Advertisment

VIDEO: 8 ಬಾರಿ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ ಶಪಥ; ಕಾರಣ ಡಿಎಂಕೆ ಸರ್ಕಾರ!

author-image
Bheemappa
Updated On
VIDEO: 8 ಬಾರಿ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ ಶಪಥ; ಕಾರಣ ಡಿಎಂಕೆ ಸರ್ಕಾರ!
Advertisment
  • ಕೊಯಮತ್ತೂರಿನ ತಮ್ಮ ನಿವಾಸ ಮುಂದೆ ಹೊಡೆದುಕೊಂಡ ಅಧ್ಯಕ್ಷ
  • ಅಣ್ಣಾಮಲೈ ಹೊಡೆದುಕೊಳ್ಳುವಾಗ ಬಂದು ತಡೆದ ಕಾರ್ಯಕರ್ತರು
  • ‘ತಮಿಳು ಸಂಸ್ಕೃತಿ ಗೊತ್ತಿದ್ದವ್ರಿಗೆ ನಾನು ಮಾಡಿರುವುದು ಗೊತ್ತಾಗುತ್ತೆ’

ಚೆನ್ನೈ: ಡಿಎಂಕೆ ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿ ತೆಗೆದುಕೊಂಡು ತಮಗೆ ತಾವೇ ಹೊಡೆದುಕೊಂಡಿದ್ದಾರೆ. ಈ ಮೂಲಕ ಡಿಎಂಕೆ ಸರ್ಕಾರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

Advertisment

ತಮಿಳುನಾಡಿನ ಕೊಯಮತ್ತೂರಿನ ತಮ್ಮ ಮನೆ ಮುಂದೆ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿ ತೆಗೆದುಕೊಂಡು ತಮಗೆ ತಾವೇ ದಂಡಿಸಿಕೊಂಡರು. ಈ ರೀತಿಯಾಗಿ ಹೊಡೆದುಕೊಳ್ಳುವಾಗ ಕೆ.ಅಣ್ಣಾಮಲೈ ಅವರು ಕೇವಲ ಹಸಿರು ಪಂಚೆ ಮಾತ್ರ ಧರಿಸಿದ್ದರು. ಶರ್ಟ್ ಹಾಕಿಕೊಂಡಿರಲಿಲ್ಲ. ಹೀಗಾಗಿ 8 ಬಾರಿ ಚಾಟಿ ಏಟು ಹೆಚ್ಚು ಬಲವಾಗಿಯೇ ಬಿದ್ದವು. ಇನ್ನು ಹೊಡೆದುಕೊಳ್ಳುವಾಗ ಪಕ್ಕದಲ್ಲಿದ್ದ ಪಕ್ಷದ ಮುಖಂಡರು ಬಂದು ತಡೆದರು. ಇಲ್ಲಿಗೆ ಅಣ್ಣಾಮಲೈ ಚಾಟಿಯಿಂದ ಹೊಡೆದುಕೊಳ್ಳುವುದನ್ನು ನಿಲ್ಲಿಸಿದರು.

ಇದಾದ ಮೇಲೆ ಮಾಧ್ಯಮದವರ ಜೊತೆ ಮಾತನಾಡಿದ ಕೆ.ಅಣ್ಣಾಮಲೈ ಅವರು, ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವವರಿಗೆ ಇದು ಭೂಮಿಯ ಒಂದು ಭಾಗವೆಂದು ಗೊತ್ತಾಗುತ್ತದೆ. ತಪ್ಪು ಮಾಡಿದಾಗ ನಮ್ಮನ್ನು ನಾವೇ ಹೊಡೆದುಕೊಳ್ಳುವುದು, ಶಿಕ್ಷಿಸಿಕೊಳ್ಳುವುದು, ಕಠಿಣ ಕ್ರಮ ತೆಗೆದುಕೊಳ್ಳುವುದು ತಮಿಳು ಸಂಸ್ಕೃತಿಯ ಭಾಗವಾಗಿವೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ಕಾಲಿಗೆ ಚಪ್ಪಲಿ, ಶೂ ಧರಿಸಲ್ಲ.. ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಶಪಥ; DMK ವಿರುದ್ಧ ಮುರುಗನ್ ಬ್ರಹ್ಮಾಸ್ತ್ರ!

Advertisment

ಕಳೆದ 3 ವರ್ಷಗಳಿಂದ ಸಾಮಾನ್ಯ ಜನರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ನಿನ್ನೆ ಈ ಕುರಿತು ಅನೌನ್ಸ್ ಮಾಡಲಾಗಿತ್ತು. ಅದರಂತೆ ಚಾಟಿ ತೆಗೆದುಕೊಂಡು ಹೊಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿಯೊಬ್ಬರ ಮೇಲೆ ಎಸಗಲಾದ ದೌರ್ಜನ್ಯದ ಕೇಸ್​ನಲ್ಲಿ ಎಲ್ಲ ಮಾಹಿತಿ ಸೋರಿಕೆ ಮಾಡಲಾಗಿದೆ. ಹೀಗಾಗಿ ಡಿಎಂಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಕೆ.ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ನಿನ್ನೆ ನಡೆದ ಮಾಧ್ಯಮಗೋಷ್ಠಿಯಲ್ಲಿ, ಡಿಎಂಕೆ ಪಕ್ಷದ ಕಾರ್ಯಕರ್ತರೊಬ್ಬರು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಶಪಥ ಕೂಡ ತೆಗೆದುಕೊಂಡಿದ್ದರು.

ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸಲ್ಲ. 48 ದಿನಗಳ ಕಾಲ ಉಪವಾಸ ಮಾಡುವುದು ಹಾಗೂ ಪ್ರಮುಖ 6 ಮುರುಗನ್ ದೇವಾಲಯಗಳಿಗೆ ಭೇಟಿ ನೀಡುವುದಾಗಿ ಅಣ್ಣಾಮಲೈ ಘೋಷಣೆ ಮಾಡಿ ಶಪಥ ತೆಗೆದುಕೊಂಡಿದ್ದರು. ಇದರಲ್ಲಿ ಈ ಚಾಟಿ ಏಟು ಕೂಡ ಒಂದಾಗಿತ್ತು.

Advertisment


">December 27, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment