29, 2023 at 7:14am

  17 ವರ್ಷದ ರೂಲ್ಸ್​ ಬ್ರೇಕ್ ಮಾಡಿದ ತಮನ್ನಾ ಭಾಟಿಯಾ?

  ಅವ್ರು ಮಾಡಿದ್ರೆ ಸರಿ.. ನಾವು ಮಾಡಿದ್ರೆ ತಪ್ಪಾ? -ನಟಿ ಗರಂ

  ಚುಂಬನದ ದೃಶ್ಯಗಳ ಬಗ್ಗೆ ನನ್ನ ನಿಯಮ ಅರ್ಥಹೀನ -ತಮನ್ನಾ

ಕಳೆದ ಕೆಲವು ದಿನಗಳಿಂದ ಎಲ್ಲೇ ನೋಡಿದ್ರು ಮಿಲ್ಕಿ ಬ್ಯೂಟಿ ತಮನ್ನಾದ್ದೇ ಸದ್ದು ಗದ್ದಲ. ತಮನ್ನಾ ಬೋಲ್ಡ್​ ಸೀನ್​ಗಳ ಬಗ್ಗೆನೇ ಚರ್ಚೆ. ತಮನ್ನಾ ಹಂಗೆ ಮಾಡಿದ್ದಾರೆ, ತಮನ್ನಾ ಹಿಂಗೆ ಮಾಡಿದ್ದಾರೆ, ತಮನ್ನಾ ಕಿಸ್ ಮಾಡಿದ್ದಾರೆ ಅದೂ ಇದು ಅಂಥ ಒಂದೇ ಸಮನೇ ಡಿಬೇಟ್. ಇನ್ನು ನೆಟ್ಟಿಗರಿಗೆ ಇಂಥಾ ವಿಷ್ಯಗಳು ಸಿಕ್ಕರೆ ಸಾಕು ಅಲ್ವಾ.. ಜನ್ಮ ಜಾಲಾಡಿಸಿಬಿಡ್ತಾರೆ. ಸದ್ಯ ತಮನ್ನಾ ವಿಚಾರದಲ್ಲಿ ಅದೇ ಆಗ್ತಿದೆ.

ತಮನ್ನಾ ನಟನೆಯ ವೆಬ್​ ಸಿರೀಸ್​ವೊಂದು ಬಿಡುಗಡೆಯಾಗಿತ್ತು. ‘ಜೀ ಕರ್ದಾ’ ಎನ್ನುವ ವೆಬ್ ಸಿರೀಸ್​ನಲ್ಲಿ ಸರ್ಪ್ರೈಸ್​ ಆಗಿ ಕಾಣಿಸಿಕೊಂಡ ತಮನ್ನಾ ತುಂಬಾನೇ ಬೋಲ್ಡ್ ಆಗಿ ನಟಿಸಿದ್ದಾರೆ. ಹಾಗಾದ್ರೆ ಇಷ್ಟು ದಿನ ತಮನ್ನಾ ಬೋಲ್ಡ್ ಆಗಿ ನಟಿಸೇ ಇಲ್ವಾ ಅಂದ್ರೆ ತಪ್ಪಾಗುತ್ತೆ. ಈ ಹಿಂದೆಯೂ ಬೋಲ್ಡ್​ ಆಗಿ ನಟಿಸಿದ್ದರು.. ಆದ್ರೆ ಇಷ್ಟೊಂದು ಇನ್​ಡೆಪ್ತ್​ ಆಗಿ ಕಾಣಿಸಿಕೊಂಡಿರಲಿಲ್ಲ. ಇಷ್ಟೊಂದು ಹಸಿಬಿಸಿ ಸಂಭಾಷೆಯನ್ನೂ ಹೇಳಿರಲಿಲ್ಲ. ಈ ಹಿಂದಿನ ಚಿತ್ರಗಳಿಗಿಂತ ತೀರಾ ಅಂದ್ರೆ ತೀರಾನೇ ಎಕ್ಸ್​ಪೋಸ್​ ಆಗಿದ್ದರು ಸ್ಟಾರ್ ನಟಿ.

ಜೀ ಕರ್ದಾ ವೆಬ್ ಸಿರೀಸ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಅಷ್ಟಕ್ಕೆ ಸುಮ್ಮನಾಗಿಲ್ಲ. ತಮನ್ನಾಗೆ ಇದು ಬೇಕಿತ್ತಾ ಅಂತ ಇನ್ನೂ ಚರ್ಚೆಯಾಗ್ತಿರುವಾಗಲೇ ಲಸ್ಟ್​ ಸ್ಟೋರಿಸ್​ 2 ಎನ್ನುವ ಮತ್ತೊಂದು ವೆಬ್ ಸಿರೀಸ್​ ಮೂಲಕ ಶ್ವೇತಾ ಸುಂದರಿ ಎಂಟ್ರಿ ಕೊಡ್ತಿದ್ದಾರೆ. ನೆಟ್​ಪ್ಲಿಕ್ಸ್​ನಲ್ಲಿ ಇದೇ ವಾರ ಪ್ರೀಮಿಯರ್​ ಕೂಡ ಆಗ್ತಿದೆ. ಬಟ್, ಪೂರ್ತಿ ಪಿಚ್ಚರ್ ನೋಡೋದಕ್ಕೂ ಮುಂಚೆಯೇ ಸಂಪ್ರದಾಯಸ್ಥ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ ಈ ಚಿತ್ರದ ಟ್ರೇಲರ್. ಹೌದು, ಲಸ್ಟ್​ ಸ್ಟೋರಿಸ್​ 2 ಸಿನಿಮಾ ಮದುವೆ, ಫ್ಯಾಮಿಲಿ, ರಿಲೇಶಿಷನ್​ ಷಿಪ್, ಲೈಂಗಿಕ ಸಂಬಂಧಗಳ ಕುರಿತಾಗಿ ಮೂಡಿ ಬಂದಿರುವ ಸಿನಿಮಾ. ರೆಗ್ಯುಲರ್​ ಪ್ರೇಕ್ಷಕರಿಗೆ ಇದು ಕಾಮನ್ ಅನಿಸಿದರೂ ತಮನ್ನಾ ಫಾಲೋವರ್ಸ್​ಗೆ ಇದು ಶಾಕ್ ಕೊಟ್ಟಿದೆ.

ಕಳೆದ 17 ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿರುವ ತಮನ್ನಾ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ತೆರೆಮೇಲೆ ಇದುವರೆಗೂ ಯಾವ ನಟನ ಜೊತೆಯೂ ಕಿಸ್ಸಿಂಗ್ ಸೀನ್ ಮಾಡಿಲ್ಲ. ಈ ನಿಯಮವನ್ನ ತಮನ್ನಾ ತುಂಬಾ ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬಂದಿದ್ದರು. 17 ವರ್ಷದ ಬಳಿಕ ಇದೇ ಮೊದಲ ಸಲ ತಮನ್ನಾ ಈ ರೂಲ್ಸ್​ನ ಬ್ರೇಕ್ ಮಾಡಿದ್ದಾರೆ. ಅದು ತನ್ನ ಪ್ರಿಯಕರನಿಗಾಗಿ ಅನ್ನೋದು ವಿಶೇಷವಾಗಿ ಗಮನಿಸಲೇಬೇಕು.

ಲಸ್ಟ್​ ಸ್ಟೋರಿಸ್ 2 ಚಿತ್ರದಲ್ಲಿ ತಮನ್ನಾ ಜೊತೆ ಬಾಯ್​ಫ್ರೆಂಡ್​ ವಿಜಯ್ ವರ್ಮಾ ಸಹ ನಟಿಸಿದ್ದಾರೆ. ವಿಜಯ್ ವರ್ಮಾ ಜೊತೆ ತಮನ್ನಾ ರಿಲೇಶಿಷನ್​ಷಿಪ್​ ಬಗ್ಗೆ ಸ್ಪೆಷಲ್ ಆಗಿ ಹೇಳೋದು ಬೇಕಿಲ್ಲ. ಯಾಕಂದ್ರೆ ವಿಜಯ್ ವರ್ಮಾ ಮತ್ತು ತಮನ್ನಾ ಪ್ರೇಮಕಥೆ ಸೌತ್ ​ಇಂದ ನಾರ್ತ್​ವರೆಗೂ ಗೊತ್ತಿರೋ ವಿಷ್ಯನೇ. ಇದುವರೆಗೂ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ ಈ ಸುವರ್ಣ ಅವಕಾಶ ಲಿಸ್ಟ್​ ಸ್ಟೋರಿಸ್​ 2 ಚಿತ್ರದಲ್ಲಿ ಸಿಕ್ಕಿದ್ದು, ತಮನ್ನಾ ಮತ್ತು ವಿಜಯ್ ವರ್ಮಾ ಕಿಸ್ಸಿಂಗ್ ಸೀನ್ ಮಾಡಿದ್ದಾರಂತೆ. 17 ವರ್ಷದಿಂದ ಸ್ಟ್ರಿಟ್​ ಆಗಿ ಫಾಲೋ ಮಾಡ್ಕೊಂಡು ಬಂದಿದ್ದ ತಮನ್ನಾ ತನ್ನ ಬಾಯ್​ಫ್ರೆಂಡ್​ ಜೊತೆಗೆ ಕಿಸ್ ಸೀನ್ ಮಾಡೋದಕ್ಕಾಗಿ ತನ್ನದೇ ರೂಲ್​​ನ ಬ್ರೇಕ್ ಮಾಡಿದ್ದು ಈಗ ಚರ್ಚೆಯ ಕೇಂದ್ರಬಿಂದು ಆಗಿದೆ.

ಒಂದ್ಕಡೆ ಬೋಲ್ಡ್​ ಸೀನ್​. ಮತ್ತೊಂದೆಡೆ ಹಸಿಬಿಸಿ ಸಂಭಾಷಣೆ.. ಅದ್ರ ಜೊತೆಗೆ ಬಾಯ್​ಫ್ರೆಂಡ್​ ಜೊತೆ ಕಿಸ್​.. ಈ ಎಲ್ಲಾ ವಿಷ್ಯದಲ್ಲೂ ತಮನ್ನಾ ಸೋಶಿಯಲ್ ಮೀಡಿಯಾದ ಟಾರ್ಗೆಟ್​ ಆದರು. ಭಾರತೀಯ ಸಂಸ್ಕೃತಿಗೆ ತಮನ್ನಾ ಧಕ್ಕೆ ತರ್ತಿದ್ದಾರೆ ಅಂತ ಟೀಕಿಸಿದ್ರು. ಲಸ್ಟ್​ ಸ್ಟೋರಿಸ್​ ಬ್ಯಾನ್ ಮಾಡಿ ಅಂತ ದೂರಿದ್ರು. ಸಂಪ್ರದಾಯಸ್ಥರು, ಮಕ್ಕಳು ನೋಡೋ ಸಿನಿಮಾನಾ ಇದು ಅಂತ ಕಿಡಿಕಾರಿದ್ರು. ಈ ಎಲ್ಲಾ ಟೀಕೆ, ಆಕ್ರೋಶಗಳಿಗೂ ತಮನ್ನಾ ಖಾರವಾಗಿ ತಿರುಗೇಟು ಕೊಟ್ಟಿದ್ದು, ಸ್ಟಾರ್​ ನಟರ ವಿರುದ್ಧವೂ ಸಮರ ಸಾರಿದ್ದಾರೆ.

ಅವ್ರು ಮಾಡಿದ್ರೆ ಸರಿ.. ನಾವು ಮಾಡಿದ್ರೆ ತಪ್ಪಾ?

ಕಿಸ್ಸಿಂಗ್ ಸೀನ್ಸ್​, ಬೋಲ್ಡ್​ ಡೈಲಾಗ್ಸ್​​ನ ಕಾರಣದಿಂದ ತಮನ್ನಾನ ತರಾಟೆಗೆ ತೆಗೆದುಕೊಳ್ತಿರುವವರ ವಿರುದ್ಧ ಆವಂತಿಕಾ ಕಿಡಿಕಾರಿದ್ದಾರೆ. ಸ್ಟಾರ್​ ನಟರು ರೊಮ್ಯಾನ್ಸ್​ ಮಾಡಿದ್ರೆ ಸರಿ, ನಾವು ಮಾಡಿದ್ರೆ ತಪ್ಪಾ ಅಂತ ಪ್ರಶ್ನಿಸಿದ್ದಾರೆ. ಹೌದು, ಖಾಸಗಿ ವಾಹಿನಿಯ ಜೊತೆ ಮಾತಾನಾಡಿರುವ ತಮನ್ನಾ, ಸಿನಿಮಾ ಇಂಡಸ್ಟ್ರಿಯಲ್ಲಿರುವ ದ್ವಂದ್ವ ನಿಲುವನ್ನ ಪ್ರಶ್ನಿಸಿದ್ದಾರೆ. ”ಹೀರೋಗಳು ಅಸಭ್ಯವಾಗಿ ಮಾತಾಡಿದ್ರು, ರೊಮ್ಯಾನ್ಸ್ ಮಾಡಿದ್ರು ಸೂಪರ್ ಸ್ಟಾರ್ ಆಗ್ತಾರೆ. ಆದರೆ ಹುಡುಗಿ ಅಂಥ ಪಾತ್ರ ಮಾಡಿದ್ರೆ ಅವಳ ಚಾರಿತ್ರ್ಯ ಬಗ್ಗೆ ಚರ್ಚೆ ಆಗುತ್ತೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೀರೋಗಳು ಅಸಭ್ಯವಾಗಿ ಮಾತಾಡಿದ್ರು, ರೊಮ್ಯಾನ್ಸ್ ಮಾಡಿದ್ರು ಸೂಪರ್ ಸ್ಟಾರ್ ಆಗ್ತಾರೆ. ಆದರೆ ಹುಡುಗಿ ಅಂಥ ಪಾತ್ರ ಮಾಡಿದ್ರೆ ಅವಳ ಚಾರಿತ್ರ್ಯ ಬಗ್ಗೆ ಚರ್ಚೆ ಆಗುತ್ತೆ ಸಮಾಜ ಯಾಕೆ ಹೀಗಿದೆ ಎಂದು ಅರ್ಥವಾಗುತ್ತಿಲ್ಲ. ನನ್ನ 18 ವರ್ಷಗಳ ವೃತ್ತಿ ಜೀವನದಲ್ಲಿ ನಾನು ಎಂದಿಗೂ ತೆರೆಯ ಮೇಲೆ ಮುತ್ತಿಟ್ಟಿಲ್ಲ. ಈ ಹಿಂದೆ ನಾನು ಚುಂಬನದ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ನಟಿಯಾಗಿ ನಾನೇಕೆ ಅಡೆತಡೆಗಳು ಮತ್ತು ನಿಯಮಗಳನ್ನು ಹಾಕಬೇಕು? ನಾನೇಕೆ ನಟಿಯಾಗಿ ಮತ್ತಷ್ಟು ಬೆಳೆಯಬಾರದು ಎಂದು ಕೇಳಿಕೊಂಡಾಗ, ಚುಂಬನದ ದೃಶ್ಯಗಳ ಬಗ್ಗೆ ನನ್ನ ನಿಯಮ ಅರ್ಥಹೀನ ಎನಿಸಿತು. ಹಾಗಾಗಿ ಆ ನಿಯಮವನ್ನು ಮುರಿದಿದ್ದೇನೆ
ತಮನ್ನಾ

ವಿಜಯ್ ವರ್ಮಾ ಜೊತೆಗೆ ಯಾಕೆ ಕಿಸ್ಸಿಂಗ್ ಮಾಡಬೇಕಾಯಿತು ಅಂತಾನೂ ಹೇಳ್ಕೊಂಡಿದ್ದಾರೆ. ಸಾಮಾನ್ಯವಾಗಿ ನಟರ ಜೊತೆ ನಟಿಸುವಾಗ ಅದು ಸೇಫ್ ಅಂತ ಅನಿಸುತ್ತಿರಲಿಲ್ಲ. ನಮಗೆ ಸೇಫ್ ಅನಿಸಬೇಕು. ಹಾಗಂತ ಭಯಪಟ್ಟು ಮಾಡಿಲ್ಲ ಅಂತ ಅಲ್ಲ. ವಿಜಯ್ ವರ್ಮಾ ತುಂಬಾ ಸೇಫ್ ಫೀಲ್ ಕೊಟ್ಟರು. ಸೋ ಇಷ್ಟ ಆಯಿತು ಎಂದಿದ್ದಾರೆ. ಲಸ್ಟ್​ ಸ್ಟೋರಿಸ್​ ನೋಡ್ಬೇಡಿ, ಇದು ಫ್ಯಾಮಿಲಿ ಜೊತೆ ನೋಡೋ ಸಿನಿಮಾ ಅಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗ್ತಿದೆ.. ಈ ಬಗ್ಗೆ ರಿಯಾಕ್ಟ್​ ಮಾಡಿರೋ ತಮನ್ನಾ, ”ಲಸ್ಟ್​ ಸ್ಟೋರಿಸ್​ ಅಂದ್ರೆ ಬರೀ ಕಾಮ ಮಾತ್ರವಲ್ಲ.. ಇದರಲ್ಲಿ ಡ್ರಾಮ ಇದೆ, ರೊಮ್ಯಾನ್ಸ್ ಇದೆ. ಆಕ್ಷನ್ ಇದೆ. ತಾಯಿ ಪ್ರೀತಿಯಿದೆ. ಅಜ್ಜಿ ಪ್ರೀತಿಯಿದೆ. ಮಾಜಿ ಪ್ರಿಯಕರನ ಪ್ರೀತಿಯಿದೆ. ಅಣ್ಣನ ಪ್ರೀತಿ ಎಲ್ಲವೂ ಸೇರಿದೆ” ಅಂತ ಹೇಳಿದ್ದಾರೆ. ಒಟ್ನಲ್ಲಿ ಬಾಯ್​ಫ್ರೆಂಡ್​, ಡೇಟಿಂಗ್, ಕಿಸ್ಸಿಂಗ್ ಅಂತ ತಮನ್ನಾ ತುಂಬಾನೇ ಸದ್ದು ಮಾಡ್ತಾ ಇದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ತಮ್ಮದೇ ರೂಲ್ಸ್​ ಬ್ರೇಕ್ ಮಾಡಿದ ಮಿಲ್ಕ್​ ​ಬ್ಯೂಟಿ; ಸಂಪ್ರದಾಯಸ್ಥ ಪ್ರೇಕ್ಷಕರಿಂದ ಭಾರೀ ಆಕ್ರೋಶ..!

https://newsfirstlive.com/wp-content/uploads/2023/06/TAMANNA-2.jpg

Load More