ಬಾಲಿವುಡ್​ನಲ್ಲಿ ಮೀಟೂ ಸಂಚಲನ ಸೃಷ್ಟಿಸಿದ್ದ ತನುಶ್ರೀ ದತ್ತಾಗೆ ಈಗ ನೋವು, ಕಣ್ಣೀರು.. ಮನೆಯಲ್ಲೇ ನೆಮ್ಮದಿ ಏಕೆ ಇಲ್ಲವಾಯಿತು..?

author-image
Ganesh
Updated On
ಬಾಲಿವುಡ್​ನಲ್ಲಿ ಮೀಟೂ ಸಂಚಲನ ಸೃಷ್ಟಿಸಿದ್ದ ತನುಶ್ರೀ ದತ್ತಾಗೆ ಈಗ ನೋವು, ಕಣ್ಣೀರು.. ಮನೆಯಲ್ಲೇ ನೆಮ್ಮದಿ ಏಕೆ ಇಲ್ಲವಾಯಿತು..?
Advertisment
  • ತನುಶ್ರೀ ದತ್ತಾಗೆ ಏನಾಯಿತು? ಕಣ್ಣೀರಿಗೆ ಕಾರಣವೇನು?
  • ಕಣ್ಣೀರು ಇಡುತ್ತ ನೋವು ಹೊರ ಹಾಕಿದ ತನುಶ್ರೀ ದತ್ತಾ
  • ನಾನಾ ಪಾಟೇಕರ್ ವಿರುದ್ಧ ಮೀಟೂ ಕೇಸ್ ಹಾಕಿದ್ದ ತನುಶ್ರೀ ​

ಬಾಲಿವುಡ್​ನಲ್ಲಿ ನಟಿ ತನುಶ್ರೀ ದತ್ತಾ 2018 ರಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಬಾಲಿವುಡ್​ನಲ್ಲಿ ಮೀಟೂ ಚಳವಳಿಗೆ ಕಾರಣವಾಗಿದ್ದರು. ತಮ್ಮ ಮೇಲೆ ಹಿರಿಯ ನಟ ನಾನಾ ಪಾಟೇಕರ್ ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಇದು ಬಾಲಿವುಡ್​ನಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈಗ ಅದೇ ನಟಿ ತನುಶ್ರೀ ದತ್ತಾ ಅಳುತ್ತಾ ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ತನಗೆ ಸಹಾಯ ಬೇಕೆಂದು ಅಂಗಾಲಾಚಿ ಬೇಡಿಕೊಂಡಿದ್ದಾರೆ. ತಮ್ಮದೇ ಮನೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಕಿರುಕುಳ ಆಗುತ್ತಿದೆ ಎಂದು ತನುಶ್ರೀ ದತ್ತಾ ಕಣ್ಣೀರಿಟ್ಟಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ತನುಶ್ರೀ ದತ್ತಾಗೆ ಏನಾಯಿತು? ಕಣ್ಣೀರಿಗೆ ಕಾರಣವೇನು?

ತನುಶ್ರೀ ದತ್ತಾ 2018 ರಲ್ಲಿ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿ ಎಬ್ಬಿಸಿದವರು. ಈಗ ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂದು ತನುಶ್ರೀ ದತ್ತಾ ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋದಲ್ಲಿ ತನುಶ್ರೀ ದತ್ತಾ ಹೇಳಿರುವುದೇನು ಅಂತ ನೋಡಿದರೆ ನನ್ನ ಸ್ವಂತ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ನಾನು ಈಗಷ್ಟೇ ಪೊಲೀಸರನ್ನು ಕರೆದಿದ್ದೆ. ನನಗೆ ಚಿಂತೆಯಾಗುತ್ತಿದೆ. ಹೀಗಾಗಿ ಪೊಲೀಸರನ್ನು ಕರೆದಿದ್ದೆ. ಪೊಲೀಸರು ಬಂದಿದ್ದರು. ಸೂಕ್ತವಾಗಿ ದೂರು ನೀಡಲು ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಹೇಳಿದ್ದಾರೆ. ಬಹುಶಃ ನಾಳೆ ಅಥವಾ ನಾಡಿದ್ದು ನಾಳೆ ಪೊಲೀಸ್ ಠಾಣೆಗೆ ಹೋಗುತ್ತೇನೆ. ನಾನು ಚೆನ್ನಾಗಿಲ್ಲ. ನನಗೆ ಕಳೆದ ನಾಲ್ಕೈದು ವರ್ಷಗಳಿಂದ ಭಾರಿ ಕಿರುಕುಳ ನೀಡಲಾಗುತ್ತಿದೆ. ಇದರಿಂದ ನನ್ನ ಆರೋಗ್ಯ ಹಾಳಾಗುತ್ತಿದೆ.

ಇದನ್ನೂ ಓದಿ: ಗೆದ್ದರಷ್ಟೇ ಸರಣಿ ಜೀವಂತ! ಇತಿಹಾಸ ಬೇರೆನೇ ಹೇಳ್ತಿದೆ.. ಇಲ್ಲಿ ನುಗ್ಗಿ ಹೊಡೆದ್ರೆನೇ ಚರಿತ್ರೆ..!

publive-image

ನನಗೆ ಮನೆ ಕೆಲಸದವರನ್ನು ನೇಮಕ ಮಾಡಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ನನಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಮನೆ ಹಾಳಾಗಿದೆ. ನಾನು ಮನೆ ಕೆಲಸದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿಲ್ಲ. ಏಕೆಂದರೆ ಅವರೆ ತಮಗೆ ಬೇಕಾದವರ ಮನೆ ಕೆಲಸಕ್ಕೆ ಕಳಿಸುತ್ತಾರೆ. ಮನೆ ಕೆಲಸದವರ ಜೊತೆಗೆ ನನಗೆ ಕೆಟ್ಟ ಅನುಭವ ಆಗಿದೆ. ಮನೆ ಕೆಲಸದವರು ಬಂದು, ಕಳ್ಳತನ ಮಾಡ್ತಾರೆ ಮತ್ತು ಎಲ್ಲ ರೀತಿಯ ಕೆಲಸ ಮಾಡ್ತಾರೆ. ನಾನೇ ನನ್ನ ಎಲ್ಲ ಕೆಲಸ ಮಾಡಿಕೊಳ್ಳಬೇಕಾಗಿದೆ. ನನ್ನ ಮನೆಯ ಬಾಗಿಲ ಹೊರಗೆ ಜನ ಬರುತ್ತಾರೆ. ನನಗೆ ನನ್ನ ಮನೆಯಲ್ಲೇ ತೊಂದರೆಯಾಗುತ್ತಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಕಣ್ಣೀರು ಹಾಕುತ್ತಾ ತನುಶ್ರೀ ದತ್ತಾ ಬೇಡಿಕೊಂಡಿದ್ದಾರೆ.

ವಿಡಿಯೋದ ಕಾಪ್ಷನ್​ನಲ್ಲಿ ನಾನು ರೋಗಗ್ರಸ್ಥೆಯಾಗಿದ್ದೇನೆ. ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018ರ ಮೀಟೂನಿಂದ ಶುರುವಾಗಿದೆ. ನಾನು ರೋಸಿ ಹೋಗಿ, ಪೊಲೀಸರಿಗೆ ಕಾಲ್ ಮಾಡಿದ್ದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ. ತಡವಾಗುವ ಮೊದಲು ಏನಾದರೂ ಮಾಡಿ ಎಂದು ತನುಶ್ರೀ ದತ್ತಾ ಬರೆದಿದ್ದಾರೆ.

ಇದನ್ನೂ ಓದಿ: ಈ ಐದು ಸವಾಲು ಮೆಟ್ಟಿ ನಿಂತ್ರೆ ಟೀಂ ಇಂಡಿಯಾ ಸೇಫ್.. ಇಲ್ಲದಿದ್ರೆ ಕನಸು ಭಗ್ನ..!

publive-image

ಇನ್​ಸ್ಟಾಗ್ರಾಮ್​​ನಲ್ಲಿ ತಮ್ಮ ಸಮಸ್ಯೆ ಏನೆಂದು ತನುಶ್ರೀ ದತ್ತಾ ಬರೆದಿದ್ದಾರೆ. ಈ ರೀತಿ ಭಾರಿ ಶಬ್ದ ಬರುತ್ತೆ. ಕಳೆದ ಕೆಲ ವರ್ಷಗಳಿಂದ ಹಗಲು ರಾತ್ರಿ ಗಂಟೆ ಬಾರಿಸಿದ ಶಬ್ದ ಬರುತ್ತೆ! ಇದರ ಬಗ್ಗೆ ಬಿಲ್ಡಿಂಗ್ ಮ್ಯಾನೇಜ್ಮೆಂಟ್​ಗೆ ದೂರು ಕೊಟ್ಟು ಸಾಕಾಗಿದೆ. ನನಗೆ ವಿಶ್ರಾಂತಿ ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ನಂತರ ಕೆಲವು ವ್ಯಕ್ತಿಗಳು ಬಂದು ಮನೆಯ ಬೆಲ್ ಬಾರಿಸುತ್ತಾರೆ. ಮನೆಯ ಬಾಗಿಲಲ್ಲಿ ಡೋಂಟ್ ಡಿಸ್ಟರ್ಬ್ ಬೋರ್ಡ್ ಹಾಕಿದ್ದರೂ ಮನೆಯ ಬೆಲ್ ಮಾಡ್ತಾರೆ ಎಂದು ತನುಶ್ರೀ ದತ್ತಾ ತಮ್ಮ ತೊಂದರೆಯನ್ನು ವಿವರಿಸಿದ್ದಾರೆ.

2018 ರಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮುಂಬೈ ಓಹೀಶ್ವರ್ ಪೊಲೀಸ್ ಠಾಣೆಗೆ ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಸಿನಿಮಾ ಶೂಟಿಂಗ್ ವೇಳೆ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ್ದರು. ಈ ದೂರಿನ ಬಗ್ಗೆ ವಿಚಾರಣೆ, ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ನಾನಾ ಪಾಟೇಕರ್ ವಿರುದ್ಧ ದುರುದ್ದೇಶದಿಂದ, ದ್ವೇಷದಿಂದ ದೂರು ನೀಡಿದ್ದಾರೆ ಎಂದು ಪೊಲೀಸರು ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಲೈಂಗಿಕ ಕಿರುಕುಳ ಕೇಸ್​​ನಲ್ಲಿ ನಾನಾ ಪಾಟೇಕರ್​ಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು.

ಇದನ್ನೂ ಓದಿ: ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್​ ಔಟ್​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment