BBK11; ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್​.. ಕೆಂಗಣ್ಣಿನಿಂದ ಗುರಾಯಿಸಿದ ‘ಬೆಂಕಿ’

author-image
Bheemappa
Updated On
BBK11; ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್​.. ಕೆಂಗಣ್ಣಿನಿಂದ ಗುರಾಯಿಸಿದ ‘ಬೆಂಕಿ’
Advertisment
  • ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿರುವ ಹಳೆ ಸ್ಪರ್ಧಿಗಳು
  • ಡ್ಯಾನ್ಸ್ ಮಾಡುತ್ತ ಬಂದ ಹನುಮಂತುಗೆ ತನಿಷಾ ಬಿಗ್ ಶಾಕ್
  • ವಾರದ ಮೊದಲನೇ ದಿನ ಎಲ್ಲ ಸ್ಪರ್ಧಿಗಳಲ್ಲೂ ನಗುಮುಖ

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೊಗದಲ್ಲಿ ಸಂತಸದ ಕಳೆ ಬಂದಿದೆ. ಕಳೆದ ಎರಡ್ಮೂರು ವಾರಗಳಿಂದ ಬೇಸರದಲ್ಲಿದ್ದ ಸ್ಪರ್ಧಿಗಳು ಇಂದು ಲವಲವಿಕೆಯಿಂದ ಇದ್ದಾರೆ. ಮನೆಯಿಂದ ಯಾರದರೂ ಹೊರ ಹೋಗುತ್ತಾರೆ ಎಂದು ಎಲ್ಲರಲ್ಲೂ ಟೆನ್ಷನ್ ಇತ್ತು. ಆದ್ರೆ ಯಾರೂ ಎಲಿಮಿನೇಷನ್ ಆಗಿಲ್ಲ. ಇದರ ಜೊತೆಗೆ ಹಳೆಯ ಬಿಗ್​ ಬಾಸ್ ಸ್ಪರ್ಧಿಗಳು ಮನೆಗೆ ಆಗಮಿಸಿ ಬಿಗ್ ಸರ್​​ಪ್ರೈಸ್ ಕೊಟ್ಟಿದ್ದು ಸ್ಪರ್ಧಿಗಳೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ.

ಬಿಗ್ ಬಾಸ್​ 11ರ ಸೀಸನ್​​ಗೆ, ಬಿಗ್​ಬಾಸ್​ ಸೀಸನ್​- 10 ರ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಎಲ್ಲ ಹಾಲಿ ಸ್ಪರ್ಧಿಗಳು ಸಖತ್ ಖುಷಿಯಾಗಿದ್ದಾರೆ. ಅವರ ಜೊತೆ ಬೆರೆತು ಸಖತ್ ಸ್ಟೆಪ್ಸ್​ ಕೂಡ ಹಾಕಿದ್ದಾರೆ. ಮನೆಯಲ್ಲಿ ಸರ್​ಪ್ರೈಸ್​ ಜೊತೆಗೆ ಮಜಾ ಕೂಡ ತುಂಬಿ ತುಳುಕುತ್ತಿದೆ.

ಇದನ್ನೂ ಓದಿ: BBK11; ಹನುಮಂತು ಪ್ರೊಫೆಷನಲ್ ಕಿಲಾಡಿ -ಕಿಚ್ಚನ ಮುಂದೆಯೇ ರಜತ್ ಹೀಗೆ ಹೇಳಿದ್ದು ಯಾಕೆ?

publive-image

ಹನುಮಂತು ಅಂತು ಲುಂಗಿ ಮೇಲೆಯೇ ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಚುಟು ಚುಟು ಅಂತೈತೆ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ತನಿಷಾ ಕುಪ್ಪಂಡಾ ಗುರಾಯಿಸಿಕೊಂಡು ಹನುಮಂತು ಅವರನ್ನು ನೋಡಿದ್ದು ನಾಚಿ ನೀರಾಗಿ ಹೋಗಿದ್ದಾನೆ.

ಇನ್ನು ಮಾವ ಎಂದು ತುಕಾಲಿ ಸಂತು ಹೆಗಲ ಮೇಲೆ ಚಂಗನೆ ಹನುಮಂತು ಹಾರಿದ್ದಾನೆ. ಮಾವ ಮಾವ ಅಂದು ಬಿಟ್ಟು ಮಾನಸನೇ ಕಳಿಸಿ ಬಿಟ್ಟಿಯಲ್ಲಾ ಮಾವ ಎಂದು ತುಕಾಲಿ ಸಂತು ಫುಲ್ ಕಾಮಿಡಿ ಮಾಡಿದ್ದಾರೆ. ಸಂತು ಜೊತೆ ಪಂತು ಅಂದರೆ ವರ್ತೂರು ಸಂತೋಷ ಕೂಡ ಬಿಗ್ ಮನೆಗೆ ಬಂದಿದ್ದು ಇಬ್ಬರು ತಬ್ಬಿಕೊಂಡು ಖುಷಿ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment