newsfirstkannada.com

ಉಮಾಪತಿ ‘ಕಾಟೇರ’ ಟೈಟಲ್​ ಬಗ್ಗೆ ತರುಣ್​ ಸುಧೀರ್​ ರೀ ಕೌಂಟರ್​.. ರೆಸಾರ್ಟ್​ನಲ್ಲಿದದ್ದು ನಿಜ ಎಂದ ಡೈರೆಕ್ಟರ್​

Share :

Published February 21, 2024 at 1:39pm

Update February 21, 2024 at 1:42pm

  ಕಾಟೇರ ಟೈಟಲ್ ಬಗ್ಗೆ ನಿರ್ದೇಶಕ ತರುಣ್​ ಸುಧೀರ್​ ಸ್ಪಷ್ಟನೆ

  ಚಿತ್ರದ ಕಥೆ ಮಾಡಿಸಲು ಉಮಾಪತಿ ನಮಗೆ ಹಣ ಕೊಟ್ಟಿಲ್ಲ

  ರೆಸಾರ್ಟ್ ಬಿಲ್ ಅಂತ 72 ಸಾವಿರ ಹಣ ಕೊಟ್ಟಿದ್ದಾರೆ ಎಂದ ತರುಣ್​

ಕಾಟೇರ ಕಥೆ ನಾನು ಮಾಡಿಸಿದ್ದು, ಕಾಟೇರ ಟೈಟಲ್ ನಂದು ಎಂದ ಉಮಾಪತಿ‌ ಮಾತಿಗೆ ನಿರ್ದೇಶಕ ತರುಣ್​ ಸುಧೀರ್​ ರೀ ಕೌಂಟರ್​ ಕೊಟ್ಟಿದ್ದಾರೆ.

ಉಪಾಧ್ಯಕ್ಷ ಪ್ರಮೋಶನ್ ವೇಳೆ ಮಾತಿನ ಭರದಲ್ಲಿ ಉಮಾಪತಿ ಸರ್ ಕಾಟೇರ ಬಗ್ಗೆ ಮಾತನಾಡಿದ್ರು. ಆ ವಿಚಾರ ದರ್ಶನ್ ಸರ್ ಗಮನಕ್ಕೆ‌ ಹೋಗಿ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಉಮಾಪತಿ ಸರ್ ಮಾತುಗಳು ಕರೆಕ್ಟಾಗಿ ಇರಬೇಕು ಅಂತ ಹೇಳಿದ್ದಾರೆ. ಅದು ಇಬ್ಬರಿಗೂ ಅನ್ವಯಿಸುತ್ತೆ ಎಂದು ತರುಣ್​ ಸುಧೀರ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಉಮಾಪತಿ ಸರ್ ನನ್ನ ಹಣದಲ್ಲಿ ಕಾಟೇರ ಕಥೆ ಮಾಡಿಸಿದ್ದು ಅಂತಾರೆ. ಮೂರುದಿನ ನಾವು ರೆಸಾರ್ಟ್​ನಲ್ಲಿ ಕಥೆಗಾಗಿ ಇದ್ದಿದ್ದು ನಿಜ. ಆದರೆ ಮೂರು ದಿನಗಳಲ್ಲಿ ಒಂದು ಚಿತ್ರದ ಕಥೆ ಮಾಡೋಕೆ ಆಗುತ್ತಾ ಸರ್. ಕಥೆ ನಾನು ಮಾಡಿಸಿದ್ದು ಅಂತ ಹೇಳಬಾರದು ತಂಡದ ಜೊತೆ ಇದ್ದೆ ಅಂತ ಹೇಳಿದ್ರೆ ಇತರ ಆಗ್ತಿರ್ಲಿಲ್ಲ. ಉಮಾಪತಿ ಸರ್ ಕಾಟೇರ ಚಿತ್ರ ನೋಡಿಲ್ಲ ಅಂತಾರೆ. ಅದರೂ ಕಾಟೇರ ಚಿತ್ರದ ಕಥೆ ಅಂತಾರೆ ಸಿನಿಮಾ ಪೋಸ್ಟರ್ ನೋಡಿ ಅವ್ರು ಆ ರೀತಿ ಹೇಳಿರಬಹುದು ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

2017 ರಲ್ಲಿ ನಾನು ಈ ಚಿತ್ರದ ಕತೆ ರೆಡಿ ಮಾಡಿದ್ದು. ಕಾಟೇರ, ಚೌಡಯ್ಯ ಎರಡು ಟೈಟಲ್ ಇಟ್ಕೊಂಡ್ ನಾವು ಸಿನಿಮಾ ಕೆಲಸ ಶುರು ಮಾಡಿದ್ದು. ರಾಕ್ ಲೈನ್ ಪ್ರೊಡಕ್ಷನ್ ಗೆ ಬಂದ ಮೇಲೆ ನಾವು ಚಿತ್ರಕ್ಕೆ ಕಾಟೇರ ಟೈಟಲ್ ಇಟ್ಟಿದ್ದು. ಚಿತ್ರದ ಕಥೆ ಮಾಡಿಸಲು ಉಮಾಪತಿ ನಮಗೆ ಹಣ ಕೊಟ್ಟಿಲ್ಲ. ನಾವು ಮಾಡಿದ ಕಥೆಯನ್ನು ಅವರಿಗೆ ಹೇಳಲು ನಮಗೆ
ರೆಸಾರ್ಟ್ ಮಾಡಿಕೊಟ್ಟಿದ್ರು. ರೆಸಾರ್ಟ್ ಬಿಲ್ ಅಂತ 72 ಸಾವಿರ ಹಣ ಕೊಟ್ಟಿದ್ದಾರೆ ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಮಾಪತಿ ‘ಕಾಟೇರ’ ಟೈಟಲ್​ ಬಗ್ಗೆ ತರುಣ್​ ಸುಧೀರ್​ ರೀ ಕೌಂಟರ್​.. ರೆಸಾರ್ಟ್​ನಲ್ಲಿದದ್ದು ನಿಜ ಎಂದ ಡೈರೆಕ್ಟರ್​

https://newsfirstlive.com/wp-content/uploads/2024/02/Tarun-Sudhir-1-1.jpg

Load More