/newsfirstlive-kannada/media/post_attachments/wp-content/uploads/2024/11/NANO-CAR-1.jpg)
ಕೈಗೆಟುಕುವ ದರದಲ್ಲಿ ವಾಹನಗಳನ್ನು ತರುವ ಭಾರತದ ಏಕೈಕ ಆಟೋಮೊಬೈಲ್ ಇಂಡಸ್ಟ್ರಿ ಕಂಪನಿ ಎಂದರೆ ಅದು ಟಾಟಾ. ಈ ಟಾಟಾ ಬ್ರ್ಯಾಂಡ್‌ಗೆ ಯಾರು ಸರಿಸಾಟಿ ಇಲ್ಲ. ಈ ಹಿಂದೆ ಕೇವಲ 1 ಲಕ್ಷ ರೂಪಾಯಿಗೆ ಟಾಟಾ ನ್ಯಾನೋ ಎಂಬ ಕಾರು ನೀಡುತ್ತಿದ್ದ ಟಾಟಾ ಕಂಪನಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲೇ ದೊಡ್ಡ ಮೈಲಿಗಲ್ಲು ಸೃಷ್ಟಿಸಿತ್ತು.
ದ್ವಿಚಕ್ರ ವಾಹನಗಳನ್ನೇ ಬಳಸುತ್ತಿದ್ದ ಭಾರತದ ಮಧ್ಯಮ ವರ್ಗದ ಕುಟುಂಬಸ್ಥರಿಗೆ ಕಡಿಮೆ ದರದಲ್ಲಿ ಕಾರು ನೀಡುವುದು ಟಾಟಾ ಕಂಪನಿ ಉದ್ದೇಶವಾಗಿತ್ತು. ಇದರ ಭಾಗವಾಗಿ ಟಾಟಾ ನ್ಯಾನೋವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಸ್ಥಗಿತಗೊಂಡ ಈ ಕಾರು ಈಗ ಮತ್ತೆ ಕಮ್ಬ್ಯಾಕ್ ಮಾಡುತ್ತಿದೆ.
ಟಾಟಾ ನ್ಯಾನೋ ಸದ್ಯದಲ್ಲೇ ಮಾರುಕಟ್ಟೆಗೆ!
ಬಡವ ಹಾಗೂ ಮಧ್ಯಮವರ್ಗ ಜನರನ್ನು ಗುರಿಯಿಟ್ಟುಕೊಂಡೇ ಈ ಕಾರು ಮಾರುಕಟ್ಟೆಗೆ ಬರಲಿದೆ ಎಂದು ಟಾಟಾ ಗ್ರೂಪ್ ಮೂಲಗಳು ತಿಳಿಸಿವೆ. ಈ ಕಾರು ಆಧುನಿಕ ಸೌಂದರ್ಯತೆಯನ್ನು ಹೊತ್ತು ಜನರ ಮುಂದೆ ಬರಲಿದೆ. ರೆಫ್ರೆಶ್ಡ್ ಬಾಡಿ ಕಾಂಟೌರ್ಸ್, ಸೊಪಿಸ್ಟಿಕೆಟೇಡ್ ಹೆಡ್ಲೈಟ್ ಹೀಗೆ ವಿವಿಧ ರೀತಿಯ ಬದಲಾವಣೆಯೊಂದಿಗೆ ಸಿದ್ಧಗೊಳ್ಳಲಿದೆ ನ್ಯಾನೋ.
ಫೀಚರ್ಸ್ ಏನು?
ಇದು 624ಸಿಸಿ ಪೆಟ್ರೋಲ್ ಇಂಜಿನ್ ಹೊಂದಿರಲಿದೆ. ಕಾರಿನ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್ಗೆ 30 ಕಿಲೋ ಮೀಟರ್ ಚಲಿಸಲಿದೆ ಎಂದು ಹೇಳಲಾಗುತ್ತಿದೆ. ಇದು ಓಡುವ ವೇಗ ಗರಿಷ್ಠ ಗಂಟೆಗೆ 105 ಕಿಲೋ ಮೀಟರ್ ಇದೆ. ಹೈವೇ ಹಾಗೂ ಪಟ್ಟಣಗಳ ರಸ್ತೆಗಳಿಗೂ ಈ ಕಾರ್ ಹೊಂದಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಸಂಪರ್ಕದ ಸೌಲಭ್ಯ ಇರಲಿದೆ. ನಿಮಗೆ 7 ಇಂಚಿನ ಟಚ್ ಸ್ಕ್ರೀನ್ ಕೂಡ ನೀಡಲಾಗುವುದು.
ರೇಟ್ ಎಷ್ಟು?
6 ಸ್ಪೀಕರ್ ಸೌಂಡ್ ಸಿಸ್ಟಮ್ ಜೊತೆಗೆ ಇಂಟರ್ನೆಟ್ ಸಂಪರ್ಕದ ಸೌಲಭ್ಯ ನೀಡಲಾಗುತ್ತಿದೆ. ಪವರ್ ಸ್ಟೇರಿಂಗ್, ಪವರ್ ವಿಂಡೋಸ್, ಆಂಟಿ ಬ್ರೇಕಿಂಗ್ ಲಾಕಿಂಗ್ ಸಿಸ್ಟಮ್ ಮತ್ತು ಸ್ವಯಂಚಾಲಿತ ಎಸಿ ಸೌಲಭ್ಯ, ರಿಮೋಟ್ ಲಾಕಿಂಗ್ ಸೌಲಭ್ಯ ಸಹ ಒದಗಿಸಲಾಗುವುದು. ಎಷ್ಟೆಲ್ಲಾ ಫೀಚರ್ಸ್ ಇರೋ ನ್ಯಾನೋ ವಾಹನದ ಬೆಲೆ ಸಾಮಾನ್ಯ ಜನರ ಬಜೆಟ್‌ನಲ್ಲಿ ಇರಿಸಿದೆ. ಈ ಕಾರು ಕೇವಲ 3 ರಿಂದ 4 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ