ಬರಿದಾದ ಕಾವೇರಿ ಒಡಲು.. ಬರದ ಭೀಕರತೆ ಹೇಳ್ತಿದೆ ಈ ಫೋಟೋಗಳು.. ಆದರೂ ತಮಿಳುನಾಡಿಗೆ ಬೇಕಂತೆ ನೀರು..!

author-image
Ganesh
Updated On
ಬರಿದಾದ ಕಾವೇರಿ ಒಡಲು.. ಬರದ ಭೀಕರತೆ ಹೇಳ್ತಿದೆ ಈ ಫೋಟೋಗಳು.. ಆದರೂ ತಮಿಳುನಾಡಿಗೆ ಬೇಕಂತೆ ನೀರು..!
Advertisment
  • ನೀರು ಬೇಕು ಎಂದು ಮತ್ತೆ ಕ್ಯಾತೆ ತೆಗೆದ ತಮಿಳುನಾಡು
  • ರಾಜ್ಯದಲ್ಲಿ ಬರ ಇದೆ, ಹೀಗಿದ್ದೂ ಕಿರಿಕ್ ಮಾಡ್ತಿದೆ ತಮಿಳುನಾಡು
  • ತಮಿಳುನಾಡು ಆಗ್ರಹಕ್ಕೆ ರಾಜ್ಯದಿಂದ ತೀವ್ರ ವಿರೋಧ

ರಾಜ್ಯದಲ್ಲಿ ನೀರಿನ ಹಾಹಾಕಾರ ಹೆಚ್ಚಾದ ಹಿನ್ನಲೆ ಕಾವೇರಿ ನದಿ ನೀರು ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಜನ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಈ ನಡುವೆ ತಮಿಳುನಾಡಿನಿಂದ ಮತ್ತೆ ಕ್ಯಾತೆ ಶುರುವಾಗಿದೆ.

ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಆಗ್ರಹ ಕೇಳಿ ಬಂದಿದೆ. ಕುಡಿಯಲು 0.5 ಟಿಎಂಸಿ ನೀರು ಸಾಕು. ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬೇಡಿ. ನಮ್ಮ ತಿಂಗಳ ಪಾಲು 2.5 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಡಿ ಎಂದು ನಿನ್ನೆ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ:ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!

publive-image

ಇತ್ತ, ತಮಿಳುನಾಡು ಒತ್ತಾಯಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ವಾದ ಮಾಡಿದೆ. ಇನ್ನು, ಮೇ 16ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮತ್ತೊಂದು ಕಡೆ ಕಾವೇರಿ ಒಡಲು ಸಂಪೂರ್ಣ ಬತ್ತಿ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳು ವೈರಲ್ ಆಗಿದ್ದು, ಅವುಗಳನ್ನು ನೋಡಿದ್ರೆ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಹೀಗಿದ್ದೂ ತಮಿಳುನಾಡು ಮತ್ತೆ ನೀರು ಕೇಳುತ್ತಿದೆ. ನಿಸರ್ಗಧಾಮ ಬಳಿಯ ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗಿರುವ ಫೋಟೋಗಳು ಇವು.

publive-image

ಇದನ್ನೂ ಓದಿ:ಭೀಕರ ಅಪಘಾತ.. ಕಂದಕಕ್ಕೆ ಉರುಳಿದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment