‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್​ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?

author-image
Veena Gangani
Updated On
‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್​ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?
Advertisment
  • ಲಕ್ಷ್ಮೀ ಬಾರಮ್ಮ ಸೀರಿಯಲ್​ಗೆ ತನ್ವಿ ರಾವ್ ಸೆಲೆಕ್ಟ್​ ಆಗಿದ್ದು ಹೇಗೆ?
  • ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಮನೆ ಮಾತಾದ ನಟಿ ಈಕೆ
  • ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ ತನ್ವಿ ರಾವ್​

ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಇತ್ತೀಚೆಗಷ್ಟೇ ಅಂತ್ಯ ಕಂಡಿದೆ. ತರಾತುರಿಯಲ್ಲಿ ಧಾರಾವಾಹಿ ಮುಗಿಸಿದ್ದಕ್ಕೆ ವೀಕ್ಷಕರು ಬೇಸರ ಹೊರ ಹಾಕಿದ್ದರು. ಅಷ್ಟೇ ಅಲ್ಲದೇ ದಿಢೀರ್ ಅಂತ ಧಾರಾವಾಹಿ ವೈಂಡಪ್ ಆಗಿದ್ದಕ್ಕೆ ನಟಿ ತನ್ವಿ ರಾವ್​ ಕೂಡ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪಾಕ್​ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!

ಹೌದು, ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ನಟಿ ತನ್ವಿ ರಾವ್ ​ಸಖತ್​ ಫೇಮಸ್​ ಆಗಿದ್ದಾರೆ. ಇದೇ ಸೀರಿಯಲ್​ನಲ್ಲಿ ಕೀರ್ತಿ ಪಾತ್ರದಲ್ಲಿ ಭರ್ಜರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ತನ್ವಿ ರಾವ್​. ಸೀರಿಯಲ್​ ಮುಕ್ತಾಯದ ಬಳಿಕ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ನಟಿ ತನ್ವಿ ರಾವ್​ ಲಕ್ಷ್ಮೀ ಬಾರಮ್ಮ ಸೀರಿಯಲ್​ಗೆ ಬಂದಿದ್ದೇ ಒಂದು ರೋಚಕ ಕಥೆ ಅಂತಲೇ ಹೇಳಬಹುದು.

ಈ ಬಗ್ಗೆ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ ನಟಿ ತನ್ವಿ ರಾವ್, ನಾನು ಸೀರಿಯಲ್​ನಿಂದ ನನ್ನ ನಟನೆ ಬೆಳವಣಿಗೆ ಕಂಡಿದೆ. ನಾನು ರಾಧೆ ಶಾಮ ಧಾರಾವಾಹಿಯಲ್ಲಿ ತುಂಬಾ ಸೆಟಲ್ ಆಗಿ ನಟನೆ ಮಾಡಬೇಕು, ಆದಷ್ಟು ಕಣ್ಣಲ್ಲೇ ಎಲ್ಲಾ ಹೇಳಬೇಕು, ಓವರ್​ ಌಕ್ಟಿಂಗ್​ ಮಾಡಬಾರದು ಅಂತ ಟ್ರೀಟ್​ ಮಾಡ್ತಾ ಇದ್ದರು. ಚೌಕಟ್​ನಲ್ಲಿ ನಟನೆ ಮಾಡೋ ಕ್ಯಾರೆಕ್ಟರ್​ನಿಂದ ಸೀದಾ ಏನೋ ಬೌಂಡರಿ ಇಲ್ಲದೇ ಇರೋ ಹಾಗೇ ಜಪ್​ ಹೊಡೆದಿದ್ದು ನನಗೆ ದೊಡ್ಡ ಅನುಭವ ಆಗಿದೆ. 3 ವರ್ಷಗಳ ಕಾಲ ನಾನು ಹೇಗೆ ಕಾಣುತ್ತೇನೆ ಅಂತ ಕಂಡಿದ್ದೇನೆ. ಅದರಲ್ಲೂ ಕೀರ್ತಿ ಪಾತ್ರ ಎಲ್ಲವನ್ನು ತೋರಿಸಬೇಕಾಗಿತ್ತು. ಈ ಪಾತ್ರದಿಂದ ತುಂಬಾ ಕಲಿತ್ತೀದ್ದೀನಿ. ನಾನು ಲಕ್ಷ್ಮೀ ಪಾತ್ರಕ್ಕೆ ಲುಕ್​ ಟೆಸ್ಟ್​ ಕೊಟ್ಟಿದ್ದೆ. ಆ ಪಾತ್ರಕ್ಕೆ ವರ್ಕೌಟ್​ ಆಗಿಲ್ಲ ಅಂತ ಎಷ್ಟೋ ತಿಂಗಳುಗಳ ಬಳಿಕ ಕೀರ್ತಿ ಪಾತ್ರಕ್ಕೆ ನನ್ನ ಕರೆದಿದ್ದರು. ಅವರು ನನ್ನ ಮೇಲೆ ಇಟ್ಟುಕೊಂಡಿದ್ದ ನಂಬಿಕೆಗೆ ನಾನು ಆ ಪಾತ್ರದಲ್ಲಿ ಇಷ್ಟು ಚೆನ್ನಾಗಿ ಅಭಿನಯಿಸೋದಕ್ಕೆ ಆಯ್ತು ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment