newsfirstkannada.com

ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

Share :

Published July 15, 2024 at 1:17pm

Update July 15, 2024 at 1:18pm

    ಬಿಗ್ ಡೀಲ್ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಜಿಯೋ-ಏರ್‌ಟೆಲ್

    ಜೂನ್​​ ಅಂತ್ಯದಲ್ಲಿ ಪ್ಲಾನ್ ದರ ಹೆಚ್ಚಿಸಿ ಶಾಕ್ ಕೊಟ್ಟಿದ್ದ ಕಂಪನಿಗಳು

    ಜಿಯೋ, ಏರ್​​ಟೆಲ್​ ರೀಚಾರ್ಜ್​​ ದುಬಾರಿ, ಜನರಿಗೆ ಸಿಗುತ್ತಾ ರಿಲೀಫ್..?

ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋಗಳ ರೀಚಾರ್ಜ್ ಯೋಜನೆ ಹೆಚ್ಚಿಸಿದ ಬೆನ್ನಲ್ಲೇ ಜನರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡಿದ್ದಾರೆ. ಏರ್‌ಟೆಲ್ ಮತ್ತು ಜಿಯೋ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಳ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಸಾಕಷ್ಟು ಟ್ರೆಂಡ್​​ನಲ್ಲಿದೆ. ಸದ್ಯದ ಮಾಹಿತಿ ಪ್ರಕಾರ.. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಮತ್ತು ಬಿಎಸ್‌ಎನ್‌ಎಲ್ ನಡುವೆ 15 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ನಡೆದಿದೆ ಎಂಬ ಸುದ್ದಿ ಇದೆ. TCS ಮತ್ತು BSNL ಒಟ್ಟಾಗಿ ಭಾರತದ 1000 ಹಳ್ಳಿಗಳಲ್ಲಿ 4G ಇಂಟರ್ನೆಟ್ ಸೇವೆ ನೀಡಲಿವೆ. ಆ ಮೂಲಕ ದೇಶದ ಜನರಿಗೆ ಮುಂದಿನ ದಿನಗಳಲ್ಲಿ ಸ್ಪೀಡ್ ಇಂಟರ್ನೆಟ್ ಸೇವೆ ಸಿಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಧೋನಿ, ಸಚಿನ್ ಎಲ್ಲರೂ ಬಂದಿದ್ದರು.. ಅಂಬಾನಿ ಪುತ್ರನ ಮದುವೆಗೆ ಬಾರದೆ ಕೊಹ್ಲಿ ಹೋಗಿದ್ದೆಲ್ಲಿಗೆ..?

Jio-Airtel ಟೆನ್ಷನ್, ಟೆನ್ಷನ್..!
ಸದ್ಯ 4G ಇಂಟರ್ನೆಟ್ ಸೇವೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಪ್ರಾಬಲ್ಯ ಹೊಂದಿವೆ. ಒಂದು ವೇಳೆ BSNL 4G ಇಂಟರ್ನೆಟ್ ಸೇವೆಯನ್ನು ಪರಿಣಾಮಕಾರಿಯಾಗಿ ನೀಡಿದರೆ ಜಿಯೋ ಮತ್ತು ಏರ್‌ಟೆಲ್ ಮಾರ್ಕೆಟ್​ ನೆಲ ಕಚ್ಚಲಿದೆ. ಟಾಟಾ ದೇಶದ ನಾಲ್ಕು ಪ್ರದೇಶಗಳಲ್ಲಿ ಮಾತ್ರ ಡೇಟಾ ಕೇಂದ್ರಗಳನ್ನು ಹೊಂದಿದೆ. BSNL ದೇಶದಾದ್ಯಂತ 9000ಕ್ಕೂ ಹೆಚ್ಚು ಪ್ರದೇಶಗಳಲ್ಲಿ 4G ನೆಟ್‌ವರ್ಕ್‌ ಹೊಂದಿದೆ. ಇದು ಒಂದು ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

Jio-Airtel ರೀಚಾರ್ಜ್ ಹೆಚ್ಚಳ
ಜೂನ್‌ನಲ್ಲಿ ಜಿಯೋ ರೀಚಾರ್ಜ್ ಯೋಜನೆಯನ್ನು ಪರಿಷ್ಕರಣೆ ಮಾಡಿ, ಗ್ರಾಹಕರಿಗೆ ಶಾಕ್ ನೀಡಿತು. ಅದಾದ ಬೆನ್ನಲ್ಲೇ ಏರ್​ಟೆಲ್, ಜಿಯೋ ಹಾದಿಯನ್ನೇ ಹಿಡಿಯಿತು. ಪರಿಣಾಮ ಜಿಯೋ ಮತ್ತು ಏರ್‌ಟೆಲ್‌ ರೀಚಾರ್ಜ್​ ದರ ಹೆಚ್ಚಾಗಿದೆ. ಜುಲೈ 3 ರಿಂದ ಹೊಸ ಪ್ಲಾನ್​ಗಳು ಜಾರಿಗೆ ಬಂದಿವೆ. ಜಿಯೋ ಕಂಪನಿ ಒಮ್ಮಿಂದಲೇ ಶೇಕಡಾ 12 ರಿಂದ 25 ರಷ್ಟು ಬೆಲೆಗಳನ್ನು ಹೆಚ್ಚಿಸಿದೆ. ಏರ್‌ಟೆಲ್ ಶೇಕಡಾ 11 ರಿಂದ 21ಕ್ಕೆ ಹೆಚ್ಚಿಸಿದೆ. Vi 10 ರಿಂದ 21 ರಷ್ಟು ಬೆಲೆಗಳನ್ನು ಹೆಚ್ಚಿಸಿದೆ.

ಇದನ್ನೂ ಓದಿ:ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

https://newsfirstlive.com/wp-content/uploads/2024/07/BSNL.jpg

Load More