newsfirstkannada.com

ತಾಯಿಯಿಂದಲೇ ಮಗು ಕೊಲೆ ಕೇಸ್​​; ಹಂತಕಿ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಟ್ಯಾಕ್ಸಿ ಡ್ರೈವರ್​

Share :

Published January 13, 2024 at 6:02am

Update January 13, 2024 at 6:03am

    ನಾಲ್ಕು ವರ್ಷದ ಮಗನನ್ನು ಕೊಂದ ಸುಚನಾ ಸೇಠ್ ಪ್ರಕರಣ

    ನಾನು ಆಕೆಗೆ ಯಾವುದೇ ಅನುಮಾನ ಬರಲು ಅವಕಾಶ ಕೊಡಲಿಲ್ಲ

    ಗೋವಾ-ಕರ್ನಾಟಕದ ಗಡಿಯಲ್ಲಿ ನಾಲ್ಕು ಗಂಟೆ ಟ್ರಾಫಿಕ್ ಜಾಮ್‌

ಗೋವಾದಲ್ಲಿ ನಾಲ್ಕು ವರ್ಷದ ಮಗ ಚಿನ್ಮಯ್ ಸೇಠ್​ನನ್ನು ತಾಯಿ ಸುಚನಾ ಸೇಠ್ ಹತ್ಯೆಗೈದ ಕೇಸ್​ಗೆ ಸಂಬಂಧಿಸಿದ್ದಂತೆ ಕಾರು ಚಾಲಕ ರಾಯ್ ಜಾನ್ ಡಿಸೋಜಾ ಕೆಲವೊಂದು ಸಂಗತಿಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಾರು ಚಾಲಕ ರಾಯ್ ಜಾನ್ ಡಿಸೋಜಾ, ನಾನು ಆಕೆಗೆ ಯಾವುದೇ ಅನುಮಾನ ಬರಲು ಅವಕಾಶ ಕೊಡಲಿಲ್ಲ. ಪೊಲೀಸರಿಂದ ನನಗೆ ಪೋನ್ ಬಂದ ಬಳಿಕ ನಾನು ಶಾಂತಿಯಿಂದ ಇದ್ದು ಡ್ರೈವಿಂಗ್ ಮಾಡಿದೆ. ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ನಾರ್ಮಲ್ ಆಗಿ ಇದ್ದೆ. ಕರ್ನಾಟಕದ ಪೊಲೀಸರು ಬ್ಯಾಗ್ ತೆರೆದು ನೋಡಿದಾಗಲೂ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬ್ಯಾಗ್​ನಲ್ಲಿ ಬಟ್ಟೆ, ಪ್ಲಾಸ್ಟಿಕ್ ಇದ್ದವು. ನಾನು ಆಕೆಯನ್ನ ಕೇಳಿದೆ, ಬ್ಯಾಗ್ ತೂಕ ಇದೆ ಎಂದು ಹೇಳಿದೆ. ಆಗ ಕೆಲಸದ ಸಾಮಾನು ಇದೆ ಎಂದಿದ್ದರು. ಪೊಲೀಸರು ಎರಡನೇ ಬಾರಿ ಪೋನ್ ಮಾಡಿದಾಗ, ಅಡ್ರೆಸ್ ಫೇಕ್ ಇದೆ ಎಂದರು.

ಇದನ್ನು ಓದಿ: ಗೋವಾದಲ್ಲಿ ಮಗನನ್ನು ಸಾಯಿಸಿದ ತಾಯಿ.. ಇದೊಂದು ಯಡವಟ್ಟು ಆಗದಿದ್ರೆ ಸುಚನಾ ಸೇಠ್ ಎಸ್ಕೇಪ್‌!

ಬಳಿಕ ಕೊಲೆ ಮಾಡಿರುವುದು ಖಚಿತವಾಯಿತು. ಹೋಟೇಲ್​ನವರು ನನಗೆ ಪೋನ್ ಮಾಡಿ ಕರೆದಿದ್ದರು, 30 ಸಾವಿರ ಕಾರ್ ಬಾಡಿಗೆ ನೀಡುವುದಾಗಿ ಹೇಳಿದ್ದರು. ಬೆಂಗಳೂರಿನಲ್ಲಿ ಮಾನ್ಯತಾ ಪಾರ್ಕ್​ಗೆ ಡ್ರಾಪ್ ಮಾಡಲು ಹೇಳಿದ್ದರು. ರಾತ್ರಿ 11 ಗಂಟೆಯಲ್ಲಿ ತುರ್ತಾಗಿ ಒಬ್ಬರನ್ನು ಬೆಂಗಳೂರಿಗೆ ಡ್ರಾಪ್ ಮಾಡಬೇಕೆಂದು ಹೋಟೇಲ್​ನಿಂದ ಪೋನ್ ಬಂತು. ನಾನು ನನ್ನ ಕಾರ್ ಬಾಡಿಗೆ ಹೇಳಿದೆ. ಐದೇ ನಿಮಿಷದಲ್ಲಿ ಕಾರ್ ಬಾಡಿಗೆಗೆ ಹೋಗಲು ಖಚಿತಪಡಿಸಿದ್ದರು. ರಾತ್ರಿ 12.30ಕ್ಕೆ ಹೋಟೇಲ್​ನಿಂದ ಪಿಕಪ್ ಮಾಡಿದೆ. ಆಗ ನಾನು ಹೋಟೇಲ್​ಗೆ ಹೋದಾಗ, ಆಕೆ ಎರಡೇ ನಿಮಿಷದಲ್ಲಿ ಹೋಟೇಲ್​ನಿಂದ ಹೊರ ಬಂದರು. ಆಗ ನನ್ನ ಬ್ಯಾಗ್, ರಿಸೆಪ್ಷನ್ ಬಳಿ ಇದೆ. ತೆಗೆದುಕೊಂಡು ಬಾ ಎಂದರು.

ನಾನು ರಿಸೆಪ್ಷನ್ ಬಳಿ ಹೋಗಿ ಮಧ್ಯಮ ಗಾತ್ರದ ಟ್ರ್ಯಾಲಿ ಬ್ಯಾಗ್ ಎತ್ತಿಕೊಂಡು ಬಂದೆ. ನನಗೆ ಬ್ಯಾಗ್ ಬಾರಿ ತೂಕ ಇದೆ ಅಂತ ಅನ್ನಿಸಿತು. ಮೇಡಮ್ ಇದರಲ್ಲಿ ಬಾಟಲ್ ಇಲ್ಲವೇ ಎಂದೆ, ಇಲ್ಲ, ಬರೀ ಕೆಲಸದ ಸಾಮಾನು ಇವೆ ಎಂದರು. ಅಲ್ಲಿಂದ ಹೊರಟು ಬಂದೆವು. ಬಳಿಕ ನೀರಿನ ಬಾಟಲ್ ತೆಗೆದುಕೊಂಡೆವು. ಕರ್ನಾಟಕದ ಗಡಿ ಬಳಿ ಹೋದಾಗ ರಸ್ತೆಯಲ್ಲಿ ಬೇರೆ ವಾಹನಗಳ ಅಪಘಾತ ಆಗಿತ್ತು. ಆಗ ನಾನು ಕಾರಿನಿಂದ ಇಳಿದು ಪೊಲೀಸರನ್ನ ಕೇಳಿದೆ. ರಸ್ತೆಯನ್ನು ಕ್ಲಿಯರ್ ಮಾಡಲು ನಾಲ್ಕೈದು ಗಂಟೆ ಆಗುತ್ತೆ ಅಂತ ಪೊಲೀಸರು ಹೇಳಿದ್ದರು. ಇದನ್ನು ನಾನು ಮೇಡಮ್ ಸುಚನಾ ಸೇಠ್​ಗೆ ಹೇಳಿದೆ. ಪೊಲೀಸರ ಕರೆಯಿಂದ ಗಾಬರಿಯಾಗಿ ರಸ್ತೆ ಬದಿಯ ರೆಸ್ಟೋರೆಂಟ್‌ನಲ್ಲಿ ನಿಲ್ಲಿಸುವ ನೆಪದಲ್ಲಿ ಸ್ವಲ್ಪ ಸಮಯ ಕೇಳಿದೆ. ಅಲ್ಲಿ ಪೊಲೀಸ್ ಠಾಣೆಯೊಂದು ಕೇವಲ 500 ಮೀಟರ್ ದೂರದಲ್ಲಿದೆ ಎಂದು ತಿಳಿಯಿತು. ನಾವು ಬೆಂಗಳೂರಿನಿಂದ ಒಂದೂವರೆ ಗಂಟೆಗಳ ದೂರದಲ್ಲಿದ್ದೆವು. ಐಮಂಗಲ ಪೊಲೀಸ್ ಠಾಣೆಗೆ ಟ್ಯಾಕ್ಸಿ ತಿರುಗಿಸಿದೆ. ಅಲ್ಲಿ ಕಲಗುಂಟ ಪೊಲೀಸ್ ಅಧಿಕಾರಿಯೊಬ್ಬರು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದರು. ಸಂಬಂಧಪಟ್ಟ ಇನ್ಸ್‌ಪೆಕ್ಟರ್ 15 ನಿಮಿಷ ನಂತರ ಹೊರಬಂದರು. ಆಗಲೂ ಸುಚನಾ ಸೇಠ್ ಸುಮ್ಮನೆ ಕಾರಿನಲ್ಲಿ ಕುಳಿತಿದ್ದರು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯಿಂದಲೇ ಮಗು ಕೊಲೆ ಕೇಸ್​​; ಹಂತಕಿ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಟ್ಯಾಕ್ಸಿ ಡ್ರೈವರ್​

https://newsfirstlive.com/wp-content/uploads/2024/01/boy-death-1.jpg

Load More