newsfirstkannada.com

ಸ್ಟಾರ್​​ ಹೀರೋ ಜತೆ ಲವ್​ನಲ್ಲಿದ್ದಾರಾ ನಟಿ ತಮನ್ನಾ ಭಾಟಿಯಾ? ಇಬ್ಬರ ವಿಡಿಯೋ ವೈರಲ್​​!

Share :

Published September 10, 2023 at 5:29pm

  ಸ್ಟಾರ್​ ಹೀರೋ ಜತೆಗೆ ಲವ್​​ನಲ್ಲಿದ್ದಾರಾ ತಮನ್ನಾ ಭಾಟಿಯಾ?

  ಇಬ್ಬರು ಕೈ ಕೈ ಹಿಡಿದು ಓಡಾಡುತ್ತಿರೋ ವಿಡಿಯೋ ವೈರಲ್​​..!

  ತಮನ್ನಾ ಭಾಟಿಯಾ, ವಿಜಯ್​ ವರ್ಮಾ ವಿಡಿಯೋ ಹಲ್​​ಚಲ್​​

ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ʼಜೈಲರ್‌ʼ ಚಿತ್ರ ಕಾವಾಲಾ ಹಾಡಿನ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಕ್ರೇಜ್‌ ಹೆಚ್ಚಾಗಿದೆ. ಇತ್ತೀಚೆಗೆ ತಮನ್ನಾ ವಿಜಯ್‌ ವರ್ಮಾ ಜೊತೆ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ ಅನ್ನೋ ಗಾಸಿಪ್ ಎಲ್ಲಡೆ ಹರಿದು ಬರ್ತಿದೆ. ಈ ಮಧ್ಯೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿರೋ ವಿಡಿಯೋ ವೈರಲ್​ ಆಗಿದೆ.

ಯೆಸ್​​, ತಮನ್ನಾ, ವಿಜಯ್​ ವರ್ಮಾ ಕಾರ್ಯಕ್ರಮದಲ್ಲಿ ಕೈ ಕೈ ಹಿಡಿದ ವಿಡಿಯೋ ನೋಡಿ ಯಾಕೋ ಲವ್‌ ಮ್ಯಾಟರ್‌ ನಿಜ ಎನ್ನುವಂತಿದೆ. ತಮನ್ನಾ ತನ್ನ ಗೆಳೆಯನ ಜೊತೆ ಫೋಟೋ ಕ್ಲಿಕ್‌ ಮಾಡುತ್ತಿರುವ ವಿಡಿಯೋ ಇದಾಗಿದೆ. ಇದಕ್ಕೆ ಜನ ಸೋಷಿಯಲ್​ ಮೀಡಿಯಾದಲ್ಲಿ ಭಿನ್ನಭಿನ್ನವಾಗಿ ಕಾಮೆಂಟಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್​ಗೂ ಮೊದಲೇ ಸಖತ್​ ಟ್ರೆಂಡ್ ಆಗಿತ್ತು. ಅದಕ್ಕೆ ಕಾರಣ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಟೆಪ್​ ಹಾಕಿರೋ ಕಾವಲಯ್ಯ ಸಾಂಗ್​ ಫುಲ್​ ಹಲ್​ಚಲ್ ಎಬ್ಬಿಸಿರುವುದು. ತಮನ್ನಾ ಡ್ಯಾನ್ಸ್​ಗೆ ಪಡ್ಡೆ ಹುಡುಗರ ಹಾರ್ಟ್ ಕಳೆದು ಹೋಗಿತ್ತು.

ಕಾವಲಯ್ಯ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್​ ಮಾಡಿತ್ತು. ಈ ಹಾಡು ಯೂಟ್ಯೂಬ್‌​ನಲ್ಲಿ 183 ಮಿಲಿಯನ್​​ ವೀವ್ಸ್​​ ಪಡೆದುಕೊಂಡಿದೆ. ದಿಲೀಪ್​ ಕುಮಾರ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕಲಾನಿಧಿ ಮಾರನ್​ ಜೈಲರ್​ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್​ವುಡ್ ಖ್ಯಾತ ನಟ​ ಶಿವರಾಜ್​ಕುಮಾರ್​, ಮಾಲಿವುಡ್​ ಮೋಹನ್​ಲಾಲ್​, ವಿನಾಯಕನ್​, ರಮ್ಯಾ ಕೃಷ್ಣ ಸೇರಿ ಅನೇಕ ತಾರಾಗಣ ಸಿನಿಮಾದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​​ ಹೀರೋ ಜತೆ ಲವ್​ನಲ್ಲಿದ್ದಾರಾ ನಟಿ ತಮನ್ನಾ ಭಾಟಿಯಾ? ಇಬ್ಬರ ವಿಡಿಯೋ ವೈರಲ್​​!

https://newsfirstlive.com/wp-content/uploads/2023/09/Vijay-Sharma_Tamannah.jpg

Load More