newsfirstkannada.com

ಭಾರೀ ವರುಣಾರ್ಭಟದ ಎಚ್ಚರಿಕೆ, ರೆಡ್ ಅಲರ್ಟ್.. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದ ಮಳೆ ​

Share :

Published May 22, 2024 at 7:55am

    ದೇಗುಲದ ಮೆಟ್ಟಿಲುಗಳ ಮೇಲೆ ಜಲಪಾತದಂತೆ ಹರಿತ್ತಿರೋ ಮಳೆನೀರು

    ಶಿವಮೊಗ್ಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕುಸಿದ ತಡೆಗೋಡೆ

    10 ದಿನದಿಂದ ಚಿಕ್ಕಮಗಳೂರಿನ ಹಲವು ಪ್ರದೇಶಗಳಲ್ಲಿ ನಿರಂತರ ಮಳೆ

ಬಂಗಾಳಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರುನಾಡಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಕೆಲ ದಿನಗಳಿಂದ ಸುರಿಯುತ್ತಿರೋ ಭಾರೀ ಮಳೆಗೆ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.

ಶಿವಮೊಗ್ಗದಲ್ಲಿ ಭಾರೀ ಮಳೆಗೆ ಕುಸಿದ ತಡೆಗೋಡೆ

ಶಿವಮೊಗ್ಗ
ಶಿವಮೊಗ್ಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದಿದೆ. ಶಿವಮೊಗ್ಗ ನಗರದ ಹೊರವಲಯದ ಗಾಡಿಕೊಪ್ಪದ ಸಾಗರ ರಸ್ತೆಯಲ್ಲಿ ಇರುವ ಶರಾವತಿ ಡೆಂಟಲ್ ಕಾಲೇಜು ಮುಂಭಾಗವಿರುವ ತಡೆಗೋಡೆ ಕುಸಿದಿದೆ. ಸಾಗರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಜೈಲಿಂದ ಬಂದ ಬೆನ್ನಲ್ಲೇ ಅನ್ಯಾಯ ಎಸಗಿದವ್ರ ವಿರುದ್ಧ ಆಕ್ರೋಶ.. ವಿರೋಧಿಗಳಿಗೆ HD ರೇವಣ್ಣ ಖಡಕ್​ ಸಂದೇಶ

ಕಲ್ಪತರು ನಾಡಿನಲ್ಲಿ‌ ಭರ್ಜರಿ ಮಳೆ.. ಕೆಲವೆಡೆ ರಗಳೆ
ತುಮಕೂರು
ಕಳೆದ ವರ್ಷ ಮಳೆಯಿಲ್ಲದೆ ಕೊರಗಿದ್ದ ತುಮಕೂರು ಜನರು, ಮುಂಗಾರು ಪೂರ್ವ ಮಳೆಗೆ ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.. ತುರುವೇಕೆರೆ ತಾಲೂಕಿನಲ್ಲಿ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿದ್ದು, ಸವಾರರು ಪರದಾಡುವಂತಾಯ್ತು. ಅಡಿಕೆ, ತೆಂಗಿನ ತೋಟದಲ್ಲಿ ಮಂಡಿಯುದ್ದಕ್ಕೆ ಮಳೆ ನೀರು ನಿಂತು ಪರಿಣಾಮ ಬೆಳೆಗೆ ಹಾನಿಯಾಗುವ ಆತಂಕ ರೈತರಲ್ಲಿ ಹೆಚ್ಚಾಗಿದೆ.

ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸುತ್ತಮುತ್ತ ವರುಣನಾಬ್ಬರ

ಚಿಕ್ಕಮಗಳೂರು
ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗದಲ್ಲಿ ವರುಣದೇವ ನಿರಂತರ ಮಳೆ ಸುರಿಸುತ್ತಿದ್ದಾನೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತಮುತ್ತ ಜಲಧಾರೆಯೇ ಹರೀತಿದೆ.

ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಮಳೆಗೆ ನೆಲಕಚ್ಚಿದ ಬೆಳೆ

ಕೋಲಾರ
ಕೋಲಾರ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ, ಇದೇ ವರುಣ ಹಲವು ಕಡೆಗಳಲ್ಲಿ ಬೆಳೆ ಹಾನಿ ಮಾಡುವ ಮೂಲಕ ರೈತರಿಗೆ ಸಂಕಷ್ಟ ತಂದೊಡ್ಡಿದ್ದಾನೆ. ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಸುರಿದ ಮಳೆಯಿಂದಾಗಿ ಅಮ್ಮೆರೆಹಳ್ಳಿಯಲ್ಲಿ ನವೀನ್ ಎಂಬುವವರಿಗೆ ಸೇರಿದ ಹಾಗಲಕಾಯಿ ಬೆಳೆ ನೆಲಕಚ್ಚಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ.

ಮಳೆ ಎಂಟ್ರಿ ಬೆನ್ನಲ್ಲೇ ಬಿತ್ತನೆ ಪೂರ್ವ ಸಂಪ್ರದಾಯಿಕ ಪದ್ಧತಿ ಪೂಜೆ

ಬಾಗಲಕೋಟೆ
ಪೂರ್ವ ಮುಂಗಾರು ಮಳೆ ಜೋರಾಗಿರೋ ಬೆನ್ನಲ್ಲೇ ಬಿತ್ತನೆ ಪೂರ್ವ ಸಂಪ್ರದಾಯಿಕ ಪದ್ಧತಿಗೆ ರೈತರು ಮುಂದಾಗಿದ್ದಾರೆ. ಬಾಗಲಕೋಟೆಯ ಗದ್ದನಕೇರಿ ಗ್ರಾಮದಲ್ಲಿ, ಗ್ರಾಮಸ್ಥರೆಲ್ಲ ಸೇರಿ ಈ ವರ್ಷದ ಮಳೆ ಸಲುವಾಗಿ ಕೂರಿಗೆ ಪೂಜೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಅಪ್ರಾಪ್ತ.. ಸ್ಥಳದಲ್ಲೇ ಇಬ್ಬರು ಸಾವು

ಮಳೆರಾಯ ಎಂಟ್ರಿಗೆ ಡ್ಯಾನ್ಸ್ ಮಾಡಿ ಸಂಭ್ರಮ​!

ತಮಿಳುನಾಡು, ಕರೂರು
ನೆರೆ ರಾಜ್ಯ ತಮಿಳುನಾಡಿನಲ್ಲಿ ಮಳೆರಾಯ ಅಬ್ಬರಿಸಲು ಶುರುಮಾಡಿ 40 ಗಂಟೆಗಳು ಕಳೆದಿದೆ.. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ತಮಿಳುನಾಡಿನ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ತಮಿಳುನಾಡಿನ ಕರೂರಿನಲ್ಲಿ ಓರ್ವ ಬಸ್ ಹತ್ತಿ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ್ದಾನೆ. ತಮಿಳುನಾಡಿನ ಪ್ರಸಿದ್ಧ ದೇವಸ್ಥಾನ ಪಳನಿ ದೇವಾಲಯದ ಮೆಟ್ಟಿಲುಗಳ ಮೇಲೆ ಜಲಪಾತದಂತೆ ಮಳೆಯ ನೀರು ಹರಿದಿದೆ.. ಭಕ್ತರು ದೇವರ ದರ್ಶನಕ್ಕೆ ಕಷ್ಟಪಡುವಂತಾಗಿತ್ತು. ಇನ್ನೂ ಸೇಲಂಭಾಗದ ಕನ್ನಿಮಾರ್​ ಕಾಡು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡಿನ ತಿರುಚಿ, ಕನ್ಯಾಕುಮಾರಿ, ಊಟಿ, ತಿರುಚ್ಚಿ, ಕನ್ಯಾಕುಮಾರಿ, ಥೇಣಿ, ತಿರುನಲ್ವೇಲಿ, ತೆಂಕಾಶಿ, ವಿರುದುನಗರ, ತಿರುಪ್ಪೂರ್, ಕೊಯಮತ್ತೂರು, ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟದ ಬಗ್ಗೆ ಮುನ್ಸೂಚೆನ ನೀಡಲಾಗಿದೆ.

ಕೇರಳದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಕೇರಳ
ಕೇರಳದ ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಇಂದು ಅತೀ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಕೇರಳದ ರಾಜಧಾನಿ ತಿರುವನಂತಪುರಂ ಸೇರಿದಂತೆ 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವರುಣನಬ್ಬರ ಶುರುವಾಗಿದೆ. ಜನರು ಜಾಗರೂಕರಾಗಿರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ವರುಣಾರ್ಭಟದ ಎಚ್ಚರಿಕೆ, ರೆಡ್ ಅಲರ್ಟ್.. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದ ಮಳೆ ​

https://newsfirstlive.com/wp-content/uploads/2024/05/RAIN_NEW_1-1.jpg

Load More