ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ತಮಿಳುನಾಡು ಮಿನಿಸ್ಟರ್​​​.. ಏನಿದು ವಿವಾದ?

author-image
admin
Updated On
ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ತಮಿಳುನಾಡು ಮಿನಿಸ್ಟರ್​​​.. ಏನಿದು ವಿವಾದ?
Advertisment
  • ಪಟೇಲ್ ಅವರ ಪ್ರತಿಮೆ ಕಟ್ಟಿ ಪಟೇಲ್ ಸಮುದಾಯದ ಮತ ಬಾಚಿಕೊಂಡ್ರು
  • ಸೇಲಂಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಕಾಮರಾಜ್ ಅವರ ಗುಣಗಾನ
  • ಇವರು ಕಾಮರಾಜ್ ದೆಹಲಿಗೆ ಬಂದಾಗ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು

ಚೆನ್ನೈ: ಸನಾತನ ಧರ್ಮ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯನ್ನು ಸದಾ ಟೀಕಿಸುವ ಡಿಎಂಕೆ ಪಕ್ಷದ ನಾಯಕರು ಈಗ ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಮೈಕ್ ಮುಂದೆ ಮಾತನಾಡುವ ಭರದಲ್ಲಿ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮಿಳುನಾಡು ಸಚಿವ ಅನಿತಾ ರಾಧಾಕೃಷ್ಣನ್ ನೀಡಿರುವ ವಿವಾದತ್ಮಕ ಹೇಳಿಕೆ ಇಡೀ ದೇಶದಲ್ಲೇ ಸಂಚಲ ಸೃಷ್ಟಿಸಿದೆ.

ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿರುವ ಸಚಿವ ಅನಿತ್ ರಾಧಾಕೃಷ್ಣನ್ ಅವರು ಪ್ರಧಾನಿ ಮೋದಿಯನ್ನ ತರಾಟೆಗೆ ತೆಗೆದುಕೊಂಡರು. ಸರ್ದಾರ್ ವಲ್ಲಾಭಾಯ್ ಪಟೇಲ್ ಅವರ ಪ್ರತಿಮೆ ಕಟ್ಟಿ ಪಟೇಲ್ ಸಮುದಾಯದ ಮತಗಳನ್ನು ಬಾಚಿಕೊಂಡಿದ್ದಾರೆ. ಕಳೆದ ವಾರ ಸೇಲಂಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ತಮಿಳುನಾಡು ಮಾಜಿ ಸಿಎಂ ಕಾಮರಾಜ್ ಅವರನ್ನು ತಬ್ಬಿಕೊಂಡಂತೆ ಆತ್ಮೀಯವಾಗಿ ಮಾತನಾಡುತ್ತಾರೆ. ಆದರೆ ಕಾಮರಾಜ್ ದೆಹಲಿಗೆ ಬಂದಾಗ ಅವರನ್ನು ಕೊಲೆ ಮಾಡಲು ಕಾಯುತ್ತಾ ಇದ್ದವರು ಇವರು ಎನ್ನುತ್ತಾ ನಾಲಿಗೆ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: BREAKING: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಬೆಳಗಾವಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಅಭ್ಯರ್ಥಿ ಘೋಷಣೆ

ಡಿಎಂಕೆ ನಾಯಕ ಅನಿತ್ ರಾಧಾಕೃಷ್ಣನ್ ಅವರು ನೀಡಿರೋ ಈ ಹೇಳಿಕೆಯನ್ನ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾದಲ್ಲಿ ಅನಿತ್ ರಾಧಾಕೃಷ್ಣನ್ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದರ ವಿರುದ್ಧ ಕಠಿಣ ಹಾಗೂ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.


">March 24, 2024

ಮೋದಿ ವಿರುದ್ಧ ಡಿಎಂಕೆ ನಾಯಕ ನೀಡಿರೋ ಹೇಳೆಕೆಯನ್ನು ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಡಿಎಂಕೆ ಪಕ್ಷದ ಡಿಎನ್‌ಎನಲ್ಲೇ ಈ ರೀತಿಯ ಕೆಟ್ಟ ಮತ್ತು ಅಸಭ್ಯ ರಾಜಕೀಯ ವರ್ತನೆ ಇದೆ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಸಚಿವರು ಅವಹೇಳನಕಾರಿಯಾಗಿ ಮಾತನಾಡುವಾಗ ಡಿಎಂಕೆ ಸಂಸದೆ ಕನ್ನಿಮೋಳಿ ಸೇರಿದಂತೆ ಹಲವು ನಾಯಕರು ವೇದಿಕೆಯ ಮೇಲೆ ಇದ್ದರು. ಅವರೆಲ್ಲರೂ ಮೋದಿಯನ್ನು ನಿಂದಿಸುವಾಗ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಡಿಎಂಕೆ ಪಕ್ಷದ ನಡವಳಿಕೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment