IPL 2025: ವಿರಾಟ್ ಕೊಹ್ಲಿ ಸ್ನೇಹಿತ ಐಪಿಎಲ್​​ಗೆ ಅಂಪೈರ್ ಆಗಿ ಆಯ್ಕೆ

author-image
Ganesh
Updated On
IPL 2025: ವಿರಾಟ್ ಕೊಹ್ಲಿ ಸ್ನೇಹಿತ ಐಪಿಎಲ್​​ಗೆ ಅಂಪೈರ್ ಆಗಿ ಆಯ್ಕೆ
Advertisment
  • ಮಾರ್ಚ್ 22 ರಿಂದ ಐಪಿಎಲ್ ಟೂರ್ನಿ ಆರಂಭ
  • ಕೊಹ್ಲಿ ಸ್ನೇಹಿತ ತನ್ಮಯ್ ಶ್ರೀವಾಸ್ತವ ಈಗ ಅಂಪೈರ್
  • 2008ರಲ್ಲಿ ಇಬ್ಬರು ಒಟ್ಟಿಗೆ ವಿಶ್ವಕಪ್ ಆಡಿದ್ದರು

ಐಪಿಎಲ್-2025ರ ಮೊದಲ ಪಂದ್ಯ ಮಾರ್ಚ್ 22 ರಂದು ನಡೆಯಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಮಧ್ಯೆ ವಿರಾಟ್ ಕೊಹ್ಲಿಯ ಸಹ ಆಟಗಾರನಿಗೆ ಸಂಬಂಧಿಸಿದ ಆಸಕ್ತಿದಾಯಕ ಸುದ್ದಿ ಸಿಕ್ಕಿದೆ. ಅಂದು ಕೊಹ್ಲಿ ಜೊತೆ ಆಡಿರುವ ತನ್ಮಯ್ ಶ್ರೀವಾಸ್ತವ ಐಪಿಎಲ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ತನ್ಮಯ್ ಶ್ರೀವಾಸ್ತವ ಕೊಹ್ಲಿ ನಾಯಕತ್ವದಲ್ಲಿ 2008ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ್ದರು. ಆಗ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತು. ಕೊಹ್ಲಿ ಜೊತೆ ಆಡಿದ್ದ ತನ್ಮಯ್ ಈಗ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅಂಪೈರ್ ಆಗಿದ್ದು, ಆದರೆ ಅವರು ಆನ್-ಫೀಲ್ಡ್ ಅಂಪೈರಿಂಗ್ ಮಾಡುವುದಿಲ್ಲ. ಆ ಮೂಲಕ ಐಪಿಎಲ್ ಆಡಿದ ಓರ್ವ ಆಟಗಾರ ಐಪಿಎಲ್​​ಗೆ ಅಂಪೈರ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಐಪಿಎಲ್​​ಗೂ ಮುನ್ನವೇ ಧೋನಿ ಸೆನ್ಸೇಷನ್.. ಅನಿಮಲ್ ಅವತಾರ ಹೊಸ ಟ್ರೆಂಡ್​..!

publive-image

ತನ್ಮಯ್ 5 ವರ್ಷಗಳ ಹಿಂದೆ ಕ್ರಿಕೆಟ್ ತೊರೆದಿದ್ದಾರೆ. ನಂತರ ಅಂಪೈರಿಂಗ್ ಕೋರ್ಸ್ ಮಾಡಿದರು. ತನ್ಮಯ್ ಎರಡು ವರ್ಷಗಳ ಕಾಲ ಲೆವೆಲ್ 2 ಕೋರ್ಸ್ ಮಾಡಿ ದೇಶೀಯ ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಪ್ರಾರಂಭಿಸಿದರು.

ಐಪಿಎಲ್‌ನಲ್ಲಿ ತನ್ಮಯ್ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2007 ರಿಂದ 2009 ರವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ತನ್ಮಯ್ 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 4918 ರನ್ ಗಳಿಸಿದ್ದಾರೆ. 10 ಶತಕಗಳು ಮತ್ತು 27 ಅರ್ಧಶತಕ ಬಾರಿಸಿದ್ದಾರೆ. ತನ್ಮಯ್ ಲಿಸ್ಟ್ ಎ ನಲ್ಲಿ 1728 ರನ್ ಗಳಿಸಿದ್ದಾರೆ. ಲಿಸ್ಟ್ ಎ ನಲ್ಲಿ 7 ಶತಕ ಮತ್ತು 10 ಅರ್ಧಶತಕ ಗಳಿಸಿದ್ದಾರೆ.

ಇದನ್ನೂ ಓದಿ: ಮುದ್ದು ಮಗನ ಜೊತೆಗೆ ಮುದ್ದಾದ ಕುಟುಂಬ.. ಕವಿತಾ ಗೌಡ ದಂಪತಿ ಗುಂಡಪ್ಪನ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment