newsfirstkannada.com

ಚಿರತೆಯಿಂದ ನಾಯಿಯನ್ನು ರಕ್ಷಿಸಿದ ಮನೆ ಮಾಲೀಕ.. ಭಯಾನಕ ವಿಡಿಯೋ

Share :

Published January 24, 2024 at 6:00am

    ಕ್ಷಣದಲ್ಲೇ ನಾಯಿಯನ್ನು ಹಿಡಿದುಕೊಂಡು ಓಡಿ ಹೋಗ್ತಿದ್ದ ಭಕ್ಷಕ

    ಮನೆ ಹೊರಗೆ ಮಲಗಿದ್ದ ನಾಯಿಗೆ ಸ್ಕೆಚ್ ಹಾಕಿ ಹಿಡಿದಿದ್ದ ಚಿರತೆ

    ಧೈರ್ಯದಿಂದಲೇ ಚಿರತೆ ಹಿಂದೆ ಓಡಿ ಹೋಗಿ ಬಿಡಿಸಿದ ಮಾಲೀಕ

ಚಿರತೆಯೊಂದು ಮನೆ ಹೊರಗಡೆ ಮಲಗಿದ್ದ ಸಾಕು ನಾಯಿಯನ್ನು ಹಿಡಿದುಕೊಂಡು ಓಡುವಾಗ ಮನೆ ಮಾಲೀಕ ಧೈರ್ಯದಿಂದ ರಕ್ಷಣೆ ಮಾಡಿರುವ ಘಟನೆ ತಮಿಳುನಾಡಿನ ಕೂನೂರಿನ ಬೆಟ್ಟದ ಮನೆಯೊಂದರಲ್ಲಿ ನಡೆದಿದೆ.

ಮನೆಯವರು ಎಲ್ಲ ಒಳಗೆ ಇರುವಾಗ ಅವರ ಸಾಕು ನಾಯಿ ಎಂದಿನಂತೆ ಮನೆಯ ಹೊರಗಡೆ ಮಲಗಿದೆ. ಈ ವೇಳೆ ಬೇಟೆ ಹುಡುಕುತ್ತ ಬರುವಾಗ ಚಿರತೆ, ನಾಯಿಯನ್ನು ನೋಡಿ ಸೈಲೆಂಟ್​ ಆಗಿ ಹಿಂದೆಯಿಂದ ಬಂದಿದೆ. ತಕ್ಷಣ ಬಾಯಲ್ಲಿ ನಾಯಿಯನ್ನು ಹಿಡಿದುಕೊಂಡು ಓಡಲು ಯತ್ನಿಸಿದೆ. ಆಗ ಜೋರು ಶಬ್ದ ಕೇಳಿ ಹೊರಗೆ ಓಡಿ ಬಂದ ಮಾಲೀಕ ನಾಯಿಯನ್ನು ಚಿರತೆ ಹಿಡಿದುಕೊಂಡು ಹೋಗುತ್ತಿರುವುದನ್ನ ನೋಡಿದ್ದಾರೆ. ಹಾಗೇ ಭಯ ಪಡದೇ ಅದರ ಹಿಂದೆ ಕೂಗುತ್ತಾ ಓಡಿ ಹೋಗಿದ್ದಾರೆ.

ಇದರಿಂದ ಚಿರತೆ ನಾಯಿಯನ್ನು ಬಿಟ್ಟು ಓಡಿದೆ. ಅದರ ಹಿಂದೆನೇ ಮಾಲೀಕ ಹೋಗಿದ್ದಾರೆ. ಇದು ಅವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ಮನೆ ಮಾಲೀಕನ ಧೈರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿರತೆಯಿಂದ ನಾಯಿಯನ್ನು ರಕ್ಷಿಸಿದ ಮನೆ ಮಾಲೀಕ.. ಭಯಾನಕ ವಿಡಿಯೋ

https://newsfirstlive.com/wp-content/uploads/2024/01/TN_Leopard_Attack.jpg

Load More