ಸ್ಟಾಲಿನ್ ಆಪ್ತ ಸೆಂತಿಲ್ ಬಾಲಾಜಿ ಮನೆ ಮೇಲೆ ಇ.ಡಿ ರೇಡ್
ದಾಳಿ ವೇಳೆ ಅಧಿಕಾರಿಗಳಿಗೆ ಏನೆಲ್ಲ ಸಿಕ್ಕಿದೆ?
ಅರೆಸ್ಟ್ ಆಗ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಸೆಂತಿಲ್ ಬಾಲಾಜಿ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಇಂಧನ ಖಾತೆ ಸಚಿವ ಸೆಂತಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ಬಳಿಕ ಎದೆನೋವಿನ ಕಾರಣದಿಂದ ಸೆಂತಿಲ್ ಬಾಲಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉದ್ಯೋಗ ಹಗರಣದಲ್ಲಿ ಆಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ಸೆಂತಿಲ್ ಬಾಲಾಜಿ ಮನೆ, ಸಚಿವಾಲಯದ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕರೂರ್ ಜಿಲ್ಲೆಯ ಮನೆ, ಚೆನ್ನೈ ಸಚಿವಾಲಯದ ಕಚೇರಿ ಪೂರ್ತಿ ಹುಡುಕಾಡಿದ್ದಾರೆ. ಪ್ಯಾರಾ ಮಿಲಿಟರಿ ಪಡೆಯ ರಕ್ಷಣೆ ಪಡೆದುಕೊಂಡು ಇ.ಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಶೋಧಕಾರ್ಯಚರಣೆ ವೇಳೆ ಅಧಿಕಾರಿಗಳು ಏನೆಲ್ಲ ವಶಪಡಿಸಿಕೊಂಡಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಕಾರ್ಯಕರ್ತರ ಪ್ರತಿಭಟನೆ
ಸೆಂತಿಲ್ ಬಾಲಾಜಿ ಅವರು ಎಂ.ಕೆ.ಸ್ಟಾಲಿನ್ ಸರ್ಕಾರದಲ್ಲಿ ಇಂಧನ ಖಾತೆ ಸಚಿವರಾಗಿದ್ದಾರೆ. ಇದೀಗ ಅಕ್ರಮ ಹಣ ವರ್ಗಾವಣೆ ಆರೋಪದಡಿ ಅರೆಸ್ಟ್ ಆದಂತೆ ಸೆಂತಿಲ್ ಬಾಲಾಜಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಆಸ್ಪತ್ರೆ ಸೇರಿದ್ದಾರೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ