/newsfirstlive-kannada/media/post_attachments/wp-content/uploads/2025/06/RCB_WIN_MK_STALIN.jpg)
ಐಪಿಎಲ್-2025 ಟ್ರೋಫಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಕೊನೆಗೂ ಮುತ್ತಿಟ್ಟಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ರಜತ್ ಪಟಿದಾರ್ ನಾಯಕತ್ವದ ಆರ್​ಸಿಬಿ​, ಕಪ್​​ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್​ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ. ಇದರ ಬೆನ್ನಲ್ಲೇ ತಮಿಳುನಾಡು ಸಿಎಂ ಆರ್​ಸಿಬಿ ತಂಡಕ್ಕೆ ಹಾಗೂ ವಿರಾಟ್​ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್​ ಖಾತೆ ಮೂಲಕ ಪೋಸ್ಟ್​ ಅನ್ನು ಶೇರ್ ಮಾಡಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು, ಆರ್​ಸಿಬಿ ಭಲೇ! ಭೇಷ್. ಈ ಸೀಸನ್​ನಲ್ಲಿ ಎಲ್ಲವೂ ಅಚ್ಚರಿಗಳಿಂದ ತುಂಬಿತ್ತು. ಆದರೆ ರೋಮಾಂಚನದಿಂದ ಟೂರ್ನಿ ಅಂತ್ಯವಾಗಿದೆ. ಸತತ ಹೋರಾಟದಿಂದ ಕೊನೆಗೂ ಟ್ರೋಫಿಯನ್ನು ಎತ್ತಿ ಹಿಡಿದಿದ್ದೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB ಆಟಗಾರರಿಗೆ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಸನ್ಮಾನ.. ಅನುಮತಿ ಸಿಗುತ್ತಾ?
/newsfirstlive-kannada/media/post_attachments/wp-content/uploads/2025/06/RCB_WIN.jpg)
ಹಲವು ವರ್ಷಗಳಿಂದ ಕಾಯುತ್ತಿದ್ದ ವಿರಾಟ್ ಕೊಹ್ಲಿ ಅವರ ಕನಸು ನಿನ್ನೆ ರಾತ್ರಿ ನೆರವೇರಿದೆ. ನಿಜವಾಗಲೂ ಟ್ರೋಫಿ ನಿಮಗೆ ಸಲುತ್ತದೆ. ಕೀರಿಟ ನಿಮಗೆ.. ಕಿಂಗ್ ಕೊಹ್ಲಿ ಅವರಿಗೆ ಎಂದಿದ್ದಾರೆ. ಇದರ ಜೊತೆಗೆ ಮುಂದಿನ ಐಪಿಎಲ್ ಸೀಸನ್​ನಲ್ಲಿ ಸಿಎಸ್​ಕೆ ತಂಡ ಸ್ಟ್ರಾಂಗ್ ಕಮ್​ಬ್ಯಾಕ್​ ಮಾಡುತ್ತದೆ ಎಂದು ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಗೂ ಜೆರ್ಸಿ ಅನ್ನೋದು ಒಂದು ಕ್ರಿಕೆಟ್​ ತಂಡ ಮಾತ್ರವಲ್ಲ. ಆರ್​ಸಿಬಿ ಅನ್ನೋ ಪದವೇ ಒಂದು ಅಭಿಮಾನಿಗಳ ಎಮೋಷನಲ್​. ಕರ್ನಾಟಕದ ಹೆಮ್ಮೆ, ಕನ್ನಡಿಗರ ಅಸ್ಮಿತೆ. ಹೀಗಾಗಿಯೇ ಎಲ್ಲೆಡೆಯಿಂದ ಆರ್​ಸಿಬಿ ತಂಡಕ್ಕೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಾಚರಣೆ ಭರ್ಜರಿಯಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us