Advertisment

ನಟ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರು.. ಆಸ್ಪತ್ರೆಗೆ ದಾಖಲು; ವೈದ್ಯರು ಹೇಳಿದ್ದೇನು?

author-image
admin
Updated On
ಸೆನ್ಸಾರ್​ ಮಂಡಳಿ ವಿರುದ್ಧ ತಮಿಳು ನಟ ವಿಶಾಲ್ ಗಂಭೀರ ಆರೋಪ.. ಅಸಲಿಗೆ ಆಗಿದ್ದೇನು..?
Advertisment
  • ವಿಶಾಲ್ ವಿಡಿಯೋ ವೈರಲ್ ಆದ ಬಳಿಕ ಆಸ್ಪತ್ರೆಗೆ ದಾಖಲು
  • ಕೈಯಲ್ಲಿ ಮೈಕ್ ಹಿಡಿದು ಮಾತನಾಡಲು ಪರದಾಡಿದ ವಿಶಾಲ್‌!
  • ನಟ ವಿಶಾಲ್‌ಗೆ ಮತ್ತೊಬ್ಬರ ಸಹಾಯದಿಂದ ನಡೆದಾಡುವ ಸ್ಥಿತಿ

ಚೆನ್ನೈ: ತಮಿಳು ನಟ ವಿಶಾಲ್ ಆರೋಗ್ಯ ಹದಗೆಟ್ಟಿದೆ. ನಡುಗುವ ಕೈ, ತೊದಲು ಮಾತಿನ ವಿಶಾಲ್ ವಿಡಿಯೋ ವೈರಲ್ ಆದ ಬಳಿಕ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇದೀಗ ವಿಶಾಲ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

Advertisment

ಮಧ ಗಜ ರಾಜ ಸಿನಿಮಾದ ಪ್ರಮೋಷನ್‌ ವೇಳೆ ನಟ ವಿಶಾಲ್ ಅವರ ಆರೋಗ್ಯ ಸರಿಯಿಲ್ಲ ಅನ್ನೋ ವಿಚಾರ ಬಯಲಾಗಿತ್ತು. ಕೈಯಲ್ಲಿ ಮೈಕ್ ಹಿಡಿದು ಮಾತನಾಡಲು ಪರದಾಡಿದ ವಿಶಾಲ್‌ಗೆ ಏನಾಗಿದೆ ಅನ್ನೋ ಆತಂಕವೂ ಮನೆ ಮಾಡಿದೆ.

publive-image

ವಿಶಾಲ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಇಷ್ಟಾದರೂ ವಿಶಾಲ್ ಅವರು ತಮ್ಮ ಕನಸಿನ ಮಧ ಗಜ ರಾಜ ಸಿನಿಮಾಗಾಗಿ ಹೊರ ಬಂದಿದ್ದರು. ಸದ್ಯದ ಮಾಹಿತಿ ಪ್ರಕಾರ ನಟ ವಿಶಾಲ್ ಅವರು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು? 

Advertisment

ತಮಿಳು ನಟ ವಿಶಾಲ್ ಅವರ ಸ್ಥಿತಿ ನೋಡಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕದಲ್ಲಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ ವಿಶಾಲ್ ಅವರಿಗೆ ವೈರಲ್ ಇನ್ಫೆಕ್ಷನ್‌ನಿಂದ ತುಂಬಾ ಜ್ವರ ಇದೆ. ಮತ್ತೊಬ್ಬರ ಸಹಾಯದಿಂದ ವಿಶಾಲ್ ಅವರು ನಡೆದಾಡುವ ಸ್ಥಿತಿ ಎದುರಾಗಿದೆ. ವಿಶಾಲ್ ಅವರ ತಂಡದ ಸದಸ್ಯರು ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ.

ಚೆನ್ನೈನ ಅಪೊಲೋ ಆಸ್ಪತ್ರೆಯ ವೈದ್ಯರು ನಟ ವಿಶಾಲ್ ಅವರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ವಿಶಾಲ್ ಅವರು ಕೆಲವು ದಿನಗಳ ಕಾಲ ಕಂಪ್ಲೀಟ್ ಬೆಡ್ ರೆಸ್ಟ್ ಪಡೆಯಲೇಬೇಕು ಎನ್ನುವ ಮಾಹಿತಿ ನೀಡಿದ್ದಾರೆ. ವಿಶಾಲ್ ಅವರ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾವಹಿಸಿದ್ದು ಕೆಲವು ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment