/newsfirstlive-kannada/media/post_attachments/wp-content/uploads/2025/06/Srikanth_ACTOR.jpg)
ಚೆನ್ನೈ: ಮಾದಕ ವ್ಯಸನದ ಆರೋಪದಡಿ ತಮಿಳು ಸಿನಿಮಾ ನಟ ಶ್ರೀಕಾಂತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನುಂಗಮಬಕ್ಕಂ ಪೋಲಿಸ್ ಠಾಣೆಯಲ್ಲಿ ನಟನನ್ನು ವಿಚಾರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಟ ಶ್ರೀಕಾಂತ್ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ. ಪ್ರಸಾದ್ ಎನ್ನುವವರ ಜೊತೆ ಸಂಪರ್ಕ ಹೊಂದಿದ್ದರಿಂದ ನಟನನ್ನು ಬಂಧಿಸಲಾಗಿದೆ. ಈ ಪ್ರಸಾದ್ ಎನ್ನುವವರು AIADMK ಪಕ್ಷದ ಮಾಜಿ ಕಾರ್ಯಕರ್ತ ಆಗಿದ್ದಾರೆ. ಇವರನ್ನು ಈ ಹಿಂದೆ ಚೆನ್ನೈ ನಗರದಲ್ಲಿನ ಪಬ್​ವೊಂದರ ಜಗಳಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಐಶ್ವರ್ಯಾ ಗೌಡಗೆ ಭಾರೀ ಸಂಕಷ್ಟ.. ED ಇಂದ ಆಸ್ತಿ ಮುಟ್ಟುಗೋಲು
/newsfirstlive-kannada/media/post_attachments/wp-content/uploads/2025/06/Srikanth.jpg)
ತಮಿಳು, ತೆಲುಗು ಸಿನಿಮಾಗಳಲ್ಲಿ ಶ್ರೀಕಾಂತ್ ಅವರು ಹೆಚ್ಚಿನ ಮನ್ನಣೆ ಪಡೆದುಕೊಂಡಿದ್ದಾರೆ. 2022ರಲ್ಲಿ ತಮಿಳಿನ ರೋಜಾ ಕೂಟ್ಟಮ್ ಎನ್ನುವ ಸಿನಿಮಾ ಮೂಲಕ ಸಿನಿ ರಂಗಕ್ಕೆ ಶ್ರೀಕಾಂತ್ ಡೆಬ್ಯೂ ಮಾಡಿದ್ದರು. ಇದರ ನಂತರ ಏಪ್ರಿಲ್ ಮಾಧಥಿಲ್​, ಮನಸೆಲ್ಲಮ್ ಮತ್ತು ಪ್ರತಿಭಾನ್ ಕನವು ಸಿನಿಮಾಗಳಲ್ಲಿ ಸತತವಾಗಿ ನಟಿಸಿ ಯಶಸ್ವಿ ಕಂಡಿದ್ದರು. ತೆಲುಗು ಸಿನಿಮಾಗಳಲ್ಲಿ ಶ್ರೀಕಾಂತ್ ಅವರು ಶ್ರೀರಾಮ್​ ಎಂದೇ ಎಲ್ಲರಿಗೂ ಪರಿಚಿತರು.
ಶ್ರೀಕಾಂತ್ ಅವರು ಕೊನೆಯದಾಗಿ 2025ರ ಮಾರ್ಚ್​ 14ರಂದು ಬಿಡುಗಡೆಯಾದ ಕೊಂಜಮ್ ಕಾದಲ್ ಕೊಂಜಮ್ ಮೊದಾಲ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇದು ರೊಮ್ಯಾಂಟಿಕ್ ಕಾಮಿಡಿ ತಮಿಳು ಸಿನಿಮಾ ಆಗಿದೆ. ಇದರಲ್ಲಿ ಶ್ರೀಕಾಂತ್ ಮತ್ತು ಪೂಜಿತಾ ಪೊನ್ನದ ಲೀಡ್​ ರೋಲ್​ನಲ್ಲಿ ಅಭಿನಯ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us