newsfirstkannada.com

ಟಾಟಾ ಸ್ಟೀಲ್​ನ ಬ್ಯುಸಿನೆಸ್ ಹೆಡ್ ಹತ್ಯೆಗೈದಿದ್ದ ಆರೋಪಿ ಅಕ್ಕಿ ಎನ್​​ಕೌಂಟರ್​..!

Share :

Published May 10, 2024 at 10:09am

    ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದ

    ಓರ್ವ ಸಹಚರ ಪಾರಿ, ತೀವ್ರ ಶೋಧಕಾರ್ಯ ಶುರು

    ಎನ್​ಕೌಂಟರ್ ವೇಳೆ ಇನ್​​​ಸ್ಪೆಕ್ಟರ್​​ಗೆ ಗಂಭೀರ ಗಾಯ ​

ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್​ನ ಶಾಲಿಮಾರ್​ ಗಾರ್ಡನ್​ ಪ್ರದೇಶದಲ್ಲಿ ಟಾಟಾ ಸ್ಟೀಲ್​ನ ಬ್ಯುಸಿನೆಸ್ ಹೆಡ್​​​ ವಿನಯ್ ತ್ಯಾಗಿಯ ಹತ್ಯೆಯಾಗಿತ್ತು. ಸಾಹಿಬಾಬಾದ್ ಪ್ರದೇಶದ ರಾಜೇಂದ್ರ ನಗರದ ಚರಂಡಿಯಲ್ಲಿ ವಿನಯ್ ತ್ಯಾಗಿಯ ಶವ ಪತ್ತೆಯಾಗಿತ್ತು. ಇದೀಗ ವಿನಯ್ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಘಾಜಿಯಾಬಾದ್​ನಲ್ಲಿ ಎನ್​ಕೌಂಟರ್ ಮಾಡಿ ಬೀಸಾಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಕ್ರಿಮಿನಲ್ ಆರೋಪಿ ಅಕ್ಕಿ ಅಲಿಯಾಸ್ ದಕ್ಷ್​​ನನ್ನು ಎನ್​ಕೌಂಟರ್ ಮಾಡಿ ಕೊಲ್ಲಲಾಗಿದೆ. ಈತ ಮೇ 3 ರಂದು ಟಾಟಾ ಸ್ಟೀಲ್​ನ ಬ್ಯಿಸಿನೆಸ್​ ಹೆಡ್​ ವಿನಯ್ ತ್ಯಾಗಿಯನ್ನು ದರೋಡೆ ಮಾಡಿ, ಕೊಲೆ ಮಾಡಿದ್ದ. ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಇಂದು ಬೆಳಗ್ಗೆ ಎನ್​ಕೌಂಟರ್ ಮಾಡಿ ಬೀಸಾಡಿದ್ದಾರೆ.

ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..?

ಆಗಿದ್ದೇನು..?
ಘಾಜಿಯಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಸಹಚರನೊಂದಿಗೆ ಬೈಕ್​ನಲ್ಲಿ ಹೋಗ್ತಿದ್ದಾಗ ಅಕ್ಕಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಇಬ್ಬರು ಪೊಲೀಸರ ಮೇಲೆರಗಲು ಬಂದಿದ್ದಾರೆ, ನಂತರ ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅಕ್ಕಿಗೆ ತಾಗಿದೆ. ಆದರೆ ಸುಲಭವಾಗಿ ಸಹಚರ ಪರಾರಿಯಾಗಿದ್ದಾನೆ.

ಓರ್ವ ಸಬ್ ಇನ್ಸ್​ಪೆಕ್ಟರ್​ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸಬ್ ಇನ್ಸ್​ಪೆಕ್ಟರ್​ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್​ನಲ್ಲಿದ್ದ ಮತ್ತೋರ್ವ ಆರೋಪಿ ಪರಾರಿ ಆಗಿದ್ದಾನೆ. ಹತ್ಯೆಯಾದ ಅಕ್ಕಿ ಅಲಿಯಾಸ್ ದಕ್ಷ ದೆಹಲಿಯ ಸೀಲಂಪುರ ನಿವಾಸಿ ಎಂದು ತಿಳಿದುಬಂದಿದೆ. ಈತನಿಂದ ಲೂಟಿ ಮಾಡಿದ್ದ ಫೋನ್, ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಮೇ 3 ರಂದು ಟಾಟಾ ಸ್ಟೀಲ್ ಬ್ಯುಸಿನೆಸ್ ಹೆಡ್ ವಿನಯ್ ತ್ಯಾಗಿಯನ್ನು ಸಾಯಿಸಿ ದರೋಡೆ ಮಾಡಿದ್ದರು. ವಿನಯ್ ತ್ಯಾಗಿ ಶುಕ್ರವಾರ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಳಿಗೆ ಒಳಗಾದರು. ವಿನಯ್ ದೆಹಲಿಯ ಟಾಟಾ ಸ್ಟೀಲ್​​ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವಾರದ ಹಿಂದಷ್ಟೇ ಕೋಲ್ಕತ್ತಾದಿಂದ ದೆಹಲಿಗೆ ವರ್ಗಾವಣೆಯಾಗಿದ್ದರು.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಟಾ ಸ್ಟೀಲ್​ನ ಬ್ಯುಸಿನೆಸ್ ಹೆಡ್ ಹತ್ಯೆಗೈದಿದ್ದ ಆರೋಪಿ ಅಕ್ಕಿ ಎನ್​​ಕೌಂಟರ್​..!

https://newsfirstlive.com/wp-content/uploads/2024/05/TATA-STEEL.jpg

Load More