ಸಿಂಪಲ್​ ಆಗಿ ಕಾಣೋ ಧನುಷ್​ ಎಷ್ಟು ಕೋಟಿ ಒಡೆಯ.. ನೀವು ಅಂದುಕೊಂಡಾಗೆ ಇಲ್ಲ ಈ ನಟ!

author-image
Bheemappa
Updated On
ಸಿಂಪಲ್​ ಆಗಿ ಕಾಣೋ ಧನುಷ್​ ಎಷ್ಟು ಕೋಟಿ ಒಡೆಯ.. ನೀವು ಅಂದುಕೊಂಡಾಗೆ ಇಲ್ಲ ಈ ನಟ!
Advertisment
  • 150 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುತ್ತೆ ನಟನ ಬಂಗಲೆ
  • ಐಷಾರಾಮಿ ಕಾರು, ಮನೆ ಸೇರಿ ಲೈಫ್​ಸ್ಟೈಲ್​ ಸಖತ್ ರಿಚ್ ಆಗಿದೆ
  • ಒಂದು ಸಿನಿಮಾಕ್ಕೆ ಧನುಷ್ ಪಡೆಯುವ ಸಂಭಾನೆ ಕೋಟಿ ಕೋಟಿ!

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್​ ಧನುಷ್​ ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಲಿವುಡ್​, ಬಾಲಿವುಡ್​ ಸೇರಿದಂತೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್​ಗಳಲ್ಲಿ ಯಶಸ್ಸು ಕಂಡವರು. ಇವರು ಚೆನ್ನೈನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ನೋಡಲು ಸಿಂಪಲ್​ ಆಗಿ ಕಾಣಿಸುವ ನಟ ಧನುಷ್ ಅವರ ಒಟ್ಟು ಆಸ್ತಿ ಕೇಳಿದರೆ ಶಾಕ್ ಆಗೋದು ಪಕ್ಕಾ!.

ಧನುಷ್​ ನೋಡಲು ಸಣ್ಣಗೆ ಇನ್ನು ಯುವಕನಂತೆ ಕಾಣಿಸಿದರೂ ಸಿನಿಮಾದಲ್ಲಿ ಇವರ ನಟನೆಗೆ ಈಗಾಗಲೇ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ. ಸಿಂಪಲ್ ಆಗಿ ಕಾಣಿಸಿದರೂ ಐಷಾರಾಮಿ, ದುಬಾರಿ ಕಾರುಗಳೆಂದರೆ ಪಂಚ ಪ್ರಾಣ. ಇವರ ಲೈಫ್​ಸ್ಟೈಲ್​ ಸಖತ್ ರಿಚ್ ಆಗಿದೆ. ಅಲ್ಲದೇ ಧನುಷ್ ಆದಾಯ ಕೂಡ ಯಾರಿಗೂ ಏನು ಕಡಿಮೆ ಇಲ್ಲ. ಸಿನಿಮಾಗಳಲ್ಲಿ ಇವರ ನಟನೆಗೆ ಹೆಚ್ಚು ಯುವಕರೇ ಫಿದಾ ಆಗೋಗ್ತಾರೆ.

publive-image

ದಕ್ಷಿಣ ಭಾರತದ ಹೀರೋಗಳಲ್ಲಿ ಹೆಚ್ಚು ಸಂಭಾವನೆ ಪಡೆಯುವ ಧನುಷ್​ ಕೂಡ ಒಬ್ಬರು. ಧನುಷ್ ಅವರ ಒಟ್ಟು ಆಸ್ತಿ 250 ಕೋಟಿ ರೂಪಾಯಿಗಳು. ಇವರ ತಿಂಗಳ ಸಂಭಾವನೆಯೇ ಮೂರು ಕೋಟಿ ರೂಪಾಯಿ ಆಗಿದೆ. ಧನುಷ್ ಅವರು ಯಾವುದಾದರೂ ಒಂದು ಸಿನಿಮಾವನ್ನು ಒಪ್ಪಿಕೊಂಡರೇ ಆ ಸಿನಿಮಾದಿಂದ 20 ಕೋಟಿಯಿಂದ 35 ಕೋಟಿ ರೂಪಾಯಿವರೆಗೆ ಸಂಭಾವನೆ (ಸಂಬಳ) ಪಡೆಯುತ್ತಾರೆ. ಹಾಲಿವುಡ್​ನ ಗ್ರೇಮ್ಯಾನ್ ಸಿನಿಮಾದಲ್ಲಿ ಹಾಗೇ ಬಂದು ಹೀಗೆ ಹೋಗುವ ಸೀನ್​ಗೆ ಧನುಷ್​ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಚೆನ್ನೈನಲ್ಲಿರುವ ಧನುಷ್ ಅವರ ಅರಮನೆಯಂತಹ ಬಂಗಲೆ 150 ಕೋಟಿ ರೂಪಾಯಿ ಆಗಿದೆ. ಧನುಷ್​ 7Up ಮತ್ತು OLX ಬ್ರ್ಯಾಂಡ್​ಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಧನುಷ್​ಗೆ ಕಾರು ಕ್ರೇಜ್ ಸಖತ್​ ಆಗೇ ಇದೆ. ಹೀಗಾಗಿ ಧನುಷ್​ ಗ್ಯಾರೇಜ್​ನಲ್ಲಿ ದುಬಾರಿ ಮೊತ್ತದ ಐಷಾರಾಮಿ ಕಾರುಗಳು ಇವೆ. ಒಂದಕ್ಕಿಂತ ಇನ್ನೊಂದು ಬೆಲೆಬಾಳುವ ಕಾರು ಆಗಿದೆ. ಧನುಷ್​ ಕಾರು ಗ್ಯಾರೇಜ್​ನಲ್ಲಿ ಜಾಗ್ವಾರ್ (Jaguar), ಆಡಿ (Audi), ಬೆಂಟ್ಲಿ (Bentley), ರೋಲ್ಸ್ ರಾಯ್ಸ್ ಘೋಸ್ಟ್​ (Rolls-Royce Ghost) ಸೇರಿ ಇನ್ನು ಎರಡ್ಮೂರು ದುಬಾರಿ ಕಾರುಗಳು ಇವೆ.

ಇದನ್ನೂ ಓದಿ: ರಮ್ಯಾ ಪರ ನಿಂತ ದೊಡ್ಮನೆ ಕುಡಿ.. ವಿನಯ್ ರಾಜ್​ಕುಮಾರ್​ ಹೇಳಿದ್ದೇನು?

publive-image

ಧನುಷ್ ಅವರು 2004ರ ನವೆಂಬರ್​ 18 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರನ್ನು ವಿವಾಹವಾದರು. ನಂತರದ ದಿನಗಳಲ್ಲಿ ಕುಟುಂಬದಲ್ಲಿ ಬಂದ ಕೆಲ ಸಮಸ್ಯೆಗಳಿಂದ ಇಬ್ಬರು ಡಿವೋರ್ಸ್​ ಪಡೆದುಕೊಂಡು ಬೇರೆ ಬೇರೆ ವಾಸವಿದ್ದಾರೆ. ಸದ್ಯ ಈ ಇಬ್ಬರಿಗೆ ಎರಡು ಗಂಡು ಮಕ್ಕಳು ಇದ್ದಾರೆ. ಇದರಲ್ಲಿ ಹಿರಿಯ ಮಗ ಪದವಿ ಪೂರ್ಣಗೊಳಿಸಿದ್ದಾನೆ.

ಧನುಷ್ ಸಿನಿ ರಂಗದಲ್ಲಿ ಅಭಿನಯ ಮಾತ್ರ ಮಾಡಲ್ಲ, ಜೊತೆಗೆ ಒಳ್ಳೆಯ ಸಿಂಗರ್​ ಕೂಡ ಹೌದು. ಲಿರಿಕ್ಸ್​ರಚನೆ ಮಾಡುತ್ತಾರೆ. ಸಿನಿಮಾಗಳಿಗೆ ಬಂಡವಾಳ ಕೂಡ ಹೂಡಿಕೆ ಮಾಡುತ್ತಾರೆ. ಧನುಷ್​ ಎಲ್ಲ ಕಡೆಯೂ ಅಭಿಮಾನಿಗಳು ಹೊಂದಿದ್ದಾರೆ. ಆದರೆ ಧನುಷ್ ನಿಜವಾದ ಹೆಸರು ಯಾರಿಗೂ ಅಷ್ಟೇನೂ ತಿಳಿದಿಲ್ಲ. ಧನುಷ್ ನಿಜವಾದ ಹೆಸರು ವೆಂಕಟ್ ಫ್ರಭು ಆಗಿದೆ. 19 ವರ್ಷಕ್ಕೆ ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment