/newsfirstlive-kannada/media/post_attachments/wp-content/uploads/2024/12/COINS-BAG.jpg)
ತಮಿಳುನಾಡಿನ ಕೊಯಮತ್ತೂರು ಫ್ಯಾಮಿಲಿ ಕೋರ್ಟ್​ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶ ಮಾಡಿತ್ತು. ಪತಿ ಕೋರ್ಟ್​ ಬಳಿ ಸುಮಾರು 80 ಸಾವಿರ ರೂಪಾಯಿ ಇರುವ ನಾಣ್ಯಗಳ ಚೀಲವನ್ನು ಕೋರ್ಟ್ ಅಂಗಳದಲ್ಲಿ ತೆಗೆದುಕೊಂಡು ಬಂದಿದ್ದು ವಿಚಿತ್ರವಾಗಿತ್ತು.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ತನ್ನನ್ನು ತಾನು ಟ್ಯಾಕ್ಸಿ ಡ್ರೈವರ್ ಎಂದು ಹೇಳಿಕೊಂಡಿರುವ ವ್ಯಕ್ತಿ ತನ್ನ ಹೆಸರನ್ನು ಬಯಲು ಮಾಡಿಲ್ಲ. ಈತನ ವಿರುದ್ಧ ವಿಚ್ಛೇದನಕ್ಕೆ ಮೊರೆ ಹೋಗಿದ್ದಳು ಆತನ ಪತ್ನಿ ಕಳೆದವರ್ಷ. ವಿಚಾರಣೆ ನಡೆಸಿದ ಕೋರ್ಟ್​ ಸದ್ಯ 2 ಲಕ್ಷ ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶ ಮಾಡಿತ್ತು.
ಡಿಸೆಂಬರ್ 18 ರಂದು ವ್ಯಕ್ತಿ ಕೋರ್ಟ್ ಅಂಗಳದಲ್ಲಿ ತನ್ನ ಕಾರ್​ನೊಂದಿಗೆ ಹಾಜರಾಗಿದ್ದ. ಸುಮಾರು 20 ಚೀಲಗಳಲ್ಲಿ 1 ಹಾಗೂ 2 ರೂಪಾಯಿ ಕ್ವಾಯಿನ್​ಗಳನ್ನು ಹೊತ್ತುಕೊಂಡು ಬಂದು ಕೋರ್ಟ್ ರೂಮ್​ಗೆ ತೆಗೆದುಕೊಂಡು ಹೋದ. ಇದನ್ನು ಕಂಡ ಕೋರ್ಟ್ ಇಷ್ಟು ಕ್ವಾಯಿನ್ ಏಕೆ. ಇವುಗಳನ್ನು ಬ್ಯಾಂಕ್​ಗೆ ಕಟ್ಟಿ ನೋಟ್​ಗಳ ರೂಪದಲ್ಲಿ ಹಣವನ್ನು ತಂದು ಕೊಡು ಎಂದು ಹೇಳಿದೆ. ಕೂಡಲೇ ಆತ ತನ್ನ ಬ್ಯಾಗ್​ಗಳನ್ನು ಕಾರ್​ನಲ್ಲಿ ತುಂಬಲು ಶುರು ಮಾಡಿದ್ದಾನೆ. ಈ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. ಈ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಇನ್ನೋವಾ ಕಾರಲ್ಲಿ 10 ಕೋಟಿ ಹಣದ ಜತೆಗೆ 52 ಕೆಜಿ ಚಿನ್ನ ಪತ್ತೆ; ಬೆಚ್ಚಿಬಿದ್ದ ಐಟಿ ಅಧಿಕಾರಿಗಳು
2023ರಲ್ಲಿ ರಾಜಸ್ಥಾನದಲ್ಲಿಯೂ ಕೂಡ ಇಂತಹುದೇ ಒಂದು ಘಟನೆ ನಡೆದಿತ್ತು. ಪತ್ನಿಗೆ ಸುಮಾರು 55 ಸಾವಿರ ರೂಪಾಯಿ ಜೀವನಾಂಶವನ್ನ ದಶರಥ ಎಂಬಾತ ಕ್ವಾಯಿನ್ ರೂಪದಲ್ಲಿಯೇ ನೀಡಿದ್ದ. ಹನ್ನೊಂದು ತಿಂಗಳುಗಳ ಜೀವನಾಶ ನೀಡದ ಕಾರಣ 55 ಸಾವಿರ ರೂಪಾಯಿ ನೀಡಲು ಕೋರ್ಟ್ ಹೇಳಿತ್ತು. 55 ಸಾವಿರ ರೂಪಾಯಿ 1 ರೂಪಾಯಿ ನಾಣ್ಯಗಳಲ್ಲಿ ತಂದಿದ್ದ ದಶರಥನ ವಿರುದ್ಧ ಪತ್ನಿ ಪರ ವಕೀಲರು ಖಂಡಿಸಿ. ಇದನ್ನು ಎಣಿಸುವುದೇ ಒಂದು ಮಾನಸಿಕ ಶೋಷಣೆಗೆ ಒಳಗಾದಂತೆ ಎಂದಿದ್ದರು. ಕೂಡಲೇ ಜಡ್ಜ್​ ಅವುಗಳನ್ನು ನೀನೆ ಎಣಿಸಿಕೊಡಬೇಕು ಎಂದು ಆದೇಶ ನೀಡಿತ್ತು ಕೊನೆಗೆ 1 ರೂಪಾಯಿ ನಾಣ್ಯಗಳನ್ನು ಸಾವಿರ ರೂಪಾಯಿಯ 55 ಸೆಟ್​ ಮಾಡಿ ಎಣಿಸಿ ಕೊಟ್ಟಿದ್ದ ದಶರಥ. ಇಂದು ತಮಿಳುನಾಡಿನಲ್ಲಿ ನಡೆದ ಘಟನೆಯೂ ಕೂಡ ದಶರಥ ಕೇಸ್​ನ್ನು ನೆನಪಿಸುವಂತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us