/newsfirstlive-kannada/media/post_attachments/wp-content/uploads/2024/11/KL_RAHUL-1.jpg)
ಐಪಿಎಲ್ 2025 ಮೆಗಾ ಆ್ಯಕ್ಷನ್‌ಗೆ ದಿನಗಣನೆ ಶುರುವಾಗಿದ್ದು, ಆಟಗಾರರ ಹರಾಜು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೆಗಾ ಆ್ಯಕ್ಷನ್‌ಗೆ ತಯಾರಿ ಭರ್ಜರಿಯಾಗಿದ್ದು, ಆಟಗಾರರ ಹರಾಜು ಪಟ್ಟಿ ಪ್ರಕಟಿಸಲಾಗಿದೆ. ಇದೇ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಆ್ಯಕ್ಷನ್‌ಗೆ ವೇದಿಕೆ ರೆಡಿಯಾಗುತ್ತಿದೆ.
ಬಹು ನಿರೀಕ್ಷಿತ ಟಾಟಾ IPL 2025 ಆ್ಯಕ್ಷನ್‌ಗೆ ಆಟಗಾರರ ಹರಾಜು ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಒಟ್ಟು 574 ಆಟಗಾರರ ಹೆಸರು ಅಂತಿಮಗೊಳಿಸಲಾಗಿದೆ. ಈ 574 ಆಟಗಾರರಲ್ಲಿ ಸ್ಟಾರ್ ಆಟಗಾರರನ್ನ ಫ್ರಾಂಚೈಸಿಗಳು ಬಿಡ್ ಮಾಡಿ ಖರೀದಿಸಲು ಮೆಗಾ ಪ್ಲಾನ್ ಮಾಡಲಿದ್ದಾರೆ.
2025ರ ಐಪಿಎಲ್‌ನಲ್ಲಿ ಒಟ್ಟು 574 ಆಟಗಾರರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲಿ 366 ಆಟಗಾರರು ಭಾರತೀಯರು ಮತ್ತು 208 ಮಂದಿ ವಿದೇಶಿ ಪ್ಲೇಯರ್ಸ್ ಆಗಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ಹರಾಜು ಪಟ್ಟಿಯಲ್ಲಿರುವ ಆಟಗಾರರನ್ನು ಮೀಸಲು ಬೆಲೆ 2 ಕೋಟಿ ರೂಪಾಯಿಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಈ ದೇಶದ ಅಚ್ಚರಿ ಆಟಗಾರರ ಖರೀದಿಗೆ ಬೆಂಗಳೂರು ಪ್ಲಾನ್; RCB ರಹಸ್ಯ ಲಿಸ್ಟ್ ಔಟ್!
ಮೆಗಾ ಹರಾಜಿನಲ್ಲಿ ಐಪಿಎಲ್ ತಂಡಗಳು ಗರಿಷ್ಠ ಮೊತ್ತ 2 ಕೋಟಿ ರೂಪಾಯಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. 2 ಕೋಟಿ ರೂಪಾಯಿಗೆ ಈಗಾಗಲೇ ಹಲವು ಆಟಗಾರರ ಪಟ್ಟಿ ಕೂಡ ಸಿದ್ದವಾಗಿದೆ. ರಿಷಬ್ ಪಂತ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್, ಆರ್ ಅಶ್ವಿನ್, ಮಿಚೆಲ್ ಸ್ಟಾರ್ಕ್ ಮತ್ತು ಜೋಸ್ ಬಟ್ಲರ್ ಈ ಪಟ್ಟಿಯಲ್ಲಿರುವ ಸ್ಟಾರ್ ಆಟಗಾರರಾಗಿದ್ದಾರೆ. ಈ ಸ್ಟಾರ್ ಆಟಗಾರರು ಐಪಿಎಲ್ ಮೆಗಾ ಆ್ಯಕ್ಷನ್‌ನಲ್ಲಿ ಯಾವ ತಂಡದ ಪಾಲಾಗುತ್ತಾರೆ ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ