/newsfirstlive-kannada/media/post_attachments/wp-content/uploads/2024/07/Shivakartikeyan-1.jpg)
ಕಾಲಿವುಡ್​ ನಟ ಶಿವಕಾರ್ತಿಕೇಯನ್​ ಮತ್ತು ಅವರ ಪತ್ನಿ ಆರತಿ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ. ಈ ಕುರಿತಾಗಿ ನಟ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಮಗುವಿನ ನಾಮಕರಣದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ನಟ ಶಿವಕಾರ್ತಿಕೇಯನ್​ ಮತ್ತು ಆರತಿ ದಂಪತಿಗೆ ಈಗಾಗಲೇ ಆರಾಧನಾ ಎಂಬ ಮಗಳಿದ್ದಾಳೆ. ಗುಗನ್​ ಎಂಬ ಮಗನಿದ್ದಾನೆ. ಇದೀಗ ಮೂರನೇ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದಾರೆ. ಜೊತೆಗೆ ಮಗನ ಹೆಸರನ್ನು ಅನಾವರಣ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Shivakartikeyan-2.jpg)
ಇದನ್ನೂ ಓದಿ: ಸೇತುವೆ ಮೇಲಿಂದ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ.. ಯುವಕನ ಮೃತದೇಹ ಪತ್ತೆ, ಯುವತಿಗಾಗಿ ಮುಂದುವರೆದ ಶೋಧ
ಶಿವಕಾರ್ತಿಕೇಯನ್ ಮೂರನೇ ಮಗನಿಗೆ ‘ಪವನ್’​ ಎಂದು ಹೆಸರಿಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮದ ವಿಡಿಯೋ ಹರಿದಾಡುತ್ತಿದೆ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಬರೀ 20 ಸಾವಿರಕ್ಕೆ Iphone 15 ಖರೀದಿಸಿ! ಈ ಆಫರ್​ ಮಿಸ್​ ಮಾಡ್ಬೇಡಿ
Aaradhana - Gugan - PAVAN ❤️❤️❤️ pic.twitter.com/T0YNorVIQb
— Sivakarthikeyan (@Siva_Kartikeyan)
Aaradhana - Gugan - PAVAN ❤️❤️❤️ pic.twitter.com/T0YNorVIQb
— Sivakarthikeyan (@Siva_Kartikeyan) July 15, 2024
">July 15, 2024
ನಟನ ಸಿನಿಮಾ ವಿಚಾರವನ್ನು ಗಮನಿಸುವುದಾದರೆ, ಶಿವಕಾರ್ತಿಕೇಯನ್ ಮುಂಬರುವ ‘ಅಮರನ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಆಕ್ಷನ್​ ಸಿನಿಮಾವಾಗಿದ್ದು, ರಾಜಕುಮಾರ್​ ಪೆರಿಯಸಾಮಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೈನಿಕನ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ.
‘ಅಮರನ್’​ ಸಿನಿಮಾದಲ್ಲಿ ಸಾಯಿ ಪಲ್ಲವಿ, ಭುವನ್​ ಅರೋರಾ, ರಾಹುಲ್​ ಬೋಸ್​​, ಸೇರಿ ಅನೇಕ ತಾರಾಗಣವನ್ನು ಈ ಸಿನಿಮಾ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us