Advertisment

ಶೂಟಿಂಗ್​ ವೇಳೆ ಖ್ಯಾತ ನಟನ ತಲೆಗೆ ಗಾಯ.. ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ

author-image
AS Harshith
Updated On
ಶೂಟಿಂಗ್​ ವೇಳೆ ಖ್ಯಾತ ನಟನ ತಲೆಗೆ ಗಾಯ.. ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ
Advertisment
  • ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವಘಡ
  • ನಟನ ತಲೆಗೆ ಗಾಯ.. ಆಸ್ಪತ್ರೆಯಲ್ಲಿ ಚಿಕಿತ್ಸೆ.. ವೈದ್ಯರು ಹೇಳಿದ್ದೇನು?
  • ನಟ ಆರೋಗ್ಯ ಸ್ಥಿತಿಯ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡ ನಿರ್ಮಾಪಕ

ತಮಿಳು ನಟ ಸೂರ್ಯ ಶೂಟಿಂಗ್​ ವೇಳೆ ತಲೆಗೆ ಗಾಯ ಮಾಡಿಕೊಂಡಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಲೆಗೆ ಸಣ್ಣ ಗಾಯವಾಗಿದ್ದು, ಈ ಘಟನೆಯ ನಂತರ ಶೂಟಿಂಗ್​ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisment

ಸೂರ್ಯ 44 ಎಂದು ಹೆಸರಿಸಲಾದ ಸಿನಿಮಾ ಶೂಟಿಂಗ್​ ವೇಳೆ ನಟನ ತಲೆಗೆ ಗಾಯವಾಗಿದೆ. ಈ ಸಿನಿಮಾವನ್ನು ಕಾರ್ತಿಕ್​ ಸುಬ್ಬರಾಜು​ ನಿರ್ದೇಶಿಸುತ್ತಿದ್ದು, ರಾಜಶೇಖರ್​ ಪಾಂಡಿಯನ್ ನಿರ್ಮಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ನಟನ ಕುರಿತು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ನೇಪಾಳದ ಬಳಿಕ ಮತ್ತೊಂದು ಅವಘಡ, ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ.. 70 ಜನ ದಹನ

ಆಗಸ್ಟ್​ 9 ರಂದು ಎಕ್ಸ್​ನಲ್ಲಿ ಬರೆದುಕೊಂಡ ರಾಜಶೇಖರ್​ ಪಾಂಡಿಯನ್​​, "ಪ್ರಿಯ #ಅನ್ಬಾನಾ ಅಭಿಮಾನಿಗಳೇ, ಇದು ಕೇವಲ ಒಂದು ಸಣ್ಣ ಗಾಯವಾಗಿದೆ. ದಯವಿಟ್ಟು ಚಿಂತಿಸಬೇಡಿ, ಸೂರ್ಯ ಅಣ್ಣ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ಸಂಪೂರ್ಣವಾಗಿ ಚೆನ್ನಾಗಿದ್ದಾರೆ" ಎಂದು ಬರೆದಿದ್ದಾರೆ.

Advertisment


">August 9, 2024

ಇದನ್ನೂ ಓದಿ: ಬರ್ತ್​​​ಡೇ ಪಾರ್ಟಿಯಲ್ಲಿ ಭರ್ಜರಿ ಡ್ಯಾನ್ಸ್; ಖ್ಯಾತ ಪೊಲೀಸ್ ಅಧಿಕಾರಿ ಸಸ್ಪೆಂಡ್.. ಆಗಿದ್ದೇನು?

ಮಾಹಿತಿ ಪ್ರಕಾರ, ಸೂರ್ಯ ಅವರ ತಲೆಗೆ ಸಣ್ಣ ಗಾಯವಾಗಿದೆ. ಊಟಿಯ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಚೇತರಿಸಿಕೊಳ್ಳಲು ಕೊಂಚ ಬಿಡುವುತೆಗೆದುಕೊಳ್ಳಲು ಹೇಳಿದ್ದಾರೆ. ಅದರಂತೆಯೇ ಚಿತ್ರತಂಡ ಶೂಟಿಂಗ್​ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment