/newsfirstlive-kannada/media/post_attachments/wp-content/uploads/2025/05/ROOPESH-RAJANNA.jpg)
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಕರ್ನಾಟಕ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್ (Mysore sandal soap) ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಎರಡು ವರ್ಷದವರೆಗೆ ರಾಯಭಾರಿ ಸೇವೆಗೆ 6.20 ಕೋಟಿ ರೂಪಾಯಿ ಹಣವನ್ನು ಪಡೆಯಲಿದ್ದಾರೆ ನಟಿ.
ಇನ್ನು, ತಮನ್ನಾ ಆಯ್ಕೆಗೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಕಲಾವಿದರನ್ನ ಕಡೆಗಣಿಸಿ ಪರಭಾಷಿಕರಿಗೇಕೆ ಮಣೆ ಎಂಬ ಟೀಕೆ ವ್ಯಕ್ತವಾಗಿದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಕನ್ನಡದವರಿಂದಲೇ ಪ್ರಚಾರ ಮಾಡಬಹುದಿತ್ತು. ಮೈಸೂರು ಸ್ಯಾಂಡಲ್ಗೆ ತಮನ್ನಾ ಬೇಕಾಗಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಕೈಕೊಟ್ಟ ಜಕೊಬ್ ಬೆಥಲ್.. ಆರ್ಸಿಬಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಎಂಟ್ರಿ..!
ಇದೇ ವಿಚಾರಕ್ಕೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಪ್ರತಿಕ್ರಿಯಿಸಿ.. ಕನ್ನಡಿಗರ ತೆರಿಗೆ ಹಣ ಬಳಸಿ ತಮನ್ನಾ ರಾಯಭಾರಿ ನೀಡಲಾಗಿದೆ. ಈಗಾಗಲೇ ಈ ಸಂಸ್ಥೆ ಲಾಭದಲ್ಲಿದೆ. ನಂದಿನಿ ಸಂಸ್ಥೆಗೆ ಅಣ್ಣವರು ಮತ್ತು ಅಪ್ಪು ಇದ್ರು. ಪ್ರಪಂಚದಾದ್ಯಂತ ಹೆಸರು ಗಳಿಸಿದೆ. ಆದರೆ ಸ್ಯಾಂಡಲ್ಸೋಪ್ಗೆ ಯಾಕೆ ಹಿಂದಿ ನಟಿ? ಕನ್ನಡದವರು ಇಲ್ಲಿ ಕಡಿಮೆ ಆಗಿದ್ದಾರಾ? ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಒಪ್ಪಂದ ರದ್ದು ಮಾಡಬೇಕು. ಸಾಕಷ್ಟು ಲಾಭದಲ್ಲಿರುವ ಸಂಸ್ಥೆ ಈ ರೀತಿ ಹಣ ಪೋಲು ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಸ್ಪಷ್ಟನೆ
ಸರ್ಕಾರದ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಎಂಬಿ ಪಾಟೀಲ್.. ತಮನ್ನಾ ಆಯ್ಕೆ ಮಾರ್ಕೆಟಿಂಗ್ ವಿಭಾಗದ ಜವಾಬ್ದಾರಿ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಕರ್ನಾಟಕದಾಚೆಯೂ ಮಾರ್ಕೆಟ್ ಮಾಡಲು ಪ್ರಯತ್ನ ಮಾಡಲಾಗ್ತಿದೆ. ಈ ವಿಚಾರದಲ್ಲಿ ಕನ್ನಡ ಕಲಾವಿದರನ್ನ ಕಡೆಗಣಿಸಿಲ್ಲ, ಅಗೌರವ ತೋರಿಸಿಲ್ಲ. ಮಾರುಕಟ್ಟೆ ಉದ್ದೇಶದಿಂದ ತಮನ್ನಾ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ನಾಳೆ ಆರ್ಸಿಬಿ ಪಂದ್ಯ.. ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರೆಲ್ಲ ಆಡ್ತಾರೆ..?
ಮಾರ್ಕೆಟಿಂಗ್ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಲಾಗಿದೆ. ತಮನ್ನಾ ರೀಚ್, ಅವರ ಲಭ್ಯತೆ, ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಎಲ್ಲವೂ ಅವಲೋಕಿಸಲಾಗಿದೆ. 2028ರ ವೇಳೆಗೆ ವಾರ್ಷಿಕವಾಗಿ 5000 ಕೋಟಿ ಆದಾಯ ಗಳಿಸುವ ಉದ್ದೇಶ ಇದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ