Advertisment

ಕೇಂದ್ರದಿಂದ ತೆರಿಗೆ ಹಂಚಿಕೆ ತಾರತಮ್ಯ.. 8 ರಾಜ್ಯಗಳಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

author-image
AS Harshith
Updated On
ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ಮೀಸಲಾತಿಗೆ ತಾತ್ಕಾಲಿಕ ತಡೆ; ಯೂಟರ್ನ್​ ಹೊಡೆದಿದ್ದೇಕೆ ರಾಜ್ಯ ಸರ್ಕಾರ?
Advertisment
  • ಕೇಂದ್ರದ ಜೊತೆ ಸಮರಕ್ಕಿಳಿದ ಸಿದ್ದರಾಮಯ್ಯ
  • ನಮೋ ಸರ್ಕಾರದ ವಿರುದ್ಧ ಸಿದ್ದು ಟ್ಯಾಕ್ಟ್​ ಫೈಟ್​
  • ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಮತ್ತೆ ಕದನಕ್ಕಿಳಿದ ಸಿಎಂ

ಕೇಂದ್ರದ ಜೊತೆ ಮತ್ತೊಮ್ಮೆ ತೆರಿಗೆ ಸಮರ ಶುರುವಾಗಿದೆ. ನಮೋ ಸರ್ಕಾರದ ವಿರುದ್ಧ ಸಿದ್ದು ಟ್ಯಾಕ್ಟ್​ ಫೈಟ್​ಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಸಿಎಂಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

Advertisment

ಸಿದ್ದು ತೆರಿಗೆ ಸಮರ

ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಕಳೆದ ಫೆಬ್ರವರಿ ಹೊತ್ತು ಡೆಲ್ಲಿಯಲ್ಲಿ ಝೆಂಡಾ ಹೊಡೆದಿದ್ದ ಸಿದ್ದು ಸರ್ಕಾರ, ಮೋದಿ ವಿರುದ್ಧ ಹೂಂಕರಿಸಿದ್ರು. ಈಗ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಮತ್ತೆ ಕದನಕ್ಕೆ ಬಿದ್ದಿದ್ದಾರೆ.

publive-image

ಸಿದ್ದು ಟ್ಯಾಕ್ಸ್​ ವಾರ್​!

ಕರ್ನಾಟಕ ಮತ್ತು ಇತರೆ ತಲಾವಾರು ಜಿಎಸ್​​ಡಿಪಿ ಹೆಚ್ಚಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ದಂಡವನ್ನು ಅನುಭವಿಸುತ್ತಿವೆ. ಅಸಮಾನವಾಗಿ ಕಡಿಮೆ ತೆರಿಗೆ ಹಂಚಿಕೆಗಳನ್ನ ಪಡೆಯುತ್ತಿವೆ. ಈ ಅನ್ಯಾಯದ ನಡೆ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತೆ. ಪ್ರಗತಿಪರ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ. ಹಣಕಾಸು ಆಯೋಗವು ಬದಲಾವಣೆಯನ್ನು ಮಾಡುವ ಹಾಗೂ ಬೆಳವಣಿಗೆ ಮತ್ತು ಉತ್ತಮ ತೆರಿಗೆ ಕ್ರೋಢೀಕರಣಕ್ಕಾಗಿ ಉತ್ತೇಜಕಗಳನ್ನು ರಚಿಸುವ ಅಗತ್ಯವಿರುವಾಗ ಹಣಕಾಸಿನ ಒಕ್ಕೂಟದ ಸಮಸ್ಯೆಗಳ ಕುರಿತು ಒಟ್ಟಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ನಾನು ಅವರನ್ನು ಆಹ್ವಾನಿಸಿದ್ದೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಒಟ್ಟಾರೆ, ಸಿದ್ದರಾಮಯ್ಯ ಮತ್ತೊಮ್ಮೆ ಟ್ಯಾಕ್ಸ್​ ವಾರ್​ಗೆ ಇಳಿದಿದ್ದು, ಕೇಂದ್ರದ ವಿರುದ್ಧ ಟ್ಯಾಕ್ಸ್​ ಪೇಯ್ಡ್​ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment