ತರುಣ್​ ಸುಧೀರ್​-ಸೋನಲ್​ ಮದ್ವೆ ಕಾಗದ ವೈರಲ್​.. ಪರಿಸರ ಸ್ನೇಹಿ ಜಾಗೃತಿಯ ಮೊರೆ ಹೋದ ಡೈರೆಕ್ಟರ್​!

author-image
AS Harshith
Updated On
ದರ್ಶನ್​ ಭೇಟಿಗೆ ನಿರಾಕರಿಸಿದ್ರಾ ಸೋನಲ್​? ತರುಣ್​ ಕೈ ಹಿಡಿಯೋ ಹುಡುಗಿ ಕೊಟ್ಟ ಕಾರಣ ಏನು ಗೊತ್ತಾ?
Advertisment
  • ತರುಣ್​ ಸುಧೀರ್​ ಮತ್ತು ಸೋನಲ್​ ಮೊಂತೆರೊ ಮದುವೆ ಸಂಭ್ರಮ
  • ಪರಿಸರ ಸ್ನೇಹಿ ಲಗ್ನ ಪತ್ರಿಕೆ ಪ್ರಿಂಟ್​​ ಮಾಡಿಸಿದ ಸ್ಯಾಂಡಲ್​ವುಡ್​ ಜೋಡಿ
  • ಈ ಆಮಂತ್ರಣ ಪ್ರತಿಕೆ ಬಿಸಾಡಿಸದರೆ ಅಲ್ಲಲ್ಲೇ ಗಿಡಗಳು ಹುಟ್ಟುತ್ತವೆ!

ಕನ್ನಡದ ಖ್ಯಾತ ನಟ ದಿ. ಸುಧೀರ್ ಅವರ 2ನೇ ಮಗ ತರುಣ್​ ಸುಧೀರ್​ ನಟಿ ಸೋನಲ್​ ಮೊಂತೆರೊ ಅವರನ್ನು ಮದ್ವೆಯಾಗುತ್ತಿದ್ದಾರೆ. ಆಗಸ್ಟ್ 10-11 ರಂದು ಬೆಂಗಳೂರಿನ ಬಸವೇಶ್ವರ ನಗರದ ಶಂಕರ್​ ಮಠದ ಬಳಿಯ​ ಹಾಲ್​ನಲ್ಲಿ ವಿವಾಹವಾಗಲಿದ್ದಾರೆ. ಅದಕ್ಕೂ ಮುನ್ನ  ಈ ಜೋಡಿ ತಮ್ಮ ಸ್ನೇಹಿತರ ಬಳಗವನ್ನು ವಿವಾಹಕ್ಕೆ ಆಮಂತ್ರಿಸಲು ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಆ ಮೂಲಕ ಫ್ಯಾನ್ಸ್​​ ಮನಗೆದ್ದಿದ್ದಾರೆ.

publive-image

ಆಮಂತ್ರಣ ಪತ್ರಿಕೆಯ ವಿಶೇಷವೇನು ಗೊತ್ತಾ?

ಸಾಮಾನ್ಯವಾಗಿ ಬೇಡವಾದ ಕಾಗದಗಳನ್ನು ಬಿಸಾಕುವವರೇ ಜಾಸ್ತಿ. ಇದೇ ನಿಟ್ಟಿನಲ್ಲಿ ತರುಣ್ ಮತ್ತು ಸೋನಲ್​ ಪರಿಸರ ಸ್ನೇಹಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಇದನ್ನು ನೆಲದ ಮೇಲೆ ಬಿಸಾಡಿದ್ರೆ ಗಿಡವಾಗಿ ಬೆಳೆಯುತ್ತದೆ.

publive-image

ವಿಶೇಷವಾದ ಆಮಂತ್ರಣ ಪತ್ರಿಕೆಯನ್ನು ತರುಣ್​​​ ಮತ್ತು ಸೋನಲ್​ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆಯ ಜೊತೆಗೆ ಪೆನ್, ಪೆನ್ಸಿಲ್ ಹಾಗೂ ಪುಸ್ತಕವನ್ನು ನೀಡಿದ್ದಾರೆ. ಇದು ಕೂಡ ಪರಿಸರ ಸ್ನೇಹಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

ತರುಣ್​ ಕೈ ಹಿಡಿಯುತ್ತಿರುವ ಈ ನಟಿ ಯಾರು?

ಸೋನಲ್​ ಮೊಂತೆರೊ ಮೂಲತಃ ಮಂಗಳೂರಿನವರು. ತುಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2015ರಲ್ಲಿ ತುಳು ಭಾಷೆಯ ‘ಎಕ್ಕ ಸಕ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು.

publive-image

ಸೋನಲ್​ ಅವರು, ‘ಜೈ ತುಳುನಾಡು’, ‘ಪಿಲಿಬೈಲ್‌ ಯಮುನಕ್ಕ’ ತುಳು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಳಿಕ 2018ರಲ್ಲಿ ‘ಅಭಿಸಾರಿಕೆ’‌ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಪಡೆದರು. ಅದೇ ವರ್ಷ ಒಳ್ಳೇ ಹುಡುಗ ಪ್ರಥಮ್ ಜೊತೆ ‘ಎಂಎಲ್‌ಎ’ ಚಿತ್ರದಲ್ಲಿ ನಟಿಸಿದರು.

ಇದನ್ನೂ ಓದಿ: ಚಂದನಾಗೆ ಮಿಡಿದ ಜನರ ಕಣ್ಣೀರು.. ಅಂಗಾಂಗ ದಾನ ಮಾಡಿದ ಬಾಲಕಿಗೆ ಮೆರವಣಿಗೆ ಮೂಲಕ ಗೌರವ

ಇದಾದ ಬಳಿಕ ‘ಮದುವೆ ದಿಬ್ಬಣ’ ಚಿತ್ರದಲ್ಲಿ ನಾಯಕಿಯಾಗಿ ಸೋನೆಲ್ ಕಾಣಿಸಿಕೊಂಡರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರಕ್ಕೆ ಸೋನೆಲ್ ನಾಯಕಿಯಾಗಿ ಮಿಂಚಿದರು. 2021ರಲ್ಲಿ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ಕಾಣಸಿಕೊಂಡರು.

publive-image

‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್​​ಗೆ ಸೋನಲ್​ ಜೋಡಿಯಾಗಿ ಕಾಣಿಸಿಕೊಂಡರು. ಅಂದಹಾಗೆಯೇ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ‘ರಾಬರ್ಟ್’​ ಚಿತ್ರದಿಂದಲೇ ತರುಣ್ ಮತ್ತು ಸೋನಲ್ ನಡುವೆ ಆತ್ಮೀಯತೆ ಹೆಚ್ಚಾಗಿ ಕೊನೆಗೆ ಪ್ರೀತಿ ಹುಟ್ಟಿಕೊಂಡಿತು.

ಇದನ್ನೂ ಓದಿ: Jio, Airtelಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ BSNL; ಗ್ರಾಹಕರು ಹಳೇ ಸ್ನೇಹಿತನ ಮೊರೆ ಹೋಗಿದ್ದೇಕೆ?

publive-image

ರಾಬರ್ಟ್ ಸಿನಿಮಾ ತರುಣ್ ಸುಧೀರ್ ಹಾಗೂ ಸೋನಲ್​ಗೆ ಬ್ರೇಕ್‌ ಕೊಟ್ಟ ಚಿತ್ರ. ಈ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಬಳಗದಲ್ಲಿ ಸೋನಲ್ ಹೆಚ್ಚಾಗಿ ಕಾಣಿಸಿಕೊಂಡರು. ‘ರಾಬರ್ಟ್’ ನಂತರ ‘ಗರಡಿ’ ಚಿತ್ರದಲ್ಲಿ‌ ಸೋನಲ್ ನಾಯಕಿಯಾದರು.

publive-image

ದರ್ಶನ್ ಆಪ್ತ ಯಶಸ್ ಸೂರ್ಯ ‘ಗರಡಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ದರ್ಶನ್ ಆಪ್ತರಾಗಿರುವ ಬಿಸಿ ಪಾಟೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸದ್ಯ ಸೋನಲ್ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಬೇಕಿದೆ. ಉಪೇಂದ್ರ ನಟನೆಯ ‘ಬುದ್ದಿವಂತ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಮಾರ್ಗರೆಟ್ ಲವ್ ಆಫ್ ರಾಮಾಚಾರಿ’ ಚಿತ್ರದಲ್ಲೂ ಸೋನಲ್ ಅಭಿನಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment