newsfirstkannada.com

ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್​​.ಜಿ ಸೂರ್ಯ ಅರೆಸ್ಟ್​; ಕಾರಣವೇನು..?

Share :

Published June 17, 2023 at 6:39pm

Update June 17, 2023 at 6:41pm

  ಸೋಷಿಯಲ್​​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪ

  ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ SG ಸೂರ್ಯ ಅರೆಸ್ಟ್

  CM ಸ್ಟಾಲಿನ್​​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಿಡಿ..!

ಚೆನ್ನೈ: ಸೋಷಿಯಲ್​​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇರೆಗೆ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್​​.ಜಿ ಸೂರ್ಯ ಅವರನ್ನು ಅರೆಸ್ಟ್​ ಮಾಡಲಾಗಿದೆ.

ಚರಂಡಿ ಸ್ವಚ್ಛಗೊಳಿಸುವಾಗ ನೈರ್ಮಲ್ಯ ಕಾರ್ಯಕರ್ತೆ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂಸದ ವೆಂಕಟೇಶನ್​​ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸೂರ್ಯ ಟ್ವೀಟ್​ ಮಾಡಿದ್ದರು. ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಪೋಸ್ಟ್​ ಹಾಕಿದ್ದಾರೆ ಎಂದು ಕೇಸ್​ ದಾಖಲಿಸಿ ಸೂರ್ಯ ಅವರನ್ನು ಅರೆಸ್ಟ್​ ಮಾಡಿದ್ದೇವೆ ಎಂದು ಮಧುರೈ ಪೊಲೀಷ್​ ಕಮೀಷನರ್​ ನರೇನ್​ತಿರನ್​​ ನಾಯರ್​​ ಹೇಳಿದ್ದಾರೆ.

ಇನ್ನು, ಬಿಜೆಪಿ ಮುಖಂಡನನ್ನು ಬಂಧಿಸಿರೋ ತಮಿಳುನಾಡು ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೂಲಕ ಬಿಜೆಪಿ ಕಾರ್ಯಕರ್ತರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಿಎಂ ಸ್ಟಾಲಿನ್​ಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ​​ ಕೂಡ ಸೂರ್ಯ ಬಂಧನವನ್ನು ಖಂಡಿಸಿದ್ದಾರೆ.

ಸೂರ್ಯ ಪೋಸ್ಟ್​ನಲ್ಲಿ ಏನಿತ್ತು..?

ಪೌರ ಕಾರ್ಮಿಕರನ್ನು ಚರಂಡಿಗೆ ಇಳಿಸುವುದು ಅಮಾನವೀಯ. ಇದು ಕಾನೂನಿಗೆ ವಿರುದ್ಧವೂ ಹೌದು. ಚರಂಡಿ ಸ್ವಚ್ಛ ಮಾಡುವಾಗ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡರೂ ಸಂಸದ ವೆಂಕಟೇಶನ್​​ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಿಮ್ಮ ಪ್ರತ್ಯೇಕತಾವಾದದ ನಕಲಿ ರಾಜಕೀಯ ಮೋರಿಗಿಂತಲೂ ಕೆಟ್ಟದಾಗಿ ಗಬ್ಬು ನಾರುತ್ತಿದೆ. ಮನುಷ್ಯರಾಗಿ ಬದುಕುವ ಮಾರ್ಗ ಕಂಡುಕೊಳ್ಳಿ ಎಂದು ಪೋಸ್ಟ್​ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್​​.ಜಿ ಸೂರ್ಯ ಅರೆಸ್ಟ್​; ಕಾರಣವೇನು..?

https://newsfirstlive.com/wp-content/uploads/2023/06/SG-Surya.jpg

Load More