ತಂದೆ ಜತೆ ಶಾಲೆಗೆ ಹೋಗುವಾಗ ಅಪಘಾತ.. 3 ವರ್ಷದ ಮಗು ಬಲಿ

author-image
Veena Gangani
Updated On
ತಂದೆ ಜತೆ ಶಾಲೆಗೆ ಹೋಗುವಾಗ ಅಪಘಾತ.. 3 ವರ್ಷದ ಮಗು ಬಲಿ
Advertisment
  • ತಂದೆಯ ಜೊತೆ ಶಾಲೆಗೆ ಹೋಗುತ್ತಿದ್ದ ಮಗು
  • ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ನಿಧನ
  • ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿತ್ರದುರ್ಗ: ಟಾಟಾ ಏಸ್ ಹರಿದು 3 ವರ್ಷದ ಮಗು ಜೀವಬಿಟ್ಟಿರೋ ಘಟನೆ ಜೋಗಿಮಟ್ಟಿ ರಸ್ತೆಯ ನಾಲ್ಕನೇ ಕ್ರಾಸ್ ಬಳಿ ನಡೆದಿದೆ. ಅರತ್ ಬೋರ (3) ಮೃತ ಮಗು.

ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್

ತಂದೆಯ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ. ಟಾಟಾ ಏಸ್​ಗೆ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಜಲ್ಲಿ ರಾಶಿಯ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಟಾಟಾ ಏಸ್ ರಸ್ತೆ ಮೇಲೆ ಬಿದ್ದ ಮಗುವಿನ ಮೇಲೆ ಹರಿದಿದೆ. ಗಂಭಿರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮೃತಪಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment