newsfirstkannada.com

ಹುಟ್ಟುಹಬ್ಬದ ದಿನವೇ ಕೆ.ಅಣ್ಣಾಮಲೈಗೆ ಬಿಗ್ ಶಾಕ್.. ಕೊಯಮತ್ತೂರು ಕ್ಷೇತ್ರದಲ್ಲಿ DMK ಗೆಲ್ಲುತ್ತಾ?

Share :

Published June 4, 2024 at 10:42am

    ಇಂದು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿರುವ ಅಣ್ಣಾಮಲೈ

    ಎಷ್ಟು ಸಾವಿರ ಮತಳಿಂದ ಕೆ.ಅಣ್ಣಾಮಲೈ ಹಿನ್ನಡೆಯಲ್ಲಿದ್ದಾರೆ..?

    ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಕೆ. ಅಣ್ಣಾಮಲೈ

ನವದೆಹಲಿ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದ್ದು ಅವರಿಗೆ ನಿರಾಸೆಯನ್ನುಂಟು ಮಾಡಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮುನ್ನಡೆ; ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬಿಗ್ ಶಾಕ್‌!

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ ಎದುರಾಳಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಭ್ಯರ್ಥಿ ಗಣಪತಿ ರಾಜ್‌ ಕುಮಾರ್‌ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದಾರೆ. 25,558 ಮತಗಳಿಂದ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ ಕುಮಾರ್‌ ಭಾರೀ ಮುನ್ನಡೆ ಸಾಧಿಸಿದ್ದಾರೆ. ಅಣ್ಣಾಮಲೈ ಅವರು 12,895 ಮತಗಳನ್ನು ಪಡೆದು ಹಿಂದೆ ಬಿದ್ದಿದ್ದಾರೆ. ಒಟ್ಟು 13 ಸಾವಿರ ಮತಗಳಿಂದ ಅಣ್ಣಾಮಲೈ ಅವರು ಹಿನ್ನಡೆಯಲ್ಲಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ 8,572 ಮತಗಳನ್ನು ಪಡೆದಿದ್ದಾರೆ. ಇನ್ನು ಮತ ಎಣಿಕೆ ನಡೆಯುತ್ತಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ತಿಳಿದು ಬರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಬಿಜೆಪಿಗೆ ಬಿಗ್ ಶಾಕ್​.. ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಜಾರಕಿಹೊಳಿ

ತಮಿಳುನಾಡಿನಲ್ಲಿ 39 ಸ್ಥಾನಗಳಲ್ಲಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕೆ. ಅಣ್ಣಾಮಲೈ ಅವರಿಗೆ ಇದು ಭಾರೀ ಅವಮಾನವಾದಂತೆ ಆಗಿದೆ. ಏಕೆಂದರೆ ತಮಿಳುನಾಡಿನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೇ ಮೋದಿ, ಅಮಿತ್ ಶಾರನ್ನ ರಾಜ್ಯಕ್ಕೆ ಕರೆಯಿಸಿಕೊಂಡು ಸಭೆ, ಸಮಾವೇಶಗಳನ್ನು ಮಾಡಿದ್ದರು. ಆದರೆ ಸದ್ಯದ ಎಲೆಕ್ಷನ್​ ಫಲಿತಾಂಶ ಡಿಎಂಕೆಗೆ ಹೆಚ್ಚಿನ ಸ್ಥಾನಗಳನ್ನು ತಂದು ಕೊಡಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಟ್ಟುಹಬ್ಬದ ದಿನವೇ ಕೆ.ಅಣ್ಣಾಮಲೈಗೆ ಬಿಗ್ ಶಾಕ್.. ಕೊಯಮತ್ತೂರು ಕ್ಷೇತ್ರದಲ್ಲಿ DMK ಗೆಲ್ಲುತ್ತಾ?

https://newsfirstlive.com/wp-content/uploads/2024/06/ANNAMALAI_1.jpg

Load More