ತಮಿಳಿನ ಖ್ಯಾತ ನಟ ಚಾಕೊಲೇಟ್ ಬಾಯ್ ಅಂತಲೇ ಫೇಮಸ್
ಪತ್ನಿಗೆ ವಿಚ್ಛೇದನ ಕೊಡುವ ಮೂಲಕ ದೂರವಾದ ಚಾಕೊಲೇಟ್ ಬಾಯ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹ ನಿಜವಾಯ್ತು
ತಮಿಳಿನ ಖ್ಯಾತ ನಟ ಚಾಕೊಲೇಟ್ ಬಾಯ್ ಅಂತಲೇ ಫೇಮಸ್ ಆಗಿದ್ದ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟ ಜಯಂ ರವಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು, ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಮತ್ತು ಕಂಗನಾ ರಣಾವತ್ ಅವರೊಟ್ಟಿಗೆ ಕೆಲಸ ಮಾಡಿದ್ದರು. ಆದರೆ ಈಗ ಪತ್ನಿಗೆ ವಿಚ್ಛೇದನ ಕೊಡುವ ಮೂಲಕ ದೂರ, ದೂರ ಆಗಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗಳ ಮೊದಲ ಫೋಟೋ ರಿಲೀಸ್.. ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?
ಕೆಲವು ದಿನಗಳ ಹಿಂದೆ ಜಯಂ ಮತ್ತು ಅವರ ಪತ್ನಿ ಆರತಿ ರವಿ ನಡುವೆ ಏನೋ ಸರಿ ಇಲ್ಲ ಎಂಬ ಊಹಾಪೋಹ ಹಬ್ಬಿತ್ತು. ಆರತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ತಮ್ಮ ಮದುವೆ ಮತ್ತು ಜಯಂ ಅವರ ಇತರೆ ಫೊಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೇ ನೋಡಿದ ಅಭಿಮಾನಿಗಳು ಈ ಇಬ್ಬರ ನಡುವೆ ಏನೋ ಸರಿ ಇಲ್ಲ. ಹೀಗಾಗಿ ಆರತಿ ಅವರು ಎಲ್ಲ ಫೋಟೋಸ್ ಡಿಲೀಟ್ ಮಾಡಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹ ನಿಜವಾಗಿದೆ. 4 ಜೂನ್ 2009ರಲ್ಲಿ ಜಯಂ ರವಿ ಮತ್ತು ಆರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ದಂಪತಿ ಪರಪ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ದಂಪತಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಈ ಇಬ್ಬರ ವಿಚ್ಛೇದನ ವಿಚಾರವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ