ಜನಪ್ರಿಯ ಸುದ್ದಿ ನಿರೂಪಕಿ ಸೌಂದರ್ಯ ಅಮುದಾಮೊಳಿ ಸಾವು; ಆರೋಗ್ಯಕ್ಕೆ ಏನಾಗಿತ್ತು?

author-image
Veena Gangani
Updated On
ಜನಪ್ರಿಯ ಸುದ್ದಿ ನಿರೂಪಕಿ ಸೌಂದರ್ಯ ಅಮುದಾಮೊಳಿ ಸಾವು; ಆರೋಗ್ಯಕ್ಕೆ ಏನಾಗಿತ್ತು?
Advertisment
  • ಆ್ಯಂಕರ್ ಸೌಂದರ್ಯ ಅಮುದಮೊಲಿ 50 ಲಕ್ಷ ಧನ ಸಹಾಯ ಮಾಡಿದ್ದ ಸಿಎಂ
  • ವಾಹಿನಿಯೊಂದರಲ್ಲಿ ನ್ಯೂಸ್​ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಸೌಂದರ್ಯ
  • ಆ್ಯಂಕರ್ ಸೌಂದರ್ಯ ಅಮುದಮೊಲಿ ನಿಧನಕ್ಕೆ ಕಂಬನಿ ಮಿಡಿದ ಫ್ಯಾನ್ಸ್​

ಹೈದರಾಬಾದ್: ತಮಿಳಿನ ಜನಪ್ರಿಯ ಸುದ್ದಿ ವಾಹಿನಿಯೊಂದರಲ್ಲಿ ನ್ಯೂಸ್​ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಸೌಂದರ್ಯ ಅಮುದಮೊಳಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಮೃತ ಆ್ಯಂಕರ್ ಸೌಂದರ್ಯ ಅಮುದಮೊಲಿ ತಮಿಳು 24x7ನಲ್ಲಿ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ:ಪಾಠಕ್ಕೆ ಚಕ್ಕರ್​.. ನಿದ್ದೆಗೆ ಹಾಜರ್: ಶಾಲೆಯಲ್ಲಿಯೇ ಶಿಕ್ಷಕಿಯ ಗಡದ್ದಾದ ನಿದ್ದೆ: ಮಕ್ಕಳು ಮಾಡಿದ್ದೇನು?

publive-image

ಕಳೆದ ಆರು ತಿಂಗಳಿಂದ ಸೌಂದರ್ಯ ಅಮುದಮೊಲಿ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಜುಲೈ 26 ರಂದು ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ. ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸೌಂದರ್ಯ ಅವರ ಚಿಕಿತ್ಸೆಗೆಂದು ದೂರದರ್ಶನ ಆಡಳಿತವು ತಮಿಳು ಸುದ್ದಿ ಓದುಗರ ಸಂಘದಿಂದ 5.51 ಲಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 50 ಲಕ್ಷ ನೀಡಿದ್ದರು. ಇನ್ನು, ಸೌಂದರ್ಯ ಅಮುದಮೊಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಕೋರಿದರು.

publive-image

ಆಸ್ಪತ್ರೆಯ ಹಾಸಿಗೆಯ ಮೇಲಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಆ ಕೂಡಲೇ ಆಡಳಿತ ಮಂಡಳಿ, ಸಂಘ ಸಂಸ್ಥೆಗಳು ಜೊತೆಗೆ ಮುಖ್ಯಮಂತ್ರಿ ಮಾತ್ರವಲ್ಲದೆ ಅನೇಕರು ನಿರೂಪಕಿಗೆ ಸಹಾಯ ಮಾಡಿದರು. ಆದರೆ ಜುಲೈ 26 ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ಅವರು ಸಾವನ್ನಪ್ಪಿದ್ದಾರೆ. ಸೌಂದರ್ಯ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಜನರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment