newsfirstkannada.com

VIDEO: ತಮಿಳು ನಟ ವಿಜಯ್ ರಾಜಕೀಯ ಪಕ್ಷದ ಹೆಸರು ಘೋಷಣೆ; ಫ್ಯಾನ್ಸ್ ಸೆಲೆಬ್ರೇಷನ್ ಶುರು!

Share :

Published February 2, 2024 at 2:12pm

    ದಳಪತಿ ವಿಜಯ್ ಹೊಸ ಪಕ್ಷದ ಹೆಸರು ತಮಿಳಗ ವಿಟ್ರಿ ಕಜಂ

    ತಮಿಳುನಾಡಿನಲ್ಲಿ ಹೊಸ ರಾಜಕೀಯದ ಅಲೆ ಸೃಷ್ಟಿಸಲು ಪ್ಲಾನ್

    2024ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದ ವಿಜಯ್ ಪಾರ್ಟಿ

ಚೆನ್ನೈ: ದಳಪತಿ ಖ್ಯಾತಿಯ ತಮಿಳು ನಟ ವಿಜಯ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದು, ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ.

ದಳಪತಿ ವಿಜಯ್ ತಮ್ಮ ನೂತನ ರಾಜಕೀಯ ಪಕ್ಷಕ್ಕೆ ತಮಿಳಗ ವಿಟ್ರಿ ಕಜಂ ಎಂಬ ಹೆಸರಿಟ್ಟಿದ್ದಾರೆ. ತಮಿಳಗ ವಿಟ್ರಿ ಕಜಂ ಅಂದ್ರೆ ತಮಿಳಿಗನ ಯಶಸ್ಸಿನ ಕಾಲ ಎಂದು ಅರ್ಥ. ತಮಿಳುನಾಡಿನಲ್ಲಿ ಹೊಸ ರಾಜಕೀಯದ ಅಲೆ ಸೃಷ್ಟಿಸಲು ಸಜ್ಜಾಗಿರೋ ನಟ ವಿಜಯ್ ಅವರು ಯಶಸ್ಸಿನ ಕಾಲ ಸೃಷ್ಟಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ಅಂದು ಎಂಜಿಆರ್-ಶಿವಾಜಿ ಗಣೇಶನ್; ಇಂದು ವಿಜಯ್​​​-ಕಮಲ್​​; ತಮಿಳುನಾಡಲ್ಲಿ ಗೆಲುವು ಯಾರಿಗೆ?

ಸದ್ಯ ಹೊಸ ಪಕ್ಷದ ಹೆಸರು ಘೋಷಿಸಿರುವ ವಿಜಯ್ ಅವರು ತಮ್ಮ ರಾಜಕೀಯ ಜರ್ನಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಇತ್ತೀಚೆಗೆ 200 ಸದಸ್ಯರ ಸಾಮಾನ್ಯ ಸದಸ್ಯರ ಸಭೆ ನಡೆಸಿದ್ದ ವಿಜಯ್ ಅವರು ರಾಜಕೀಯ ಪಕ್ಷದ ಹೆಸರಿಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಚುನಾವಣಾ ಆಯೋಗದ ಒಪ್ಪಿಗೆ ಬಳಿಕ ಪಕ್ಷದ ಹೆಸರು ಪ್ರಕಟವಾಗಿದೆ.

2026ಕ್ಕೆ ವಿಜಯ್ ರಾಜಕೀಯ ಪರೀಕ್ಷೆ!
ಹೊಸ ರಾಜಕೀಯ ಪಕ್ಷ ಘೋಷಿಸಿರುವ ನಟ ವಿಜಯ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದಾರೆ. ತಮಿಳಗ ವಿಟ್ರಿ ಕಜಂ 2024ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ. ಹಾಗೆಯೇ ಬೇರೆ ಪಕ್ಷಗಳಿಗೆ ಬೆಂಬಲ ನೀಡಲ್ಲ ಎಂದು ನಟ ವಿಜಯ್ ಘೋಷಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುವ ನಟ ವಿಜಯ್ ಅವರು ಪಕ್ಷದ ಸಾಮಾನ್ಯ ಹಾಗೂ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ 2026ಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆಗ ದಳಪತಿ ವಿಜಯ್ ರಾಜಕೀಯದ ಖದರ್ ಅನಾವರಣ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಮಿಳು ನಟ ವಿಜಯ್ ರಾಜಕೀಯ ಪಕ್ಷದ ಹೆಸರು ಘೋಷಣೆ; ಫ್ಯಾನ್ಸ್ ಸೆಲೆಬ್ರೇಷನ್ ಶುರು!

https://newsfirstlive.com/wp-content/uploads/2024/02/Tamil-Vijay-Party.jpg

Load More