/newsfirstlive-kannada/media/post_attachments/wp-content/uploads/2024/05/tata-Nano-EV.jpg)
ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಅದರಂತೆಯೇ ರತನ್ ಟಾಟಾ ಒಡೆತನದ ಟಾಟಾ ಕಂಪನಿ ಭಾರತೀಯ ಗ್ರಾಹಕರನ್ನು ಮನದಲ್ಲಿಟ್ಟುಕೊಂಡು ಹೊಸ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ಸಿದ್ಧಪಡಿಸಿದೆ. ಸದ್ಯ ಈ ಕಾರು ಮಾರುಕಟ್ಟೆಗೆ ಬಂದಿದೆ.
ಹೊಸ ನ್ಯಾನೋ ಕಾರು ಹೇಗಿದೆ?
ಶಕ್ತಿಯುತವಾದ ಮೋಟಾರ್ ಅಳವಡಿಸಿಕೊಳ್ಳುವುದರ ಮೂಲಕ ಹೊಸ ಎಲೆಕ್ಟ್ರಿಕ್ ನ್ಯಾನೋ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಶಕ್ತಿಯುತವಾದ ಬ್ಯಾಟರಿಯನ್ನು ಹೊಂದಿರುವ ನ್ಯಾನೋ ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ ಕ್ರಮಿಸುತ್ತದೆ. ಲಾಂಗ್ ಡ್ರೈವ್ಗೆ ಈ ಕಾರು ಹೇಳಿಮಾಡಿಸಿದಂತಿದೆ.
ನ್ಯಾನೋ ಕಾರಿನ ವಿಶೇಷತೆಗಳು
ಹೊಸ ಕಾರು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಸಂಪರ್ಕ ಸೌಲಭ್ಯ ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್ ಅನ್ನು ನೀಡಲಾಗಿದೆ. ಜೊತೆಗೆ ಈ ಕಾರಿನಲ್ಲಿ 6 ಸ್ಪೀಕರ್ ಸೌಂಡ್ ಸಿಸ್ಟಂ ಜೊತೆಗೆ ಇಂಟರ್ನೆಟ್ ಸಂಪರ್ಕ ಸೌಲಭ್ಯ ನೀಡಲಾಗಿದೆ.
ಇದಲ್ಲದೆ ಕಾರಿನಲ್ಲಿ ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಆ್ಯಂಟಿ ಬ್ರೇಕಿಂಗ್ ಲಾಕಿಂಗ್ ಸಿಸ್ಟಂ, ಸ್ವಯಂ ಚಾಲಿತ ಎಸಿ ಸೌಲಭ್ಯ ನೀಡಲಾಗಿದೆ. ರಿಮೋಟ್ ಲಾಕಿಂಗ್ ಸಿಸ್ಟಂ ಕೂಡ ಇದರಲ್ಲಿದೆ.
ಎಲೆಕ್ಟ್ರಿಕ್ ನ್ಯಾನೋ ಕಾರಿನ ಬೆಲೆ
ಸಾಮಾನ್ಯ ಜನರನ್ನು ತಲುಪಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಹೊಸ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರಿಗಾಗಿ ಈ ಕಾರು 3ರಿಂದ 5 ಲಕ್ಷ ರೂಪಾಯಿಯ ಒಳಗೆ ಖರೀದಿಸಲು ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ