/newsfirstlive-kannada/media/post_attachments/wp-content/uploads/2025/02/Tamanna-And-kajol-Agarwal.jpg)
ನವದೆಹಲಿ: ಬೆಳ್ಳಿತೆರೆ ಮೇಲೆ ಮಿಂಚಿನ ಬಳ್ಳಿಯಂತೆ ಬಳುಕೋ ನಟಿಯರು ಒಮ್ಮೊಮ್ಮೆ ಅವರಿವರ ಜೊತೆ ಕಾಣಿಸಿಕೊಂಡು ಸುದ್ದಿಯಾಗುತ್ತಾರೆ. 2020-22ರಲ್ಲಿ ಕ್ರಿಪ್ಟೋ ಕರೆನ್ಸಿ ಕಂಪನಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಟಿಯರಿಬ್ಬರಿಗೆ 2025ರಲ್ಲಿ ಸಂಕಷ್ಟ ಎದುರಾಗಿದೆ.
ಕಡಿಮೆ ಹೂಡಿಕೆ, ಅಧಿಕ ಲಾಭ ಅಂತ ಸಾವಿರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ ಕ್ರಿಪ್ಟೋ ಕರೆನ್ಸಿ ಕಂಪನಿಯ ಕೃಪಾಕಟಾಕ್ಷಕ್ಕೆ ಇಬ್ಬರು ಖ್ಯಾತ ನಟಿಯರು ಕಂಗಾಲಾಗಿದ್ದಾರೆ. ನಟಿಮಣಿಯರಾದ ತಮನ್ನಾ ಮತ್ತು ಕಾಜಲ್ ಅಗರ್ವಾಲ್ ಅವರ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಏನಿದು ‘ಕ್ರಿಪ್ಟೋ’ ಕಂಟಕ?
2020-22ರ ಅವಧಿಯಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕ್ರಿಪ್ಟೋ ಕರೆನ್ಸಿ ಕಂಪನಿ ತನ್ನ ಮುಖ್ಯ ಶಾಖೆಯನ್ನು ತೆರೆದಿತ್ತು. ಈ ಮುಖ್ಯ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ನಟಿಯರಾದ ತಮನ್ನಾ ಭಾಗಿಯಾಗಿದ್ದರು.
ಕ್ರಿಪ್ಟೋ ಕರೆನ್ಸಿ ಕಂಪನಿಯ ಮತ್ತೊಂದು ಕಾರ್ಯಕ್ರಮ ಮಹಾಬಲಿಪುರಂನಲ್ಲಿ ನಡೆದಿತ್ತು. ಮಹಾಬಲಿಪುರಂ ಹೋಟೆಲ್‌ನಲ್ಲಿ ನಡೆದ ಸಮಾರಂಭಕ್ಕೆ ನಟಿ ಕಾಜಲ್ ಅಗರ್ವಾಲ್ ಆಗಮಿಸಿದ್ದರು.
ಕ್ರಿಪ್ಟೋ ಕರೆನ್ಸಿ ಕಂಪನಿ ಮುಂಬೈನಲ್ಲಿ ದೊಡ್ಡ ಪಾರ್ಟಿ ಆಯೋಜಿಸಿ ಹಣ ಸಂಗ್ರಹ ಮಾಡಿತ್ತು. 10 ಜನರಿಂದ ಸುಮಾರು 2.40 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿದ ಆರೋಪ ಈ ಕಂಪನಿ ಮೇಲಿದೆ.
ಹೆಚ್ಚಿನ ಲಾಭದ ಆಸೆ ತೋರಿಸಿ ಹೂಡಿಕೆ ಮಾಡಿಸಿದ್ದ ಕಂಪನಿ ನಂತರ ಆ ಲಾಭವನ್ನೂ ಕೊಡದೇ ಜನರಿಗೆ ವಂಚಿಸಿದೆ. ನಿವೃತ್ತ ಸರ್ಕಾರಿ ಉದ್ಯೋಗಿ ಅಶೋಕ್ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಕಂಪನಿಯ ಎಂಡಿ ಮತ್ತು ಮಾನೇಜರ್‌ಗಳಾದ ನಿತೀಶ್ ಜೈನ್ & ಅರವಿಂದ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: VIDEO: ಹೆಂಡತಿ ಕಾಟ; ಕಿರುಕುಳಕ್ಕೆ ಬೇಸತ್ತು ಲೈವ್ನಲ್ಲೇ ಪ್ರಾಣ ಬಿಟ್ಟ IT ಕಂಪನಿ ಮ್ಯಾನೇಜರ್
ಸದ್ಯ ಈ ವಂಚನೆಯ ಪ್ರಕರಣದಲ್ಲಿ ನಟಿಯರಾದ ತಮನ್ನಾ, ಕಾಜಲ್ ಅಗರ್ವಾಲ್ ಸಹ ಭಾಗಿಯಾದ ಶಂಕೆ ವ್ಯಕ್ತವಾಗಿದೆ. ಈ ಕಂಪನಿಗೆ ಸಾಥ್ ನೀಡಿದ್ದ ನಟಿಯರಿಗೆ ಪುದುಚೇರಿ ಪೊಲೀಸರು ನೋಟಿಸ್ ನೀಡಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಅನುಮಾನ ದಟ್ಟವಾದರೆ ತಮನ್ನಾ ಹಾಗೂ ಕಾಜಲ್ ಅಗರ್ವಾಲ್ ಅವರು ವಿಚಾರಣೆ ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ