newsfirstkannada.com

ಡ್ರಗ್ಸ್‌ ದಂಧೆ ಮಾಡುತ್ತಿದ್ದ ಖ್ಯಾತ ಸಿನಿಮಾ ನಿರ್ಮಾಪಕ ಅರೆಸ್ಟ್‌; 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಕ್ಕೆ

Share :

Published March 9, 2024 at 4:07pm

    ಸುಮಾರು 4 ತಿಂಗಳುಗಳ ಹುಡುಕಾಟದ ಬಳಿಕ ಆರೋಪಿ ಅರೆಸ್ಟ್​

    ಒಂದಲ್ಲ ಎರಡಲ್ಲ ಸುಮಾರು 2 ಸಾವಿರ ಕೋಟಿ ಡ್ರಗ್ಸ್ ಕಳ್ಳ ಸಾಗಣೆ

    ಡಿಎಂಕೆ ಮಾಜಿ ಕಾರ್ಯಕರ್ತ ಆಗಿದ್ದ ಜಾಫರ್ ಸಾದಿಕ್​​ ಬಂಧನ

ಸುಮಾರು 2,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕ ದ್ರವ್ಯಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ಸಿನಿಮಾ ನಿರ್ಮಾಪಕನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ, ಡಿಎಂಕೆ ಮಾಜಿ ಕಾರ್ಯಕರ್ತ ಜಾಫರ್ ಸಾದಿಕ್​​ರನ್ನು ಸುಮಾರು 4 ತಿಂಗಳ ಹುಡುಕಾಟದ ಬಳಿಕ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಭಾರತ-ಆಸ್ಟ್ರೇಲಿಯಾ-ನ್ಯೂಜಿಲೆಂಡ್​ ದೇಶಕ್ಕೆ ಅಕ್ರಮವಾಗಿ ಡ್ರಗ್ಸ್ ಕಳ್ಳಸಾಗಣೆ ಜಾಲದ ಆರೋಪಿ ಸಾದಿಕ್ ಕಿಂಗ್‌ಪಿನ್ ಆಗಿದ್ದರಂತೆ ಎನ್‌ಸಿಬಿ ತಿಳಿಸಿದೆ. ಫೆಬ್ರವರಿ 29ರಂದು ಈ ಮಾದಕ ವಸ್ತುಗಳನ್ನು ಶ್ರೀಲಂಕಾಕ್ಕೆ ಕಳ್ಳ ಸಾಗಣೆ ಮಾಡಲು ಮುಂದಾದಾಗ ಆರೋಪಿಗಳು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದರು.

ಇನ್ನು ಹೀಗೆ ಅಕ್ರಮವಾಗಿ 2000 ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾದಿಕ್‌ 3,500 ಕೆಜಿ ಸ್ಯೂಡೋಪೆಡ್ರಿನ್ ಅನ್ನು 45 ಬಾರಿ ವಿದೇಶಕ್ಕೆ ಕಳುಹಿಸಿದ್ದಾನೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಇದುವರೆಗೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದು, ಈ ಪೈಕಿ ಒಂದು ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರಗ್ಸ್‌ ದಂಧೆ ಮಾಡುತ್ತಿದ್ದ ಖ್ಯಾತ ಸಿನಿಮಾ ನಿರ್ಮಾಪಕ ಅರೆಸ್ಟ್‌; 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಕ್ಕೆ

https://newsfirstlive.com/wp-content/uploads/2024/03/fake-producer-3.jpg

Load More